More

    ತರಬೇತಿಯಿಂದ ಆತ್ಮಸ್ಥೈರ್ಯ ವೃದ್ಧಿ

    ಸಾಗರ: ಕೈಗಾರಿಕಾ ಕೇಂದ್ರಗಳಲ್ಲಿ ತರಬೇತಿ ಪಡೆದವರು ತಮ್ಮ ಕೌಶಲ ಮತ್ತು ಕಸುಬುಗಾರಿಕೆಯಿಂದ ಸ್ವಯಂ ಉದ್ಯೋಗ ಕೈಗೊಂಡು ಬದುಕು ಕಟ್ಟಿಕೊಳ್ಳಬಹುದು ಎಂದು ಸಾಗರ ಕೈಗಾರಿಕಾ ತರಬೇತಿ ಸಂಸ್ಥೆ ಆಡಳಿತಾಧಿಕಾರಿ ವಿ.ಎಂ.ರಘು ಹೇಳಿದರು.

    ನಗರದ ಕೈಗಾರಿಕಾ ತರಬೇತಿ ಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ ಘಟಿಕೋತ್ಸದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ತರಬೇತಿ ಎನ್ನುವುದು ಉದ್ಯೋಗ ಮಾಡುವುದಕ್ಕೆ ಆತ್ಮಸ್ಥೈರ್ಯ ನೀಡಲಿದೆ. ಆತ್ಮಸ್ಥೈರ್ಯ ಬಳಸಿಕೊಂಡ ಪ್ರಾಮಾಣಿಕತೆಯಿಂದ ದುಡಿಮೆ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಎಲ್ಲರೂ ಸರ್ಕಾರಿ ನೌಕರಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳುವ ಮೂಲಕ ಮಾನವ ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.
    ಪ್ರಾಚಾರ್ಯ ಬಿ.ಟಿ.ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಲ್ಮನೆ ಗ್ರಾಪಂ ಅಧ್ಯಕ್ಷ ಎಂ.ಸುರೇಶ್, ಕೈಗಾರಿಕಾ ಸಂಸ್ಥೆಯ ತರಬೇತಿ ಅಧಿಕಾರಿಗಳಾದ ರಮೇಶ ಮಣೂರು, ಎನ್.ಎಂ.ಭಾಗೀರಥಿ, ಎಲ್.ಬಿ.ರಮೇಶ್, ಕೆ.ಎಚ್.ಶಶಿಧರ, ಸ್ಯಾಮ್ಸನ್ ಎಸ್. ರ್ನಾಂಡಿಸ್, ಇ.ಸ್ವಾಮಿರಾವ್, ಎಂ.ಸತೀಶ್, ಡಿ.ಕೆ.ಅಣ್ಣಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts