More

    Web Exclusive | ಕೂಲಿ ಕಾರ್ವಿುಕರ ಮಕ್ಕಳಿಗೆ ಕಂಪ್ಯೂಟರ್ ಉಚಿತ; ಕಾರ್ವಿುಕ ಇಲಾಖೆಯಿಂದ ಮಹತ್ವದ ತೀರ್ಮಾನ

    | ಸತೀಶ್ ಕಂದಗಲ್​ಪುರ ಬೆಂಗಳೂರು

    ರಾಜ್ಯದಲ್ಲಿ ಕೂಲಿ ಕಾರ್ವಿುಕರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಕ್ಕೆ ಮುಂದಾಗಿರುವ ಸರ್ಕಾರ ಉಚಿತವಾಗಿ ಕಂಪ್ಯೂಟರ್ ನೀಡುವ ಮೂಲಕ, ಶಿಕ್ಷಣ ವಂಚಿತರಾಗುವುದನ್ನು ತಡೆಗಟ್ಟಲು ಮುಂದಾಗಿದೆ. ಕೋವಿಡ್ ಲಾಕ್​ಡೌನ್ ವೇಳೆ ದೇಶದಲ್ಲಿ ಅತಿ ಹೆಚ್ಚು ಆರ್ಥಿಕ ಸಂಕಷ್ಟಕ್ಕೆ ಒಳಗಾದವರಲ್ಲಿ ದಿನಗೂಲಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರಾಗಿದ್ದಾರೆ. ಈ ವೇಳೆ ಕಾರ್ವಿುಕ ಇಲಾಖೆಯಿಂದ ಕೋಟ್ಯಂತರ ರೂ. ಖರ್ಚು ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲ ಕಾರ್ವಿುಕರಿಗೂ ಉಚಿತ ಆಹಾರ, ಪಡಿತರ ನೀಡಲಾಗಿತ್ತು. ಸ್ವಂತ ಊರುಗಳಿಗೆ ತೆರಳಲು ರೈಲು, ಬಸ್​ಗಳ ವ್ಯವಸ್ಥೆ ಕಲ್ಪಿಸಲಾಯಿತು. ಈಗ ಕಾರ್ವಿುಕರ ಮಕ್ಕಳು ಶಾಲೆ-ಕಾಲೇಜುಗಳಿಂದ ಹೊರಗುಳಿದು ದುಡಿಮೆಯತ್ತ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಉಚಿತ ಕಂಪ್ಯೂಟರ್ ನೀಡಲು ತೀರ್ವನಿಸಿದೆ.

    ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯವರಿಗೆ ಮಾತ್ರ

    ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಕಾರ್ವಿುಕ ಇಲಾಖೆಯಿಂದ ಡಿಪ್ಲೊಮೊ, ಐಟಿಐ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಕಂಪ್ಯೂಟರ್ ನೀಡಲಾಗುತ್ತಿದೆ. ಆದರೆ, ಕಾರ್ವಿುಕ ಇಲಾಖೆಯಿಂದ ಹಲವು ಸುತ್ತಿನ ಸಭೆಗಳನ್ನು ನಡೆಸಿ, ಇದೇ ಮೊದಲ ಬಾರಿಗೆ ನೊಂದಾಯಿತ ಕಟ್ಟಡ ಮತ್ತು ಇತರೆ ಕಾರ್ವಿುಕರ ಎಸ್​ಎಸ್​ಎಲ್​ಸಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳಿಗೆ ಉಚಿತ ಕಂಪ್ಯೂಟರ್ ಮುಂದಾಗಿದೆ.

    ವಿವರ ಒದಗಿಸುವ ನಮೂನೆ

    ಉಚಿತ ಕಂಪ್ಯೂಟರ್ ನೀಡಲು ಅರ್ಹ ವಿದ್ಯಾರ್ಥಿಗಳ ವಿವರದ ನಮೂನೆಯನ್ನು ಕಾರ್ವಿುಕ ಇಲಾಖೆ ಹೊರಡಿಸಿದೆ. ಅದರಲ್ಲಿ ಕ್ರಮ ಸಂಖ್ಯೆ, ನೊಂದಾಯಿತ ಜಿಲ್ಲೆ, ಕಾರ್ವಿುಕರ ಹೆಸರು, ನೋಂದಣಿ ದಿನಾಂಕ ಮತ್ತು ಸಂಖ್ಯೆ, ಮಗ/ ಮಗಳ ಹೆಸರು, ಓದುತ್ತಿರುವ ವಿಭಾಗ ಮತ್ತು ಶಾಲೆ-ಕಾಲೇಜುಗಳ ಹೆಸರು, ಲಿಂಗ ಹಾಗೂ ಆಧಾರ್​ಕಾರ್ಡ್ ಸಂಖ್ಯೆಯನ್ನು ಕೇಳಲಾಗಿದೆ. ಆಯಾ ಜಿಲ್ಲಾ ಕಾರ್ವಿುಕ ಅಧಿಕಾರಿಗಳು ಮಾಹಿತಿ ಕೇಳಲಿದ್ದು, ಕಟ್ಟಡ ಕಾರ್ವಿುಕರು ವಿವರ ಸಲ್ಲಿಸಲು ಸಿದ್ಧರಾಗಿರಬೇಕು.

    ಡಿ.15ರೊಳಗೆ ವಿವರ ಕಳಿಸಲು ಆದೇಶ

    ಉಚಿತ ಕಂಪ್ಯೂಟರ್ ಪಡೆಯಲು ವಿದ್ಯಾರ್ಥಿಗಳ ಪಾಲಕರು ಕಡ್ಡಾಯವಾಗಿ ಕಟ್ಟಡ ಕಾರ್ವಿುಕರಾಗಿ ನೊಂದಣಿ ಮಾಡಿಸಿರಬೇಕು. ಈ ಮೊದಲು ಯಾವುದೇ ಸರ್ಕಾರಿ ಇಲಾಖೆಗಳಿಂದ ಉಚಿತ ಕಂಪ್ಯೂಟರ್ ಅಥವಾ ಲ್ಯಾಪ್​ಟಾಪ್ ಪಡೆದುಕೊಂಡಿರಬಾರದು. ಅಂತಹ ಅರ್ಹ ಫಲಾನುಭವಿ ವಿದ್ಯಾರ್ಥಿಗಳನ್ನು ಗುರುತಿಸಿ ಡಿ.15ರ ಒಳಗಾಗಿ ಎಲ್ಲ ಜಿಲ್ಲೆಗಳಿಂದ ಮಾಹಿತಿ ನೀಡುವಂತೆ ರಾಜ್ಯದ ರಾಜ್ಯದ ಹಾಸನ, ಬೆಳಗಾವಿ, ಕಲಬುರಗಿ ಹಾಗೂ ಬೆಂಗಳೂರಿನ 2 ಪ್ರಾದೇಶಿಕ ವಿಭಾಗದ ಉಪ ಕಾರ್ವಿುಕರ ಆಯುಕ್ತರಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ವಿುಕರ ಮಂಡಳಿ ವತಿಯಿಂದ ಆದೇಶ ಹೊರಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts