More

    ಬಾಲಕಾರ್ವಿುಕ ರಕ್ಷಣೆಗೆ ದಿಢೀರ್ ದಾಳಿ ಅವಶ್ಯ, ತಾಲೂಕು ಮಟ್ಟದ ಕಾರ್ಯಪಡೆ ಸಭೆಯಲ್ಲಿ ತಹಸೀಲ್ದಾರ್ ಅನಿಲ್ ಕುಮಾರ್ ಸೂಚನೆ

    ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನ ವಿವಿಧ ಅಂಗಡಿಗಳು, ಬೇಕರಿ, ಗ್ಯಾರೇಜು ಸೇರಿ ಅನೇಕ ಸ್ಥಳಗಳಲ್ಲಿ ಅನಿರೀಕ್ಷಿತ ದಾಳಿ ಕೈಗೊಂಡು, ತಪಾಸಣೆ ನಡೆಸುವ ಮೂಲಕ ಬಾಲಕಾರ್ವಿುಕರ ರಕ್ಷಣೆಗೆ ಮುಂದಾಗಬೇಕು ಎಂದು ದೇವನಹಳ್ಳಿ ತಹಸೀಲ್ದಾರ್ ಅನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

    ದೇವನಹಳ್ಳಿ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಾಲಕಾರ್ವಿುಕ ನಿಷೇಧ ತಾಲೂಕು ಮಟ್ಟದ ಅನುಷ್ಠಾನ ಸಮಿತಿ (ಟಾಸ್ಕ್ ಫೋರ್ಸ್) ಸಭೆಯಲ್ಲಿ ಮಾತನಾಡಿದರು.

    ಬಾಲಕಾರ್ವಿುಕರನ್ನು ನೇಮಿಸಿಕೊಂಡಿರುವ ಅಂಗಡಿ ಮಾಲೀಕರಿಗೆ ಕಾಯ್ದೆ ಕುರಿತು ಅರಿವು ಮೂಡಿಸಿ, ಬಾಲಕಾರ್ವಿುಕರಿಗೆ ಶಿಕ್ಷಣ ಕೊಡಿಸುವಂತೆ ಪಾಲಕರ ಮನವೊಲಿಸಲು ತಿಳಿಸಿದರು.

    ಕಾರ್ವಿುಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಕಾಯ್ದೆಯಡಿ ನೇಮಿಸಿರುವ ವಿವಿಧ ತಂಡಗಳು ಕಡ್ಡಾಯವಾಗಿ ತಪಾಸಣೆ ಕೈಗೊಂಡು, ಪ್ರತಿ ತಿಂಗಳು ವರದಿ ನೀಡಬೇಕು ಎಂದರು.

    ಶಾಲಾ ಕಾಲೇಜುಗಳಲ್ಲಿ ಜಾಗೃತಿ: ರಾಷ್ಟ್ರೀಯ ಬಾಲಕಾರ್ವಿುಕರ ಯೋಜನೆಯ ಯೋಜನಾ ನಿರ್ದೇಶಕ ಎಸ್. ಸುಬ್ಬರಾವ್ ಮಾತನಾಡಿ, ಈಗಾಗಲೇ ದೇವನಹಳ್ಳಿ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಲ್ಲಿ ಬಾಲಕಾರ್ವಿುಕ ಪದ್ಧತಿ ಕುರಿತು ವಿದ್ಯಾರ್ಥಿಗಳಿಗೆ ಕಾನೂನು ಅರಿವು-ನೆರವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ವಿವಿಧ ಇಲಾಖೆಗಳ ಸಹಕಾರದೊಂದಿಗೆ ಜಿಲ್ಲೆಯಾದ್ಯಂತ ಬೀದಿನಾಟಕ, ಆಟೋ ಪ್ರಚಾರ, ಗೋಡೆಬರಹ, ಸಾರ್ವಜನಿಕ ಸ್ಥಳ, ಅಂಗಡಿಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಬಾಲಕಾರ್ವಿುಕರನ್ನು ನೇಮಿಸಿಕೊಳ್ಳದಂತೆ ಮುದ್ರಿಸಿರುವ ಸ್ಟಿಕ್ಕರ್ ಮತ್ತು ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ. ಅನಿರೀಕ್ಷಿತ ತಪಾಸಣೆ ಹಾಗೂ ದಾಳಿ ವೇಳೆ ವಿವಿಧ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಸಹಾಯಕ ಆರಕ್ಷಕ ನಿರೀಕ್ಷಕ ಕೃಷ್ಣ ನಾಯಕ್, ಆರೋಗ್ಯ ಇಲಾಖೆಯ ವೆಂಕಟೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಂಜಿನಪ್ಪ, ಸಮಾಜ ಕಲ್ಯಾಣ ಇಲಾಖೆಯ ಸತೀಶ್ ಮತ್ತಿತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts