More

    ಗೆಹ್ಲೋಟ್​ ಸರ್ಕಾರ ಉರುಳಿಸಲು ಹುನ್ನಾರ; ಕೇಂದ್ರ ಸಚಿವರ ವಿರುದ್ಧ ಕಾಂಗ್ರೆಸ್​ ಆರೋಪ

    ನವದೆಹಲಿ: ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಗಜೇಂದ್ರ ಶೇಖಾವತ್​ ವಿರುದ್ಧ ಕಾಂಗ್ರೆಸ್​ ಆರೋಪಿಸಿದೆ. ಈ ತಪ್ಪಿಗಾಗಿ ಅವರ ವಿರುದ್ಧ ಎಫ್​ಐಆರ್​ ದಾಖಲಿಸಬೇಕು ಎಂದು ಆಗ್ರಹಿಸಿದೆ.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್​ ವಕ್ತಾರ ರಣದೀಪ್​ ಸಿಂಗ್​ ಸುರ್ಜೇವಾಲಾ ಈ ಆರೋಪ ಮಾಡಿದ್ದು, ಶೇಖಾವತ್​ ವಿರುದ್ಧ ಎಫ್​ಐಆರ್​ ದಾಖಲಿಸಲು ಆಗ್ರಹಿಸಿದರು. ಜತೆಗೆ ಗೆಹ್ಲೋಟ್​ ಸರ್ಕಾರವನ್ನು ಉರುಳಿಸಲು ಹುನ್ನಾರ ನಡೆಸಿ, ಶೇಖಾವತ್​ ಕೆಲ ಕಾಂಗ್ರೆಸ್​ ಶಾಸಕರೊಂದಿಗೆ ನಡೆಸಿದ್ದಾರೆ ಎನ್ನಲಾದ ದೂರವಾಣಿ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಿದರು.

    ಇದನ್ನೂ ಓದಿ: 13,960 ಕೋಟಿ ರೂ. ಸಾಲ ತೀರುವಳಿ ಪ್ಯಾಕೇಜ್​, ಕಿಂಗ್​ ಆಫ್​ ಗುಡ್​ ಟೈಮ್ಸ್​ನ ಮತ್ತೊಂದು ದಾಳ

    ಗೆಹ್ಲೋಟ್​ ಸರ್ಕಾರವನ್ನು ಉರುಳಿಸಲು ಶೇಖಾವತ್​ ಅವರು ಕಾಂಗ್ರೆಸ್​ ಶಾಸಕ ಭನ್ವರ್​ಲಾಲ್​ ಶರ್ಮ ಅವರ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಇದರ ರೆಕಾರ್ಡಿಂಗ್​ ತಮ್ಮ ಬಳಿ ಇರುವುದಾಗಿಯೂ, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಜತೆಗೆ ಸಂಚುಕೋರ ಶಾಸಕ ಭನ್ವರ್​ಲಾಲ್​ ಶರ್ಮ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಪಕ್ಷದ ಹೈಕಮಾಂಡ್​ಗೆ ಮನವಿ ಮಾಡಿಕೊಂಡರು.

    ಈ ಹುನ್ನಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮಾಜಿ ಸಚಿವ ಹಾಗೂ ಕಾಂಗ್ರಸ್​ ಶಾಸಕ ವಿಶ್ವೇಂದ್ರ ಸಿಂಗ್​ ಅವರ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿರುವುದಾಗಿ ಹೇಳಿದರು.

    ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ಡ್ರೋನ್ ಪ್ರತಾಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts