More

    ಕಂಪ್ಯೂಟರ್ ಸೆಂಟರ್ ಎಫಿಕ್‌ಕಾರ್ಡ್‌ಗಳಿಗೆ ಮಾನ್ಯತೆ ಇಲ್ಲ

    ಚಿತ್ರದುರ್ಗ: ಭಾವಚಿತ್ರವಿರುವ ಮತದಾರರ ಗುರುತಿನ ಕಾರ್ಡ್ ಕಳೆದುಹೋಗಿದ್ದು,ಹೊಸದನ್ನು ಪಡೆಯಬೇಕಾದರೆ ಅಥವಾ ಬದಲಾವಣೆಗಳಿ ದ್ದರೆ ಖಾಸಗಿ ಕಂಪ್ಯೂಟರ್ ಸೆಂಟರ್‌ಗಳನ್ನು ಸಂಪರ್ಕಿಸದೆ ಮತದಾರರು ನೇರವಾಗಿ ಬೂತ್ ಮಟ್ಟದ ಅಧಿಕಾರಿ,ತಹಸೀಲ್ದಾರ್ ಕಚೇರಿ ಅಥವಾ ಉಪ ವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಮತದಾರರ ಮನೆ ವಿಳಾಸಕ್ಕೆ ಉಚಿತವಾಗಿ ಹೊಸ ಕಾರ್ಡ್ ತಲುಪಿಸಲಾಗು ವುದು ಎಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದ್ದಾರೆ.
    ಚಳ್ಳಕೆರೆ ಖಾಸಗಿ ಕಂಪ್ಯೂಟರ್ ಸೆಂಟರ್‌ವೊಂದರಲ್ಲಿ,200 ರಿಂದ 300 ರೂ.ಪಡೆದು,ಮತದಾರರ ಗುರುತಿನ ಚೀಟಿ ಸಿದ್ಧಪಡಿಸಿ ಕೊ ಡುತ್ತಿರುವ ದೂರು ಹಿನ್ನೆಲೆಯಲ್ಲಿ,ತಹಸೀಲ್ದಾರ್ ಎನ್.ರಘುಮೂರ್ತಿ ನೇತೃತ್ವದ ತಂಡ ಕಂಪ್ಯೂಟರ್ ಸೆಂಟರ್ ಮೇಲೆ ದಾಳಿ ನಡೆಸಿ ಪರಿ ಶೀಲಿಸಿದೆ.
    ಅಲ್ಲಿದ್ದ ಹಲವು ಗುರುತಿನ ಚೀಟಿಗಳನ್ನು ವಶಕ್ಕೆ ಪಡೆದು,ತಪ್ಪಿತಸ್ಥ ಕಂಪ್ಯೂಟರ್‌ಸೆಂಟರ್ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಜಿಲ್ಲಾ ಡಳಿತವೂ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು,ಇಂತಹ ಪ್ರಕರಣಗಳು ಮರುಕಳಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟೆ ಚ್ಚರ ನೀಡಲಾಗಿದೆ. ವದಂತಿಗಳನ್ನು ನಂಬಿ ಹಣ ಕೊಟ್ಟು ಖಾಸಗಿಯವರಿಂದ ಗುರುತಿನ ಚೀಟಿ ಪಡೆಯಬಾರದು. ಹೀಗೆ ಪಡೆದ ಕಾ ರ್ಡ್‌ಗಳಿಗೆ ಮಾನ್ಯತೆ ಇರುವುದಿಲ್ಲ. ಹೆಚ್ಚಿನ ಮತದಾರರ ಸಹಾಯವಾಣಿ 1950 ಅಥವಾ ಡಿಸಿ ಕಚೇರಿ ಸಹಾಯವಾಣಿ 08194-222176ಕ್ಕೆ ಕರೆಮಾಡ ಬಹುದೆಂದು ಡಿಸಿ ತಿಳಿಸಿದ್ದಾರೆ.
    —-
    (ಡಿಸಿ ಮಗ್‌ಶಾಟ್)
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts