More

    ‘ಚೀನಾಕ್ಕೆ ಮುಖಭಂಗ ಮಾಡಲು ದಲೈ ಲಾಮ ಅವರಿಗೆ ಭಾರತ ರತ್ನ ನೀಡಿ…’-ಸಂಘಪರಿವಾರದ ಸಲಹೆ

    ನವದೆಹಲಿ: ಕುತಂತ್ರಿ ಚೀನಾದ ವಿರುದ್ಧ ಭಾರತ ಸೇಡು ತೀರಿಸಿಕೊಳ್ಳಬೇಕು ಎಂಬ ಕೂಗು ಎಲ್ಲೆಡೆಯಿಂದ ಕೇಳಿಬರುತ್ತಿದೆ. ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ, ಆಮದನ್ನು ನಿಲ್ಲಿಸಿ ಎಂಬ ಅಭಿಯಾನ ಶುರುವಾಗಿದೆ. ಕೇಂದ್ರ ಸರ್ಕಾರ ಕೂಡ ಚೀನಾದ 59 ಆ್ಯಪ್​​ಗಳನ್ನು ನಿಷೇಧಿಸಿದೆ.

    ಈಗ ಬಿಜೆಪಿಯ ಮೆಂಟರ್​ ಆಗಿರುವ ಸಂಘಪರಿವಾರ ಚೀನಾ ವಿರುದ್ಧ ಪ್ರತೀಕಾರಕ್ಕೆ ಮತ್ತೊಂದು ಮಾರ್ಗವನ್ನು ಹೇಳಿದೆ. ಕಮ್ಯುನಿಸ್ಟ್​​ ದೇಶ ಚೀನಾ ವಿರುದ್ಧ ಹಿಂದಿನಿಂದಲೂ ಪ್ರತಿಭಟನೆ ನಡೆಸುತ್ತ, ಆ ದೇಶವನ್ನು ಕಟುವಾಗಿ ವಿರೋಧ ಮಾಡುತ್ತಿರುವ ಟಿಬೆಟ್​​ನ ಬೌದ್ಧ ಧರ್ಮಗುರು ದಲೈಲಾಮಾ (ಟೆನ್ಸಿನ್ ಗ್ಯಾಟ್ಸೊ) ಅವರಿಗೆ ನಮ್ಮ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ನೀಡುವ ಮೂಲಕ ಚೀನಾಕ್ಕೆ ಮುಖಭಂಗ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಸಂದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ದಲೈಲಾಮಾ ಅವರಿಗೆ ಭಾರತ ರತ್ನ ನೀಡುವ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಮಟ್ಟದ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಚೀನಾದ ಇತ್ತೀಚಿನ ಆಕ್ರಮಣಶೀಲತೆಯನ್ನು ನೋಡಿದ ಮೇಲೆ ಒಂದು ಗುಂಪು ದಲೈ ಲಾಮಾ ಅವರಿಗೆ ಭಾರತ ರತ್ನ ನೀಡುವುದರ ಪರವಾಗಿ ಇದೆ. ಆದರೆ ಮತ್ತೂ ಕೆಲವರು ಈ ನಡೆಯಿಂದ ಮುಂದೆ ಉಂಟಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಮೊದಲಿನಿಂದಲೂ ದಲೈ ಲಾಮಾ ಬಗ್ಗೆ ಚೀನಾ ಕಿಡಿಕಾರುತ್ತಿದೆ. ಈಗ ಈ ಸಮಯದಲ್ಲಿ ಅವರಿಗೆ ಭಾರತರತ್ನ ನೀಡುವುದರಿಂದ ಭಾರತದ ಬಗ್ಗೆ ಮತ್ತೂ ದ್ವೇಷ ಸಾಧಿಸಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

    ಟಿಬೆಟ್​ನ್ನು ಚೀನಾ ಅತಿಕ್ರಮಣ ಮಾಡಿಕೊಂಡ ಬಳಿಕ, ಚೀನಾ ಸೈನ್ಯದಿಂದ ತಪ್ಪಿಸಿಕೊಂಡು ಬಂದ ದಲೈ ಲಾಮಾ ಭಾರತಕ್ಕೆ ಬಂದಿದ್ದಾರೆ. ಅವರು 1959ರಿಂದಲೂ ಪೊಟಾಲಾ ಪ್ಯಾಲೇಸ್​ ಎಂಬಲ್ಲಿ ವಾಸವಾಗಿದ್ದಾರೆ. ಈಗಿರುವ ಟೆನ್ಸಿನ್ ಗ್ಯಾಟ್ಸೊ ಅವರು 14ನೇ ದಲೈಲಾಮಾ ಆಗಿದ್ದು, ಅವರಿಗೆ 84 ವರ್ಷ ವಯಸ್ಸಾಗಿದೆ.

    ದಲೈಲಾಮ ಅವರಿಗೆ ಭಾರತ ರತ್ನ ನೀಡಬೇಕು ಎಂಬ ಮನವಿ ಈಗಿನಿದ್ದಲ್ಲ. ಈ ಹಿಂದೆ ಕೂಡ ಬಿಜೆಪಿಯ ಹಲವು ಮುಖಂಡರೇ ಕೇಂದ್ರಕ್ಕೆ ಮನವಿ ಮಾಡಿದ್ದುಂಟು. ಭಾರತ ಚೀನಾ ನಡುವೆ ಸಂಘರ್ಷ ಉಂಟಾದ ಎರಡು ಮೂರು ದಿನದಲ್ಲೇ ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮ್​ ರಾವ್​ ಅವರು ಟ್ವೀಟ್​ ಮಾಡಿ, 14ನೇ ದಲೈ ಲಾಮಾ ಅವರ ಆಧ್ಯಾತ್ಮಿಕ ಕೊಡುಗೆಗಳನ್ನು ಪರಿಗಣಿಸಿ, ಅವರಿಗೆ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

    ಟಿಬೆಟ್​​ನ ಸ್ವಾಯತ್ತತೆಗಾಗಿ ಶಾಂತಿಯುತವಾಗಿಯೇ ಹೋರಾಡುತ್ತಿರುವ ದಲೈಲಾಮಾ ಅವರನ್ನು ಚೀನಾ ಸರ್ಕಾರ ಪ್ರತ್ಯೇಕತಾವಾದಿ ಎಂದು ಪರಿಗಣಿಸಿ, ಸದಾ ಅವರ ವಿರುದ್ಧ ಕಿಡಿ ಕಾರುತ್ತಿದೆ. ದಲೈಲಾಮಾ ತಮ್ಮ ಶಾಂತಿಯುತ ಹೋರಾಟಕ್ಕಾಗಿ 1989ರಲ್ಲಿ ನೊಬೆಲ್​ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇದೀಗ ಭಾರತ ರತ್ನಕ್ಕೆ ಅವರ ಹೆಸರು ತೀವ್ರವಾಗಿ ಕೇಳಿಬರುತ್ತಿದ್ದು, ಕೇಂದ್ರ ಸರ್ಕಾರದತ್ತ ಎಲ್ಲರ ಚಿತ್ತ ನೆಟ್ಟಿದೆ.(ಏಜೆನ್ಸೀಸ್​)

    ಪ್ರಿಯಾಂಕಾ ಗಾಂಧಿ ವಾದ್ರಾಗೆ ಶಾಕ್​ ನೀಡಿದ ಕೇಂದ್ರ ವಸತಿ ಸಚಿವಾಲಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts