More

    ಸಿಎಂ ಆಯ್ಕೆ ವಿಚಾರ: ತಡರಾತ್ರಿಯವರೆಗೂ ನಡೆಯಲಿದೆ ಮಹತ್ವದ ಈ ಕೆಲಸ!

    ಬೆಂಗಳೂರು: ಪೂರ್ಣ ಬಹುಮತದೊಂದಿಗೆ ಗೆದ್ದಿರುವ ಕಾಂಗ್ರೆಸ್​ಗೆ ಈಗ ಮುಖ್ಯಮಂತ್ರಿ ಆಯ್ಕೆ ವಿಚಾರವೇ ಕಗ್ಗಂಟಾಗಿ ಪರಿಣಮಿಸಿದ್ದು, ಇಂದು ಶಾಸಕಾಂಗ ಪಕ್ಷದ ಸಭೆಯಲ್ಲೂ ಆ ಕುರಿತು ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಈ ಮಧ್ಯೆ ಅದಕ್ಕಾಗಿ ಮಹತ್ವದ ಕೆಲಸವೊಂದು ನಡೆಯುತ್ತಿದೆ.

    ದೆಹಲಿಯಿಂದ ಆಗಮಿಸಿದ್ದ ಎಐಸಿಸಿ ವೀಕ್ಷಕರು ಸಭೆಯಲ್ಲಿ ಒಂದು ಸುತ್ತಿನ ಅಭಿಪ್ರಾಯ ಸಂಗ್ರಹಿಸಿ ಚರ್ಚೆ ಮಾಡಿದ್ದರೂ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಯಾರನ್ನು ಮುಖ್ಯಮಂತ್ರಿ ಆಗಿಸಬೇಕು ಎಂಬುದು ಹೈಕಮಾಂಡ್​ಗೇ ಬಿಟ್ಟಿದ್ದು ಎಂಬ ನಿರ್ಣಯಕ್ಕೆ ಬರಲಾಗಿತ್ತು.

    ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಕಾಂಗ್ರೆಸ್​​ನ ಎಲ್ಲ ಶಾಸಕರಿಂದ ಸಹಿ ಮಾಡಿಸಿಕೊಳ್ಳಲಾಗಿತ್ತು. ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಆ ಬಳಿಕವೂ ಮತ್ತೆ ವೈಯಕ್ತಿಕವಾಗಿ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸ ನಡೆಯುತ್ತಿದೆ.

    ಶಾಸಕರನ್ನು ಪ್ರತ್ಯೇಕವಾಗಿ ಕರೆಸಿ ಮಾತನಾಡುತ್ತಿರುವ ವೀಕ್ಷಕರು, ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಯಾರು ಸಿಎಂ ಆಗಬೇಕು ಎಂಬ ಅಭಿಪ್ರಾಯ ಕೇಳುತ್ತಿದ್ದಾರೆ. ಇಬ್ಬರ ಪರ ಒಲವಿದ್ದರೂ ತಿಳಿಸಿ ಎಂದಿರುವ ವೀಕ್ಷಕರು ಇಬ್ಬರ ಹೊರತಾಗಿ ಬೇರೆ ಆಯ್ಕೆ ಇದ್ದರೂ ತಿಳಿಸಿ ಎಂದೂ ಹೇಳಿದ್ದಾರೆ. ಅಲ್ಲದೆ ತಟಸ್ಥವಾಗಿ ಉಳಿಯುವುದಿದ್ದರೂ ಆ ಬಗ್ಗೆಯೂ ಹೇಳಿ ಎಂಬ ಆಯ್ಕೆಗಳೊಂದಿಗೆ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಇಂದು ಎಷ್ಟು ಸಾಧ್ಯವೋ ಅಷ್ಟು ಅಭಿಪ್ರಾಯ ಸಂಗ್ರಹಕ್ಕೆ ನಿರ್ಧರಿಸಿರುವುದರಿಂದ ತಡರಾತ್ರಿಯವರೆಗೂ ಈ ಮಹತ್ವದ ಕೆಲಸ ನಡೆಯುವ ಲಕ್ಷಣಗಳು ಗೋಚರಿಸಿವೆ. ಶಾಸಕರ ಅಭಿಪ್ರಾಯದೊಂದಿಗೆ ವೀಕ್ಷಕರು ನಾಳೆ ದೆಹಲಿಗೆ ತೆರಳಲಿದ್ದು, ಆ ಬಳಿಕ ಸಿಎಂ ಆಯ್ಕೆ ನಿರ್ಣಾಯಕ ಹಂತಕ್ಕೆ ಬರಲಿದೆ.

    ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ: ಸಿಎಂ ಆಯ್ಕೆ ಕುರಿತು ಆಯ್ತು ಈ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts