More

    ರಾಜಿ-ಸಂಧಾನದಿಂದ ವ್ಯಾಜ್ಯ ಮುಕ್ತ ಸಮಾಜ ಸಾಧ್ಯ

    ಚಿಕ್ಕೋಡಿ: ರಾಜಿ- ಸಂಧಾನದ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡುವುದನ್ನು ಹಳ್ಳಿಗಳಲ್ಲಿ ಹಿರಿಯರು ಮಾಡುತ್ತ ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಮೆಗಾ ಲೋಕ ಅದಾಲತ್ ರೂಪುಗೊಂಡಿದೆ ಎಂದು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಲ್.ಚವ್ಹಾಣ ಹೇಳಿದರು.

    ರಾಜ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ ಹಾಗೂ ಅಭಿಯೋಜನೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೆಗಾ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಜನರು ವ್ಯಾಜ್ಯಗಳನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗೇಶ ಕಿವಡ ಮಾತನಾಡಿ, ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಂಡು ಸಮಾಜದಲ್ಲಿ ಪ್ರತಿಯೊಬ್ಬರೂ ಅಣ್ಣ-ತಮ್ಮಂದಿರಂತೆ ಬದುಕಬೇಕು ಎಂದು ಸಲಹೆ ನೀಡಿದರು. ಡಿವೈಎಸ್‌ಪಿ ಮನೋಜ ಪಾಟೀಲ, ಸಿಪಿಐ ಆರ್.ಆರ್.ಪಾಟೀಲ, ನ್ಯಾಯಾಧೀಶ ಶ್ರೀಕಾಂತ.ಟಿ, ವಿಜಯಕುಮಾರ ಬಾಗಡೆ, ಮಂಜುಳಾ.ಬಿ, ಯೋಗೇಶ.ಕೆ ಹಾಗೂ ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ, ಜಿ.ಐ.ಪಾಟೀಲ, ಎಜಿಪಿ ಆರ್.ಐ.ಖೋತ, ಎಲ್.ವಿ.ಬೋರಣ್ಣವರ, ಕಾರ್ಯದರ್ಶಿ ಎಸ್.ವೈ.ಪಾಟೀಲ, ಮಾಣಿಕಮ್ಮ ಕಬಾಡಗಿ ಇತರರು ಉಪಸ್ಥಿತರಿದ್ದರು. ಎಂ.ಬಿ.ಪಾಟೀಲ ಸ್ವಾಗತಿಸಿದರು. ಸುದರ್ಶನ ತಮ್ಮಣ್ಣವರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts