More

    ಇಂದಿರಾ ಟು ಸೋನಿಯಾ: ತನಿಖಾ ಸಮಿತಿಯಿಂದ ಭ್ರಷ್ಟ ಮುಖ ಬಯಲು!

    ನವದೆಹಲಿ: ಚೀನಾದೊಂದಿಗಿನ ತನ್ನ ಹಣಕಾಸಿನ ಸಂಪರ್ಕದ ಬಗ್ಗೆ ಭಾರಿ ವಿವಾದದಲ್ಲಿ ಸಿಲುಕಿರುವ ರಾಜೀವ್ ಗಾಂಧಿ ಪ್ರತಿಷ್ಠಾನದ ಅಕ್ರಮದ ಬಗ್ಗೆ ಈಗ ಮತ್ತೊಮ್ಮೆ ಸುದ್ದಿ ಭುಗಿಲೆದ್ದಿದೆ.

    ರಾಜೀವ್ ಗಾಂಧಿ ಫೌಂಡೇಷನ್, ಇಂದಿರಾಗಾಂಧಿ ಸ್ಮಾರಕ ಟ್ರಸ್ಟ್ ಹಾಗೂ ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್‌ ಹೆಸರಿನಲ್ಲಿ ಗಾಂಧಿ ಕುಟುಂಬದವರು ನೂರಾರು ಕೋಟಿ ವಂಚನೆ ಮಾಡಿರುವುದು ಹೇಗೆ ಎಂಬ ಸ್ಫೋಟಕ ಮಾಹಿತಿಯನ್ನು ಕೇಂದ್ರ ಸರ್ಕಾರ ಅಂತರ್ ಸಚಿವಾಲಯ ಸಮಿತಿ ಬಹಿರಂಗಗೊಳಿಸಿದೆ.

    ಮನಿಲ್ಯಾಂಡರಿಂಗ್, ಆದಾಯ ತೆರಿಗೆ ಕಾಯ್ದೆ ಹಾಗೂ ವಿದೇಶಿ ಕೊಡುಗೆಗಳ ಕಾನೂನು ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಸಿಲುಕಿರುವ ಈ ಟ್ರಸ್ಟ್‌ಗಳ ತನಿಖೆಗೆ ಈ ಸಮಿತಿಯ ರಚನೆಯಾಗಿದ್ದು, ಅದೀಗ ಈ ಮಾಹಿತಿಯನ್ನು ಬಹಿರಂಗಗೊಳಿಸಿರುವುದಾಗಿ ತಿಳಿದುಬಂದಿದೆ.

    ಕಳೆದ ನಾಲ್ಕು ದಶಕಗಳಿಂದ ಸರ್ಕಾರಿ ಭೂಮಿ ಹಂಚಿಕೆ ಮಾಡುವ ನಿಯಮಗಳನ್ನು ತಮ್ಮ ಸ್ವಾರ್ಥಕ್ಕಾಗಿ ಹೇಗೆಲ್ಲಾ ಗಾಂಧಿ ಪರಿವಾರ ಬದಲಾಯಿಸುತ್ತಾ ಬಂದಿದೆ ಎಂಬ ಬಗ್ಗೆ ಎಳೆಎಳೆಯಾಗಿ ಸಮಿತಿ ಬಿಚ್ಚಿಟ್ಟಿದೆ.

    ಇದು ಶುರುವಾಗುವುದು 1975ರಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾದ ಸಂದರ್ಭದಿಂದ. ಕಾಂಗ್ರೆಸ್‌ ಪಕ್ಷದ ಕೇಂದ್ರ ಕಚೇರಿಯ ನಿರ್ಮಾಣವನ್ನು ಮಾಡುವ ಸಲುವಾಗಿ ಎರಡು ಎಕರೆ ಭೂಮಿಯನ್ನು ಇಂದಿರಾ ಸರ್ಕಾರ ಸ್ವಾಧೀನಕ್ಕೆ ಪಡೆದುಕೊಂಡಿತ್ತು. ನಂತರ ಅಲ್ಲಿ ಕೇಂದ್ರ ಕಚೇರಿಯನ್ನು ನಿರ್ಮಾಣ ಮಾಡದೇ ಸರ್ಕಾರಿ ಜಮೀನಿನ ಸ್ವಾಧೀನ ಪ್ರಕ್ರಿಯೆಯ ನಿಯಮಗಳನ್ನೇ ಬದಲಾವಣೆ ಮಾಡಲಾಯಿತು. ಈ ಬದಲಾವಣೆಯ ಮೂಲಕ ಗಾಂಧಿ ಒಡೆತನದಲ್ಲಿರುವ ಟ್ರಸ್ಟ್‌ಗಳಿಗೆ ಅನುಕೂಲ ಕಲ್ಪಿಸಿಕೊಡಲಾಗಿತ್ತು. ಈ ಸರ್ಕಾರ ಜಮೀನುನ್ನು ಉಚಿತವಾಗಿ ಗುತ್ತಿಗೆಗೆ ನೀಡುವ ಸಂಬಂಧದ ನಿಯಮ ಬದಲಾವಣೆ ಮಾಡಲಾಯಿತು.

    ಇದನ್ನೂ ಓದಿ: ಗಲ್ವಾನ್‌ ಘರ್ಷಣೆ: ಸತ್ತವರ ಸಂಖ್ಯೆ ಮುಚ್ಚಿಡಲು ಛೇ ಇದೆಂಥ ನೀಚ ಕೃತ್ಯ!

    ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಕಟ್ಟಡಕ್ಕೆ ಮಂಜೂರಾಗಿದ್ದ ಜಮೀನಿನಲ್ಲಿ ಗಾಂಧಿ ಭವನ ಟ್ರಸ್ಟ್‌ ನಿರ್ಮಿಸಲಾಯಿತು. ಈ ಜಮೀನು ಕ್ರಮೇಣ ನಾಲ್ಕು ದಶಕಗಳ ಕಾಂಗ್ರೆಸ್‌ ಅಧಿಕಾರದಲ್ಲಿ ಬದಲಾಗುತ್ತಾ ಬಂದು ನಂತರದಲ್ಲಿ ಸೋನಿಯಾಗಾಂಧಿಯವರಿಗೆ ರಾಜೀವಗಾಂಧಿ ಫೌಂಡೇಷನ್‌ ನಿರ್ಮಾಣಕ್ಕೆ ನೀಡಲಾಯಿತು.

    1976ರ ಡಿಸೆಂಬರ್‌ನಲ್ಲಿ ‘ಗಾಂಧಿ ಭವನ ಟ್ರಸ್ಟ್’ ಅನ್ನು ‘ಜವಾಹರ್ ಭವನ್ ಟ್ರಸ್ಟ್’ ಎಂದು ಮರುನಾಮಕರಣ ಮಾಡಲಾಯಿತು. ನಂತರ ಈ ಜಮೀನನ್ನು ಹೆಚ್ಚು ಅವಧಿಯವರೆಗೆ ಗುತ್ತಿಗೆಗೆ ಪಡೆಯಲಾಯಿತು. ಅಲ್ಲಿಂದ ಶುರುವಾದ ನಿಯಮ ಬದಲಾವಣೆಯ ಪರ್ವ 1988ರಲ್ಲಿ ರಾಜೀವ ಗಾಂಧಿ ಅವರು ಪ್ರಧಾನಿಯಾಗುವವರೆಗೆ ಮುಂದುವರೆಯಿತು.

    1988ರ ಸೆಪ್ಟೆಂಬರ್‌ನಲ್ಲಿ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ, ಭೂ ಹಂಚಿಕೆಯ ನಿಯಮಗಳನ್ನು ಪುನಃ ಬದಲಾವಣೆ ಮಾಡಲಾಯಿತು. ಈ ಸರ್ಕಾರಿ ಜಮೀನು ಗಾಂಧಿ ಪರಿವಾರದವರು ನಡೆಸುವ ಟ್ರಸ್ಟ್‌ಗೆ ಉಚಿತವಾಗಿ ದೊರಕುವಂತೆ ಮಾಡಲಾಯಿತು.

    ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, 1995ರಲ್ಲಿ ಜವಾಹರಲಾಲ್‌ ನೆಹರು ಟ್ರಸ್ಟ್‌ಗೆ ಹಂಚಿಕೆಯಾದ ಭೂಮಿಯನ್ನು ‘ರಾಜೀವ್ ಗಾಂಧಿ ಫೌಂಡೇಶನ್’ ಎಂಬ ಇನ್ನೊಂದು ಘಟಕಕ್ಕೆ ಉಚಿತವಾಗಿ ಬಾಡಿಗೆಗೆ ನೀಡಲಾಯಿತು.

    ನಾಲ್ಕನೇ ಬಾರಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನಿಯಮ ಬದಲಾವಣೆಯಾದದ್ದು 2014ರ ಮೇ ತಿಂಗಳಿನಲ್ಲಿ. ಯುಪಿಎ ಸರ್ಕಾರ ತನ್ನ ಅಧಿಕಾರವನ್ನು ಕಳೆದುಕೊಳ್ಳುವ ಸ್ವಲ್ಪ ಸಮಯದ ಮೊದಲು ಸೋನಿಯಾಗಾಂಧಿಯವರು ಈ ಜಮೀನನ್ನು ಗಾಂಧಿ ಪರಿವಾರದ ಕಂಟ್ರೋಲ್‌ನಲ್ಲಿ ಇರುವ ನಾಲ್ಕು

    ಈ ಜಾಗದಲ್ಲಿ ಕಾಂಗ್ರೆಸ್‌ ಪಕ್ಷದ ಸೇವಾ ದಳದ ಘಟಕವನ್ನು ಸ್ಥಾಪಿಸಲಾಯಿತು. ನಂತರ ರಾಜೀವಗಾಂಧಿ ಫೌಂಡೇಷನ್‌ಗೆ ನೀಡುವ ಸಲುವಾಗಿ ಸೇವಾ ದಳವನ್ನು ಬಂದ್‌ ಮಾಡಲಾಯಿತು. ಅಲ್ಲೀಗ ರಾಷ್ಟ್ರ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಹಿಂದೂ ವಿರೋಧಿ ಗಲಭೆಗಳಲ್ಲಿ ಗುರುತಿಸಿಕೊಂಡಿರುವ ಉಮರ್ ಖಾಲಿದ್‌, ಕನ್ಹಯ್ಯ ಕುಮಾರ್, ಮಾಜಿ ಸಿಮಿ ಭಯೋತ್ಪಾದಕ ಎಸ್‌ಕ್ಯೂಆರ್ ಇಲ್ಯಾಸ್ ಇತ್ಯಾದಿ ಆರೋಪಿಗಳಿಗೆ ಜಾಗ ಕೊಡಲಾಗಿದೆ.

    ಆದರೆ ಅಚ್ಚರಿಯ ಸಂಗತಿ ಎಂದರೆ ಯುಪಿಎ ಸರ್ಕಾರವಿದ್ದಾಗ ರಾಜೀವಗಾಂಧಿ ಫೌಂಡೇಷನ್‌ನ ಒಡೆತನದಲ್ಲಿರುವ ಸೋನಿಯಾಂಧಿಯವರು ಚೀನಾ ಸರ್ಕಾರದಿಂದ ಧನಸಹಾಯ ಪಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

    ಭೂಮಿಯೊಳಗಿಂದ ಮನುಷ್ಯರ ಚೀರಾಟ? ಬೆಚ್ಚಿಬಿದ್ದಿದ್ದಾರೆ ಚೀನಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts