More

    ಸಂಯಮದಿಂದ ಸಮಸ್ಯೆ ಎದುರಿಸಿ

    ರಾಣೆಬೆನ್ನೂರ: ಕರೊನಾ ಲಾಕ್​ಡೌನ್ ಸಮಯದಲ್ಲಿ ಸಂಕಷ್ಟಕ್ಕೀಡಾದವರಿಗೆ ಎಬಿಪಿವಿ ಕಾರ್ಯರ್ತರು ಆಹಾರ ಕಿಟ್ ವಿತರಣೆ ಸೇರಿದಂತೆ ಎಲ್ಲ ರೀತಿಯ ಸಹಾಯ ಮಾಡಿದ್ದಾರೆ. ಇದೇ ರೀತಿ ಮುಂದೆಯೂ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ನಮ್ಮ ಹೋರಾಟ ಹಾಗೂ ಕೊಡುಗೆ ಮುಂದುವರಿಯಬೇಕು ಎಂದು ಎಬಿವಿಪಿ ರಾಜ್ಯ ಸಹ ಸಂಘಟನೆ ಕಾರ್ಯದರ್ಶಿ ಸ್ವಾಮಿ ಮಾಳಾಪುರ ಹೇಳಿದರು.

    ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ನಗರದ ರೇನ್​ಬೋ ಶಾಲೆ ಆವರಣದಲ್ಲಿ ಮೂರು ದಿನ ನಡೆಯಲಿರುವ ಕರ್ನಾಟಕ ಪ್ರಾಂತ ಅಭ್ಯಾಸ ವರ್ಗ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಎಬಿವಿಪಿ ಅನೇಕ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಇದೀಗ 75ನೇ ವರ್ಷಕ್ಕೆ ಕಾಲಿಡುತ್ತಿದೆ. ಕಡಿಮೆ ಸಮಯದಲ್ಲಿ ಜಗತ್ತಿನ ನಂಬರ್-1 ಸಂಘಟನೆಯಾಗಿ ಎಬಿವಿಪಿ ಬೆಳೆದಿದೆ. ಸಂಘಟನೆ ಶಾಶ್ವತ, ಮನುಷ್ಯ ಶಾಶ್ವತ ಅಲ್ಲ. ಇದನ್ನು ಅರ್ಥೈಸಿಕೊಳ್ಳಬೇಕು. ಬೌದ್ಧಿಕ ಚಿಂತನೆಯಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಸಮಸ್ಯೆ ಬಂದರೂ ಅತಿರೇಕ ಮಾಡದೆ ಸಂಯಮದಿಂದ ಎದುರಿಸಬೇಕು. ಅಂದಾಗ ಸಮಸ್ಯೆಗಳನ್ನು ದೂರ ಮಾಡಿ ಬೆಳೆಯಲು ಸಾಧ್ಯ ಎಂದರು.

    ರಾಜ್ಯ ಕಾರ್ಯದರ್ಶಿ ಪ್ರತೀಕ ಮೌಳಿ ಮಾತನಾಡಿ, ಎಬಿವಿಪಿ ಸಂಘಟನೆಯ ಮೂಲಕ ಈಗಾಗಲೇ ವಿದ್ಯಾರ್ಥಿಗಳ ಅನೇಕ ಸಮಸ್ಯೆಗಳಿಗೆ ಹೋರಾಟ ಮಾಡಿ ಜಯ ಸಾಧಿಸಿದ್ದೇವೆ. ವಿದ್ಯಾರ್ಥಿಗಳ ವಿಕಾಸಕ್ಕಾಗಿ ನಮ್ಮ ಹೋರಾಟ ನಡೆದಿದೆ. ವಿಕಾಸ ಹಾಗೂ ವಿನಾಶ ಎಂಬ ಎರಡು ಹಾದಿಯಲ್ಲಿ ಯಾವ ಹಾದಿಗೆ ಹೋಗಬೇಕು ಎಂಬ ಚಿಂತನೆ ಕುರಿತು ಕಾರ್ಯಕರ್ತರಿಗೆ ತಿಳಿಸಿಕೊಡಲು ಅಭ್ಯಾಸ ವರ್ಗ ಹಮ್ಮಿಕೊಂಡಿದ್ದು, ಪ್ರತಿಯೊಬ್ಬರೂ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

    ಸಂಘಟನೆಯ ಅಧ್ಯಕ್ಷ ಡಾ. ವೀರೇಶ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ, ಪ್ರಾಂತ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮೀಸೆ, ಬಾಲಕೃಷ್ಣಜೀ, ಪೃಥ್ವಿಜಿ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಸಂಘಟನಾ ಪ್ರಮುಖರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts