More

    ಅಲ್ಲೂ ಪ್ರತಿಭಟನೆ, ಇಲ್ಲೂ ಪ್ರತಿಭಟನೆ; ನಮಗೆ ಈ ಠಾಣೆಯೇ ಬೇಡ ಎಂದ ಪೊಲೀಸರು

    ಧಾರವಾಡ: ಇದೊಂಥರ ಖಾಕಿ ವರ್ಸಸ್ ಬ್ಲ್ಯಾಕ್ ಎಂಬಂಥ ಪ್ರಕರಣ. ಖಾಕಿಧಾರಿ ಪೊಲೀಸರು ಹಾಗೂ ಕರಿಕೋಟಿನ ವಕೀಲರ ನಡುವಿನ ಕಿತ್ತಾಟ ಈಗ ಒಂದಿಡೀ ಠಾಣಾ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಾಗಿದೆ. ಏಕೆಂದರೆ ಈ ಠಾಣೆಯ ಪೊಲೀಸರು ತಮಗೆ ಸಾಮೂಹಿಕ ವರ್ಗವಾಣೆ ಕೊಡಿ ಎಂಬುದಾಗಿ ಒತ್ತಾಯಿಸುತ್ತಿದ್ದಾರೆ.

    ಒಂದೆಡೆ ಪೊಲೀಸರ ಮೇಲೆ ಕ್ರಮಕ್ಕೆ ಆಗ್ರಹಿಸಿ ಧಾರವಾಡದಲ್ಲಿ ವಕೀಲರಿಂದ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಸಾಮೂಹಿಕ ವರ್ಗಾವಣೆ ನೀಡಿ ಎಂದು ಠಾಣೆ ಬಳಿ ಪೊಲೀಸರೇ ಪ್ರತಿಭಟನೆ ನಡೆಸುತ್ತಿದ್ದಾರೆ. ವಕೀಲ ವಿನೋದ ಪಾಟೀಲ್ ಹಾಗೂ ಇನ್​ಸ್ಪೆಕ್ಟರ್ ಪ್ರಭು ಸೂರಿನ್ ನಡುವಿನ ಜಟಾಪಟಿ ಇದೀಗ ಪೊಲೀಸರು ಮತ್ತು ವಕೀಲರ ನಡುವೆ ಪ್ರತಿಷ್ಠೆಯ ವಿಚಾರವಾಗಿ ಮಾರ್ಪಟ್ಟಿದೆ.

    ವಕೀಲ ವಿನೋದ ಪಾಟೀಲ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಕೀಲರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಲ್ಲದೆ, ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರದವರೆಗೆ ಗಡುವು ನೀಡಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿದ ವಕೀಲರು, ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಯೇ ಆಗಮಿಸಬೇಕು ಎಂದು ಆಗ್ರಹಿಸಿದ್ದರು. ಬಳಿಕ ಕೋರ್ಟ್​ ಎದುರಿನ ಹುಬ್ಬಳ್ಳಿ-ಧಾರವಾಡ ಮುಖ್ಯರಸ್ತೆಯನ್ನು ಕೆಲ ಕಾಲ ಬಂದ್ ಮಾಡಿ ಪ್ರತಿಭಟಿಸಿದ್ದರು.

    ವಕೀಲರ ನಡೆಯಿಂದ ಬೇಸತ್ತ ಪೊಲೀಸರು ನವನಗರದ ಎಪಿಎಮ್​ಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಲ್ಲದೆ, 40ಕ್ಕೂ ಹೆಚ್ಚು ಪೊಲೀಸರು ಸಾಮೂಹಿಕ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಪೊಲೀಸ್​ ಠಾಣೆ ಮುಂದೆ ಜಮಾಯಿಸಿರುವ ಪೊಲೀಸರು ಸಾಮೂಹಿಕ ವರ್ಗಾವಣೆಗೆ ಆಗ್ರಹಿಸಿದ್ದಾರೆ.

    ವಸಿಷ್ಠಸಿಂಹ ವರ್ಸಸ್ ಕಿಶೋರ್​..

    ಸೆಲೆಬ್ರಿಟಿಗಳ​ ಮಾಲ್ಡೀವ್ಸ್​ ಭೇಟಿಯನ್ನು ಟ್ರೋಲ್​ ಮಾಡಿದ ನೆಟ್ಟಿಗರು: ಹೊಟ್ಟೆ ಹುಣ್ಣಾಗಿಸುವ ಮೀಮ್​ಗಳು​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts