More

    ಶಿವಪುರದಲ್ಲಿ ಸಂಸ್ಥಾಪನಾ ದಿನ, ಕಾಂಗ್ರೆಸ್ ಶಕ್ತಿ ಪ್ರದರ್ಶನ: ಮೇಕೆದಾಟು ಅಭಿಯಾನ, ಮುಂಬರುವ ಚುನಾವಣೆಗೆ ಕಹಳೆ

    ಮದ್ದೂರು: ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಿಸುವ ಮೂಲಕ ಕೈ ನಾಯಕರು ಮಂಗಳವಾರ ಶಕ್ತಿ ಪ್ರದರ್ಶನ ಮಾಡಿದರು. ಹಾಗೆಯೇ, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಕಹಳೆ ಊದಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಸಾವಿರಾರು ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಪ್ರಮುಖ ಬೀದಿಗಳ ಮೂಲಕ ಸತ್ಯಾಗ್ರಹ ಸೌಧದವರೆಗೆ ಮೆರವಣಿಗೆ ನಡೆಸಿದರು. ನಂತರ ಇತಿಹಾಸ ಪ್ರಸಿದ್ಧ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿ ವಿರುದ್ಧ ಡಿಕೆಶಿ ಕೆಂಡಾಮಂಡಲರಾದರು. ಸಿಟ್ಟಿನಿಂದ ಮೊಬೈಲ್ ಕಸಿದುಕೊಳ್ಳಲು ಮುಂದಾದಾಗ ಮುಖಂಡರು, ಆ ಕಾರ್ಯಕರ್ತನನ್ನು ದೂರ ಕಳುಹಿಸಿದರು. ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆ ಕೆಳಗೆ ಕುಳಿತಿದ್ದ ಡಿಕೆಶಿ ಅವರಿಗೆ ಸಾಧುವೊಬ್ಬರು ಆಶೀರ್ವಾದ ಮಾಡಲು ಮುಂದಾದಾಗ, ಅವರಿಗೆ ಕೈ ಮುಗಿದು ವಾಪಸ್ ಕಳುಹಿಸಿದರು. ಇನ್ನು ಕೋವಿಡ್ ನಿಯಮ ಉಲ್ಲಂಘನೆಯಾಗುತ್ತಿದ್ದರೂ ಯಾವ ಅಧಿಕಾರಿಯೂ ತಲೆಕೆಡಿಸಿಕೊಳ್ಳಲಿಲ್ಲ. ಪಕ್ಷದ ಎಲ್ಲ ನಾಯಕರು ಗಾಂಧಿ ಟೋಪಿ ಹಾಕಿಕೊಂಡಿದ್ದು ವಿಶೇಷ. ಮಾಜಿ ಸಿಎಂ ಎಂ.ವೀಪ್ಪ ಮೊಯ್ಲಿ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್. ಧ್ರುವನಾರಾಯಣ, ಸಲೀಂ ಅಹಮದ್, ರಾಮಲಿಂಗರೆಡ್ಡಿ, ಮಾಜಿ ಸಚಿವರಾದ ಮೋಟಮ್ಮ, ಯು.ಟಿ.ಖಾದರ್, ಎನ್.ಚಲುವರಾಯಸ್ವಾಮಿ, ಎಚ್.ಸಿ.ಮಹದೇವಪ್ಪ, ಜಯಚಂದ್ರ, ಉಮಾಶ್ರೀ, ಎಂ.ಎಸ್.ಆತ್ಮಾನಂದ, ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ದಿನೇಶ್ ಗೂಳಿಗೌಡ, ನಾರಾಯಣಸ್ವಾಮಿ ಇತರರಿದ್ದರು.

    ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಗರ ಪಾಲು ಶೂನ್ಯ: ಭಾರತೀಯರ ಕಷ್ಟ-ಸುಖ ಆಲಿಸಲು ಹುಟ್ಟಿದ ಪಕ್ಷ ಕಾಂಗ್ರೆಸ್. ಬ್ರಿಟಿಷ್ ಸರ್ಕಾರದ ದುರಾಡಳಿತದ ವಿರುದ್ಧ ಹೋರಾಟಕ್ಕೆ ಹುಟ್ಟಿದ ಸಂಘಟನೆ ಕಾಂಗ್ರೆಸ್. ಬ್ರಿಟಿಷರ ಆದೇಶವನ್ನೇ ಮೈಸೂರು ಮಹಾರಾಜರು ಪಾಲನೆ ಮಾಡಬೇಕಿತ್ತು. ಬ್ರಿಟಿಷರ ವಿರುದ್ಧ ಎದೆ ಕೊಟ್ಟ, ರಕ್ತ ಸುರಿಸಿದ ಜನರ ಶ್ರಮದ ಫಲವೇ ನಾವು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣ್ಣಿಸಿದರು. ನರೇಂದ್ರ ಮೋದಿ ಪ್ರಧಾನಿ ಆಗಿರುವುದು ಸ್ವಾತಂತ್ರ್ಯ ಹೋರಾಟಗಾರರ ಶ್ರಮದಿಂದ. ಆರ್​ಎಸ್​ಎಸ್​ನವರು ಯಾರೂ ಸ್ವಾತಂತ್ರ್ಯ್ಕೆ ಹೋರಾಟ ಮಾಡಲಿಲ್ಲ, ಪ್ರಾಣ ಕೊಡಲಿಲ್ಲ. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಗರ ಪಾಲು ಶೂನ್ಯ. ಅಂತಹವರು ಇಂದು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

    ಹೋರಾಟವೇ ನಮ್ಮ ಧ್ಯೇಯ: ಪ್ರಪಂಚದಲ್ಲೇ ದೊಡ್ಡ ಪ್ರಜಾಪ್ರಭುತ್ವ ಕೊಟ್ಟಿದ್ದು ಕಾಂಗ್ರೆಸ್. ನಮ್ಮ ಪಕ್ಷದ ಇತಿಹಾಸ ಈ ದೇಶದ ಇತಿಹಾಸ. ನಮ್ಮ ಇತಿಹಾಸಕ್ಕೂ, ಬಿಜೆಪಿ ಇತಿಹಾಸಕ್ಕೂ ಬಹಳ ವ್ಯತ್ಯಾಸವಿದೆ. ನಮ್ಮದು ತ್ಯಾಗ, ಬಲಿದಾನದ ಇತಿಹಾಸ. ಕಾಂಗ್ರೆಸ್ ಎಂದಿಗೂ ಅಧಿಕಾರಕ್ಕಾಗಿ ಕುಳಿತಿಲ್ಲ. ಅಧಿಕಾರ ಇಲ್ಲದಿದ್ದರೂ ದೇಶಕ್ಕಾಗಿ ಹೋರಾಟ ಮಾಡುವುದು ನಮ್ಮ ಧ್ಯೇಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಕಾವೇರಿ ಉಳಿವಿಗಾಗಿ ಮೇಕೆದಾಟು ಯೋಜನೆ ಅಗತ್ಯ. ಪ್ರತಿಯೊಬ್ಬರಿಗಾಗಿ ಮೇಕೆದಾಟು ಅಭಿಯಾನ ಮಾಡಲಾಗುತ್ತಿದೆ. ಮಂಡ್ಯದವರ ಚಡ್ಡಿ ಮೆರವಣಿಗೆ ಗಮನಿಸಿದ್ದೇನೆ. ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಕಿಚ್ಚು ಕೇಳಿದ್ದೇನೆ. ಮತ್ತೊಮ್ಮೆ ಆ ರೀತಿಯ ಹೋರಾಟದ ಕಿಚ್ಚು ನಿಮ್ಮ ಮೇಲಿದೆ ಎಂದರು. ಮೇಕೆದಾಟು ಯೋಜನೆಯನ್ನು ಎಚ್.ಡಿ.ಕುಮಾರಸ್ವಾಮಿ ಟೀಕೆ ಮಾಡುತ್ತಿದ್ದಾರೆ. ಅವರ ಟೀಕೆಯಿಂದ ನಮಗೆ ಬೇಸರವಿಲ್ಲ. ಬೇಕಿದ್ದರೆ ಕುಮಾರಸ್ವಾಮಿನೂ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಅವರ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿ ಎಂದು ಕರೆ ನೀಡಿದರು.

    25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!

    ಕೊನೆಗೂ ಹೊರಬಿತ್ತು ಪುನೀತ್ ರಾಜಕುಮಾರ್ ಡೈರಿಯಲ್ಲಿದ್ದ ಆ ನಿರ್ಮಾಪಕರ ಹೆಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts