More

    ವಕೀಲರ ಮೇಲಿನ ಹಲ್ಲೆಗೆ ಖಂಡನೆ

    ಲಕ್ಷ್ಮೇಶ್ವರ: ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ವಕೀಲರ ರಕ್ಷಣೆಗೆ ಸರ್ಕಾರ ವಿಶೇಷ ಕಾನೂನು ರಚಿಸಬೇಕೆಂದು ಲಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷ ಬಿ.ಎಸ್ ಬಾಳೇಶ್ವರಮಠ ಆಗ್ರಹಿಸಿದರು.

    ಸೋಮವಾರ ತಹಸೀಲ್ದಾರ್ ಕೆ. ಆನಂದಶೀಲ ಅವರಿಗೆ ವಕೀಲರ ಸಂಘದಿಂದ ಮನವಿ ಸಲ್ಲಿಸಿ ಮಾತನಾಡಿ, ಹಳಿಯಾಳದ ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಆಷ್ಟೇಕರ, ಮುಂಡರಗಿಯ ಹಿರಿಯ ವಕೀಲ ಬಿ.ಎಚ್. ರಾಟಿ ಅವರ ಮೇಲೆ ಹಲ್ಲೆ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು. ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯ್ದೆ ಕಾನೂನು ಜಾರಿಗೆ ತರಬೇಕು. ರಾಜ್ಯದ ಹಲವಾರು ವಕೀಲರು ನಿತ್ಯ ಒಂದಿಲ್ಲೊಂದು ಕಿರುಕುಳ, ಹಲ್ಲೆ, ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ವಕೀಲ ರಕ್ಷಣಾ ಕಾಯ್ದೆ ಜಾರಿಗೆ ತರಬೇಕು. ಇಲ್ಲವಾದರೆ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಹಿರಿಯ ವಕೀಲರಾದ ವಿ.ಎಲ್. ಪೂಜಾರ, ಎಸ್.ಪಿ. ಬಳಿಗಾರ, ವಿ.ಬಿ. ಪಾಟೀಲ ಮಾತನಾಡಿದರು. ಬಿ.ಎಸ್. ಘೋಂಗಡಿ, ಎಸ್.ಆರ್. ಅತ್ತಿಗೇರಿ, ಪ್ರಕಾಶ ವಾಲಿ, ಜೆ.ಡಿ. ದೊಡ್ಡಮನಿ, ಸುರೇಶ ನಾವಿ, ಎನ್.ಐ. ಬೆಲ್ಲದ, ವಿಠಲ ನಾಯಕ, ಉಮಾ ಬಳ್ಳಾರಿ, ಎನ್.ಸಿ. ಅಮಾಸಿ, ಎಂ.ಎನ್. ರಿತ್ತಿಮಠ, ಸುಧಾ ಮಾಗಡಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts