More

    ಬಾಕಿ ಉಳಿದ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

    ಬೀರೂರು: ನಗರೋತ್ಥಾನ ಯೋಜನೆ 4ನೇ ಹಂತದಲ್ಲಿ ಬೀರೂರು ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಪೂರ್ಣವಾಗಿರುವ ಡಾಂಬರ್, ಕಾಂಕ್ರೀಟ್ ರಸ್ತೆ ಮತ್ತು ಬಾಕ್ಸ್ ಚರಂಡಿ ಕಾಮಗಾರಿಯನ್ನು ಶುಕ್ರವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪರಿಶೀಲಿಸಿದರು.
    ನಗರೋತ್ಥಾನ ಯೋಜನೆ 4ನೇ ಹಂತದಲ್ಲಿ ಬೀರೂರು ಪುರಸಭೆ ವ್ಯಾಪ್ತಿಗೆ ಒಟ್ಟು 6.17 ರೂ. ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ 4.66 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಂಡಿರುವ ರಾಜಾಜಿನಗರ, ಹಳೇ ಅಜ್ಜಂಪುರ ರಸ್ತೆ, ಮಾರ್ಗದ ಕ್ಯಾಂಪ್ ಬಡಾವಣೆಗಳಲ್ಲಿ ಪರಿಶೀಲನೆ ನಡೆಸಿದರು.
    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರೋತ್ಥಾನ ಯೋಜನೆಯಡಿ ನಿರ್ಮಿಸಿರುವ ಶೇ.25 ರಷ್ಟು ಕಾಮಗಾರಿಗಳನ್ನು ಪರಿಶೀಲಿಸುವ ಅಧಿಕಾರ ಜಿಲ್ಲಾಧಿಕಾರಿಗಿದೆ. ಇಲ್ಲಿ ನ ಕಾಮಗಾರಿಯ ಗುಣಮಟ್ಟ ತೃಪ್ತಿದಾಯಕವಾಗಿದೆ. ಕೆಲವು ವಾರ್ಡ್‌ಗಳಲ್ಲಿ ಅಲ್ಪ ಸ್ವಲ್ಪ ಕೆಲಸಗಳು ಬಾಕಿಇದ್ದು ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
    ಕೆಶಿಪ್‌ನಿಂದ ನಿರ್ಮಿಸಿರುವ ಅಜ್ಜಂಪುರ ರಸ್ತೆ ಅಗಲೀಕರಣದಲ್ಲಿ ದೊಡ್ಡ ಹುನ್ನಾರ ನಡೆದಿದೆ. ರಸ್ತೆಗೆಗಾಗಿ ಭೂ ಸ್ವಾಧೀನವಾದ ಪ್ರದೇಶಕ್ಕೆ ಪರಿಹಾರ ಪಡೆದವರು ಮತ್ತೆ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಪಾದಾಚಾರಿ ರಸ್ತೆ ನಿರ್ಮಿಸಲು ಬಹಳಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪುರಸಭೆಯಿಂದ ೀ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿ.ಟಿ.ಚಂದ್ರಶೇಖರ್ ಆರೋಪಿಸಿದರು.
    ನಗರದ ಕೆಲವು ಕಡೆಗಳಲ್ಲಿ ರಸ್ತೆ ಎತ್ತರವಾಗಿದೆ. ಇನ್ನೂ ಕಡೆ ಮನೆಗಳಿಗೆ ಮಳೆ ನೀರು ನುಗ್ಗುವ ಭೀತಿ ಇದೆ ಎಂದು ಡಿಸಿ ಬಳಿ ನಾಗರಿಕರು ತಮ್ಮ ಸಮಸ್ಯೆ ಹಂಚಿಕೊಂಡರು. ಯೋಜನಾ ನಿರ್ದೇಶಕಿ ನಾಗರತ್ನ, ಇಇ ಸೋಮಶೇಖರ್ ಮತ್ತಿಕಟ್ಟೆ, ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ, ಪುರಸಭೆ ಇಂಜಿನಿಯರ್ ನೂರುದ್ದೀನ್, ವೀಣಾ, ಮತ್ತು ಸಿಬ್ಬಂದಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts