More

    ಈ ದೇಶದ ಶಾಲೆಗಳಲ್ಲೇ ಇದೆ ಕಾಂಡೋಮ್​ ವಿತರಣಾ ಮಷಿನ್​! 29 ವರ್ಷಗಳ ಹಿಂದೆಯೇ ಅಳವಡಿಕೆ!

    ಪ್ಯಾರಿಸ್​: ಕಾಂಡೋಮ್​ ಎನ್ನುವುದು ಗೌಪ್ಯ ವಿಚಾರ ಎನ್ನುವ ಪರಿಸ್ಥಿತಿಯಲ್ಲಿ ನಮ್ಮ ದೇಶವಿದೆ. ಆದರೆ ಈ ದೇಶದಲ್ಲಿ ಹಾಗಿಲ್ಲ. ಕಾಂಡೋಮ್​ ಬಳಕೆಯ ಪ್ರಾಮುಖ್ಯೆಯನ್ನು ದೇಶದ ಪ್ರತಿ ಶಾಲೆಗಳಲ್ಲಿ ಹೇಳಿಕೊಡಲಾಗುತ್ತದೆ. ಅಷ್ಟೇ ಅಲ್ಲದೆ ಕಾಂಡೋಮ್​ ವಿತರಣಾ ಮಷಿನ್​ಗಳನ್ನೂ ಶಾಲೆಗಳಲ್ಲಿ ಅಳವಡಿಸಲಾಗಿದೆ.

    ಹೌದು! ನಾವೀಗ ಮಾತನಾಡುತ್ತಿರುವುದು ಫ್ರಾನ್ಸ್​ನ ಬಗ್ಗೆ. ಈ ದೇಶದ ಶೇ. 96ಕ್ಕೂ ಹೆಚ್ಚು ಹೈ ಸ್ಕೂಲ್​ಗಳಲ್ಲಿ ಕಾಂಡೋಮ್​ ವಿತರಣಾ ಮಷಿನ್​ಗಳಿವೆ. ಚಿಕ್ಕ ವಯಸ್ಸಿನಲ್ಲಿ ಗರ್ಭಧಾರಣೆ ಮತ್ತು ಏಡ್ಸ್​ ಖಾಯಿಲೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರವೇ ಈ ಯೋಜನೆಗೆ ನಾಂದಿ ಹಾಡಿತ್ತು. 29 ವರ್ಷಗಳ ಹಿಂದೆ ಅಂದರೆ 1992ರಲ್ಲಿಯೇ ಈ ಯೋಜನೆ ಆರಂಭವಾಗಿದೆ. 1992ರಲ್ಲಿ ಸರ್ಕಾರವು ಅಲ್ಲಿನ ಸರ್ಕಾರಿ ಹೈ ಸ್ಕೂಲ್​ ಒಂದರಲ್ಲಿ ಕಾಂಡೋಮ್​ ವಿತರಣಾ ಮಷಿನ್​ ಅಳವಡಿಸಿತ್ತು. ಇದಕ್ಕೆ ಪ್ರಾರಂಭದಲ್ಲಿ ಶಾಲಾ ಆಡಳಿತದಿಂದ ಮತ್ತು ಕೆಲ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಅದಾದ ಮೇಲೆ ಜನರು ತುಂಬು ಮನಸ್ಸಿನಿಂದ ಈ ನಿರ್ಧಾರವನ್ನು ಸ್ವಾಗತಿಸಿದ್ದರು. 2006ರ ವೇಳೆಗೆ ದೇಶದ ಶೇ. 96 ಸರ್ಕಾರಿ ಮತ್ತು ಖಾಸಗಿ ಹೈ ಸ್ಕೂಲ್​ಗಳಲ್ಲಿ ಮಷಿನ್​ ಅಳವಡಿಕೆಯಾಗಿತ್ತು.

    ಫ್ರಾನ್ಸ್​ನಲ್ಲಿ ಏಡ್ಸ್​ ಸಮಸ್ಯೆ ಹೆಚ್ಚಿದೆ. ಅದೇ ಕಾರಣಕ್ಕೆ ಅಲ್ಲಿ ಆರೋಗ್ಯಯುತ ಲೈಂಗಿಕಕ್ರಿಯೆ ಬಗ್ಗೆ ಹೆಚ್ಚಿನ ಶಿಕ್ಷಣ ನೀಡಲಾಗುತ್ತಿದೆ. ಕೇವಲ ಫ್ರಾನ್ಸ್​ ಮಾತ್ರವಲ್ಲ, ಅಮೆರಿಕದ ಖಾಸಗಿ ಶಾಲೆಗಳಲ್ಲೂ ಕಾಂಡೋಮ್​ ವಿತರಣಾ ಮಷಿನ್​ಗಳನ್ನು ಅಳವಡಿಸಲಾಗಿದೆ. (ಏಜೆನ್ಸೀಸ್​)

    ಕದ್ದ ಹಣ ನಿರೀಕ್ಷೆಗಿಂತ ಹೆಚ್ಚಿದ್ದಿದ್ದನ್ನು ಕಂಡು ಕಳ್ಳನಿಗೇ ಹಾರ್ಟ್​ ಅಟ್ಯಾಕ್​! ಅದೇ ದುಡ್ಡಲ್ಲೇ ಟ್ರೀಟ್ಮೆಂಟ್​!

    ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ಮುಖಂಡ ನೇಣುಬಿಗಿದ ಸ್ಥಿತಿಯಲ್ಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts