More

    ಜು.22ರಂದು ಕಾರಸವಾಡಿ ಮಹದೇವು-50 ಸಿಂಹಾವಲೋಕನ: ಅಭಿನಂದನಾ ಸಮಿತಿ ಅಧ್ಯಕ್ಷ ಅಶೋಕ್ ಜಯರಾಂ ಮಾಹಿತಿ

    ಮಂಡ್ಯ: ಒಡನಾಡಿ ಅಭಿನಂದನಾ ಸಮಿತಿ ವತಿಯಿಂದ ‘ಕಾರಸವಾಡಿ ಮಹದೇವು-50 ಸಿಂಹಾವಲೋಕನ-ಅಭಿನಂದನಾ ಸಂಭ್ರಮ’, ವರ್ತಮಾನದಲ್ಲಿ ವಿದ್ಯಾರ್ಥಿ-ಯುವಜನತೆಯ ಸಮಸ್ಯೆ-ಸವಾಲು-ಸಾಧನೆ, ಚಿಂತನೆ-ಮಂಥನ-ಉತ್ಥಾನ ಹಾಗೂ ಸಂವಾದ ಕಾರ್ಯಕ್ರಮ ಜು.22ರಂದು ನಗರದ ರೈತ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಅಶೋಕ್ ಜಯರಾಂ ತಿಳಿಸಿದರು.
    ಅಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸಮಾರಂಭ ಉದ್ಘಾಟಿಸುವರು. ಫೇವಾರ್ಡ್ ಕೆ ಅಧ್ಯಕ್ಷ ಮಹೇಶ್‌ಚಂದ್ರಗುರು ಅಧ್ಯಕ್ಷತೆ ವಹಿಸುವರು. ಜಿ.ಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ರಾಷ್ಟ್ರಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಸಮಾರಂಭದಲ್ಲಿ ಭಾಗವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ವಿದ್ಯಾರ್ಥಿ ಜೀವನ, ಯುವಜನ ಸಾಂಸ್ಥಿಕ ಚಟುವಟಿಕೆ, ಸಾಂಸ್ಕೃತಿಕ ಸಂಚಲನ ಅವಲೋಕನ ಕಾರ್ಯಕ್ರಮವಿರಲಿದೆ. ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ, ಯುವ ತರಬೇತುದಾರ ನ.ಲಿ.ಕೃಷ್ಣ, ಸಾಂಸ್ಕೃತಿಕ ಪರಿಚಾರಕ ಲೋಕೇಶ್ ವಳಗೆರೆಹಳ್ಳಿ ಅವರು ಹಿಂದೆ ಹೇಗಿತ್ತು ಚಿಂತನ ಕುರಿತು ಮಾನತಾಡುವರು. ಶಿಕ್ಷಣ ತಜ್ಞ ಡಾ.ಎಸ್.ಬಿ.ಶಂಕರೇಗೌಡ ಅವರು ‘ಈಗ ಏನಾಗುತ್ತಿದೆ ಮಂಥನ’, ಸುಸ್ಥಿರ ಅಭಿವೃದ್ಧಿ ಚಿಂತಕ ಯೋಗೇಸ್ ಅಪ್ಪಾಜಯ್ಯ ಅವರು ‘ಮುಂದೆ ಏನಾಗಬೇಕು, ಹೇಗಾಗಬೇಕು ಉತ್ಥಾನ’ ಕುರಿತು ವಿಷಯ ಮಂಡಿಸುವರು ಎಂದರು.
    ಬೆಳಗ್ಗೆ 11.30ಕ್ಕೆ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರಸವಾಡಿ ಮಹದೇವು ಮತ್ತು ಹರಿಣಿ ಮಹದೇವ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿನಂದಿಸುವರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಯುವ ಚಿಂತಕ ಕುಮಾರ್ ಕೊಪ್ಪ ಅಭಿನಂದನಾ ಭಾಷಣ ಮಾಡುವರು. ಸಮಿತಿ ಅಧ್ಯಕ್ಷ ಅಶೋಕ್ ಜಯರಾಂ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ ಭಾಗವಹಿಸುವರು ಎಂದು ಹೇಳಿದರು.
    ಸಮಿತಿಯ ದೇವರಾಜ್ ಕೊಪ್ಪ, ಕೀಲಾರ ಕೃಷ್ಣೇಗೌಡ, ಚಾಮನಹಳ್ಳಿ ಮಂಜು, ಪುಟ್ಟಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts