More

    ರಸ್ತೆಗುಂಡಿ-ಚರಂಡಿ ಸಮಸ್ಯೆ ಬಿಟ್ಟು ಲವ್ ಜಿಹಾದ್ ವಿರುದ್ಧ ಹೋರಾಡಿ ಎಂದ ನಳಿನ್ ಕುಮಾರ್ ಕಟೀಲ್ ವಿರುದ್ಧ ಭುಗಿಲೆದ್ದ ಆಕ್ರೋಶ

    ಬೆಂಗಳೂರು: ಬಿಜೆಪಿ ಪಕ್ಷದ ಕಾರ್ಯಕರ್ತರು ರಸ್ತೆ ಮತ್ತು ಚರಂಡಿ ಸಮಸ್ಯೆಗಳನ್ನು ಬಿಟ್ಟು ಲವ್ ಜಿಹಾದ್ ವಿಷಯದ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿಗರ ಅಜೆಂಡಾವೇ ಜನರ ಭಾವನೆ ಎಂದು ಕಾಂಗ್ರೆಸ್​ ಟೀಕಿಸಿದೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ನಳಿನ್ ಕುಮಾರ್​ ಕಟೀಲ್​ರ ಬಾಯಲ್ಲಿ ಇದೆಂಥಾ ಮಾತು? ಬಿಜೆಪಿಗೆ ಅಭಿವೃದ್ಧಿಗೆ ಬೇಡ್ವಾ? ಎಂದು ಜನತೆಯೂ ಆಕ್ರೋಶಗೊಂಡಿದ್ದಾರೆ. ರಸ್ತೆ ಗುಂಡಿಗಳಿಗೆ ಒಬ್ಬರಲ್ಲ ಒಬ್ಬರು ಬಲಿಯಾಗುತ್ತಲೇ ಇದ್ದಾರೆ. ರಸ್ತೆ ಗುಂಡಿಗಳು, ತೆರೆದ ಚರಂಡಿಗಳು ದೊಡ್ಡ ಸಮಸ್ಯೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಂಸದರಿಗೆ ಇದು ಸಮಸ್ಯೆಯೇ ಅಲ್ಲವಂತೆ..!

    ಏನಿದು ಪ್ರಕರಣ?: ಮಂಗಳೂರಿನಲ್ಲಿ ‘ಬೂತ್ ವಿಜಯ ಅಭಿಯಾನ’ದ ಅಂಗವಾಗಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಟೀಲ್​​, ಚರಂಡಿ -ಮೋರಿ ಸಣ್ಣ ವಿಚಾರಗಳು. ಇಂತಹ ಸಣ್ಣ ವಿಚಾರಗಳ ಬಗ್ಗೆ ಚರ್ಚೆ ಮಾಡ್ಬೇಡಿ. ಲವ್​ ಜಿಹಾದ್​ ಬಗ್ಗೆ ಮಾತಾಡಿ. ನಿಮಗೆ ನಿಮ್ಮ ಮಕ್ಕಳ ಭವಿಷ್ಯದ ಚಿಂತೆಯಿದ್ದರೆ ಲವ್ ಜಿಹಾದ್ ನಿಲ್ಲಿಸಬೇಕು. ಲವ್​ ಜಿಹಾದ್ ಅನ್ನು ನಿಲ್ಲಿಸಬೇಕು ಅಂದ್ರೆ ಭಾರತೀಯ ಜನತಾ ಪಾರ್ಟಿ ಬೇಕು. ಗೋಹತ್ಯೆ ವಿರುದ್ಧ ಕಾನೂನು ತಂದಿದ್ದು, ಮತಾಂತರದ ವಿರುದ್ಧ ಕಾನೂನು ತಂದದ್ದು ಬಿಜೆಪಿ, ಲವ್ ಜಿಹಾದ್ ವಿರುದ್ಧ ಕಾನೂನು ತರುವುದು ಬಿಜೆಪಿಯೇ ಎಂದಿದ್ದರು.

    ‘ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ’ ಇದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿ. ಧರ್ಮ, ದ್ವೇಷಗಳ ಮೊರೆ ಹೋಗಲು ತೀರ್ಮಾನಿಸಿದ @BJP4Karnataka ತಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದೆ, ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂಬುದನ್ನು ಘಂಟಾಘೋಷವಾಗಿ ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್​ ಟೀಕಿಸಿದೆ.

    ರಸ್ತೆ, ಗುಂಡಿ, ಚರಂಡಿ ಬಗ್ಗೆ ಆಲೋಚನೆ ಮಾಡಬೇಡಿ ಅಂತ ಭಾವನಾತ್ಮಕ ವಿಚಾರವನ್ನ ಕಟೀಲ್​ ತಂದಿದ್ದಾರೆ. ರಸ್ತೆ, ಗುಂಡಿ ಸರಿ ಮಾಡುವ ಅರ್ಹತೆ ಮತ್ತು ಯೋಗ್ಯತೆ ಇವರಿಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಕುಚಲಕ್ಕಿ ತರಲು ಯೋಗ್ಯತೆ ಇಲ್ಲದ ಇವರು ಜನಪ್ರತಿನಿಧಿಗಳಾ? ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದಾರೆ, ಡಬಲ್ ಇಂಜಿನ್ ಸರ್ಕಾರದ ಫ್ಯೂಲ್ ಕಮ್ಯೂನಲ್ ಫ್ಯೂಲ್. ಅವರ ಸೈಲೆನ್ಸರ್ ಹೊಗೆ ವಿಷ, ಅದು ಯಾರನ್ನೂ ‌ಬದುಕಿಸಲ್ಲ. ಅವರ ಇಂಜಿನ್ ಕಟ್ಟಿದ್ದು ಜನ ಸಾಮಾನ್ಯರ ಕಣ್ಣೀರಿನಲ್ಲಿ. ಇನ್ಮುಂದೆ ಇವರ ಇಂಜಿನ್ ನನ್ನ ಜನ ಕಿತ್ತು ಬಿಸಾಡ್ತಾರೆ. ಇವರು ಜಾತಿ ಧರ್ಮ ಆಧಾರದಲ್ಲಿ ವಿಭಾಗ ಮಾಡುವವರು. ಬಿರುಕು ಮೂಡಿಸಲು ಇವರು ಇದನ್ನೆಲ್ಲಾ ಮಾಡ್ತಾ ಇದಾರೆ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಕ್ರೋಶ ಹೊರಹಾಕಿದ್ದಾರೆ.

    ಆನೇಕಲ್​ನಲ್ಲಿ ಈ ನಾಗರಹಾವಿನ ನಡೆಯೇ ವಿಚಿತ್ರ-ವಿಸ್ಮಯ! ಹಾವು ನೋಡಲು ಜನವೋ ಜನ

    ರಾತ್ರಿ ಪಾಳಿಯ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಬಂದ ಪೊಲೀಸ್​ ಹೆಡ್​ ಕಾನ್​ಸ್ಟೇಬಲ್​ ಹೃದಯಾಘಾತದಿಂದ ಸಾವು

    ಮಂಡ್ಯದಲ್ಲಿ ಜಮೀನು ವಿವಾದ: ಹೊಲದಲ್ಲೇ ದಂಪತಿ ಮೇಲೆ ಕಾರು ಹರಿಸಿದ ದುಷ್ಕರ್ಮಿಗಳು! ಪತ್ನಿ ಸಾವು, ಪತಿ ಸ್ಥಿತಿ ಚಿಂತಾಜನಕ

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts