More

    ಸೂರಿಲ್ಲದವರಿಗೆ ಮನೆ ನಿರ್ಮಾಣದ ಗುರಿ: ಶಾಸಕ ರವಿಕುಮಾರ್ ಗಣಿಗ ಭರವಸೆ

    ಮಂಡ್ಯ: ಗುಡಿಸಲು ಮುಕ್ತ ಹಾಗೂ ಮನೆ ಇಲ್ಲದ ಬಡವರಿಗಾಗಿ ನಾಲ್ಕು ಸಾವಿರ ಮನೆ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.
    ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಟೈಲರ್ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ಸಂಘದ ವಾರ್ಷಿಕೋತ್ಸವ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಗುಡಿಸಲು ಇರಬಾರದು. ಅತಿ ಬಡವರು ಹಾಗೂ ಬಾಡಿಗೆ ಮನೆಯಲ್ಲಿರುವ ಬಡವರಿಗೂ ಅನ್ವಯವಾಗಲಿ ಎನ್ನುವ ಕಾರಣಕ್ಕೆ ನಾಲ್ಕು ಸಾವಿರ ಮನೆಗಳ ನಿರ್ಮಾಣ ಮಾಡಲಾಗುವುದು. ಈ ಸಂಬಂಧ ಸಧ್ಯದಲ್ಲೇ ಸ್ಥಳ ಪರಿಶೀಲನೆ ನಡೆಯಲಿದೆ ಎಂದು ಹೇಳಿದರು.
    ಸಾರ್ವಜನಿಕರು ನೇರವಾಗಿ ನನ್ನ ಮನೆ ಅಥವಾ ಕಚೇರಿಗೆ ಬಂದು ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಬಹುದು. ಟೈಲರ್ ಅಸೋಸಿಯೇಷನ್‌ನಿಂದ ಐದು ಬೇಡಿಕೆಗಳ ಸಲ್ಲಿಸಲಾಗಿದೆ. ಪ್ರಮುಖವಾಗಿ ನಿಮ್ಮ ಸಂಘದ ಕಟ್ಟಡಕ್ಕೆ ಸ್ಥಳ ನೀಡಲಾಗುವುದು. ಜತೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪೌರಕಾರ್ಮಿಕರು, ಆಟೋ ಚಾಲಕರು, ಟೈಲರ್‌ಗಳು ಸೇರಿದಂತೆ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
    ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಟಿ.ಎನ್.ಹರ್ಷ ಪೇಟ್ಕರ್ ಮಾತನಾಡಿ, ಟೈಲರ್‌ಗಳು ಸಂಕಷ್ಟದಲ್ಲಿದ್ದಾರೆ. ಆದರೂ ಸರ್ಕಾರದಿಂದ ಯಾವುದೇ ಯೋಜನೆ ಜಾರಿಯಾಗದೇ ಇರುವುದು ದುರಂತ. ಹಲವು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದರೂ ಸಹ ಪ್ರಯೋಜನವಾಗಿಲ್ಲ. ಇನ್ನಾದರೂ ನಮ್ಮ ಕಷ್ಟ ಕೇಳಬೇಕು ಎಂದು ಮನವಿ ಮಾಡಿದರು.
    ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಪುನೀತ್‌ಕುಮಾರ್, ಉಪಾಧ್ಯಕ್ಷ ಎಚ್.ಎಂ.ತಿಮ್ಮೇಗೌಡ, ಖಜಾಂಚಿ ರಫೀಕ್ ಅಹಮದ್, ಸ್ವಾಮಿ, ಉಮೇಶ್, ವಿಜಯಕುಮಾ ಇತರರಿದ್ದರು. ಇದೇ ವೇಳೆ ಶಾಸಕ ರವಿಕುಮಾರ್ ಗಣಿಗ ಅವರನ್ನು ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts