More

    ಶಿವಗಣಾರಾಧನೆ ಬಳಿಕ ಅಂತ್ಯಸಂಸ್ಕಾರಕ್ಕೆ ಆಹ್ವಾನ

    ನರೇಗಲ್ಲ: ಜಿಮ್್ಸ ಸಿಬ್ಬಂದಿ ಎಡವಟ್ಟಿನಿಂದ ಮಗನೇ ತನ್ನ ತಾಯಿಯ ಮೃತ ದೇಹದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕರುಣಾಜನಕ ಘಟನೆ ಗುರುವಾರ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಕೋಳಿ ಫಾಮ್ರ್ ಹತ್ತಿರದ 70 ವರ್ಷದ ವೃದ್ಧೆಗೆ ಜು. 15ರಂದು ಪಾರ್ಶ್ವವಾಯು ಬಾಧಿಸಿದ ಹಿನ್ನೆಲೆಯಲ್ಲಿ ಗದಗ ಜಿಮ್್ಸ ಗೆ ದಾಖಲಿಸಲಾಗಿತ್ತು. ಜು. 18ರಂದು ಕರೊನಾ ತಪಾಸಣೆ ಮಾಡಿದ್ದು, ಜು. 20ರಂದು ಕರೊನಾ ಪಾಸಿಟಿವ್ ವರದಿ ಬಂದಿತ್ತು. ಜು. 20ರಂದು ಕೋವಿಡ್ ಆಸ್ಪತ್ರೆಗೆ ತೆರಳಿದ ವೃದ್ಧೆಯ ಪುತ್ರ ಪರಸಪ್ಪ ವೀರಪ್ಪ ಗಡ್ಡದ ಅವರಿಗೆ ‘ನಿಮ್ಮ ತಾಯಿ ಮೃತಪಟ್ಟಿದ್ದು, ಅವಳ ಅಂತ್ಯ ಸಂಸ್ಕಾರ ಮಾಡಲಾಗಿದೆ’ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ.

    ಇದರಿಂದ ಆಘಾತಕ್ಕೊಳಗಾದ ವೃದ್ಧೆಯ ಪುತ್ರ ಸ್ವಂತ ತಾಯಿಯ ಅಂತ್ಯಕ್ರಿಯೆಯನ್ನೂ ಮಾಡಲಾಗಲಿಲ್ಲ ಎಂದು ನೊಂದುಕೊಂಡು ಜು. 29ರಂದು ತಾಯಿಯ ಶಿವಗಣಾರಾಧನೆ ಮಾಡಿದ್ದಾರೆ. ಆದರೆ, ಗುರುವಾರ ಬೆಳಗ್ಗೆ ಪ.ಪಂ. ಸಿಬ್ಬಂದಿ ಮೃತ ವೃದ್ಧೆಯ ಮನೆಗೆ ಬಂದು ನಿಮ್ಮ ತಾಯಿಯು ಬುಧವಾರ ರಾತ್ರಿ 12.03 ಗಂಟೆಗೆ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ನರೇಗಲ್ಲನ ರುದ್ರಭೂಮಿಯಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ಮತ್ತೊಮ್ಮೆ ಆಘಾತಕ್ಕೀಡಾದ ಪುತ್ರ ದಿಕ್ಕು ತೋಚದೇ ರುದ್ರಭೂಮಿಗೆ ತೆರಳಿದ್ದಾನೆ.

    108 ವಾಹನದಲ್ಲಿ ಬಂದ ಪಾರ್ಥಿವ ಶರೀರವನ್ನು ತೋರಿಸುವಂತೆ ಪುತ್ರ ಪಟ್ಟು ಹಿಡಿದಿದ್ದಾನೆ. ಐದು ದಿನಗಳ ಹಿಂದೆಯೇ ನನ್ನ ತಾಯಿ ಮೃತಪಟ್ಟಿದ್ದಾಳೆ ಎಂದು ನೀವೇ ಹೇಳಿ, ಇವತ್ತು ಯಾರ ಹೆಣವನ್ನು ತಂದು ಹೂಳುತ್ತೀದ್ದಿರಿ? ನನಗೆ ಆಧಿಕಾರಿಗಳು ಮೋಸ ಮಾಡುತ್ತಿದ್ದಾರೆ. ಹೆತ್ತ ತಾಯಿಯ ಮುಖವನ್ನು ತೊರಿಸದೇ ಅಂತ್ಯಕ್ರಿಯೆ ಮಾಡುತ್ತಿರುವುದು ಸರಿಯಲ್ಲ ಎಂದು ಗೋಗರೆದಿದ್ದಾನೆ. ಇದಕ್ಕೆ ಕ್ಯಾರೇ ಎನ್ನದ ಅಧಿಕಾರಿಗಳು ಪ.ಪಂ. ಪೌರ ಕಾರ್ವಿುಕರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸಹಾಯದಿಂದ ದ್ಯಾಂಪೂರ ರಸ್ತೆಯಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಸ್ಥಳದಲ್ಲಿ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಮೃತಳ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಜನರ ಕರೊನಾ ತಪಾಸಣೆ ಕೈಗೊಳ್ಳಲಾಗಿದ್ದು, ಎಲ್ಲರ ವರದಿ ನೆಗಟಿವ್ ಬಂದಿದೆ ಎನ್ನಲಾಗಿದೆ.

    ಸ್ಥಳದಲ್ಲಿ ಗಜೇಂದ್ರಗಡ ತಹಸೀಲ್ದಾರ್ ಅಶೋಕ ಕಲಘಟಗಿ, ನರೇಗಲ್ಲ ಪ.ಪಂ. ಮುಖ್ಯಾಧಿಕಾರಿ ಎಂ.ಎ. ನೂರೂಲ್ಲಾಖಾನ, ಆರೋಗ್ಯ ನಿರೀಕ್ಷಕ ರಾಮಚಂದ್ರಪ್ಪ ಕಜ್ಜಿ, ಡಾ. ರಾಘು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಎಸ್.ಎಫ್. ಅಂಗಡಿ, ಎಸ್.ಎನ್. ಪಾಟೀಲ, ಪೌರ ಕಾರ್ವಿುಕರು, ಪೊಲೀಸ್, ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

    ನನ್ನ ತಾಯಿ ಸಾವಿನ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಜು. 20ರಂದು ಸತ್ತಿರುವುದಾಗಿ ಹೇಳಿ, ಜು. 30ರಂದು ಅಂತ್ಯಕ್ರಿಯೆಗೆ ಬರುವಂತೆ ತಿಳಿಸಿದರು. ಆದರೆ, ಅಂತ್ಯಕ್ರಿಯೆ ಸಂದರ್ಭದಲ್ಲಿ ನಮ್ಮ ತಾಯಿ ಮುಖವನ್ನೂ ತೋರಿಸಲಿಲ್ಲ. ಅಧಿಕಾರಿಗಳು ನಮಗೆ ಮೋಸ ಮಾಡಿದ್ದಾರೆ. ಸಂಪೂರ್ಣ ಮುಚ್ಚಲಾಗಿದ್ದ ಮೃತ ದೇಹದ ಮೇಲೆ ಕರೊನಾ ಪಾಸಿಟಿವ್ ಇರುವ ಯಾವುದೇ ಗುರುತಿನ ನಂ. ಕೂಡ ಇರಲಿಲ್ಲ.

    | ಪರಸಪ್ಪ ವೀರಪ್ಪ ಗಡ್ಡದ ಮೃತರ ಪುತ್ರ

    ವೃದ್ಧೆಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಯಾವ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಲಿ. ಜಿಲ್ಲಾಡಳಿತದ ವತಿಯಿಂದ ಮಾತ್ರ ಅಧಿಕೃತ ಮಾಹಿತಿ ನೀಡುತ್ತಿದ್ದೇವೆ. ಬೇರೆ ಯಾರೇ ಹೇಳಿದರೂ ನಂಬಬಾರದು. ಅದು ಅಧಿಕೃತವೂ ಅಲ್ಲ. ಈ ಗೊಂದಲದ ಬಗ್ಗೆ ಪರಿಶೀಲಿಸಲಾಗುವುದು.

    | ಸುಂದರೇಶಬಾಬು ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts