More

    ರಟ್ಟಿಹಳ್ಳಿ ರಥಬೀದಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ

    ರಟ್ಟಿಹಳ್ಳಿ: ಪಟ್ಟಣದ ರಥಬೀದಿಯ ಪ್ರಮುಖ ರಸ್ತೆಯ ಕಾಮಗಾರಿಯನ್ನು ಕೂಡಲೇ ಪೂರ್ಣಗಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಗುರುವಾರ ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರು.

    ಸ್ಥಳೀಯ ನಿವಾಸಿ ರಮೇಶ ಭೀಮಪ್ಪನವರ ಮತ್ತು ಮಹೇಶ ಮಳಗೊಂಡರ ಮಾತನಾಡಿ, ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ರಥ ತಲುಪವ ಗಡಿಯವರೆಗಿನ (ಕುಂಬಾರ ಓಣಿಯವರೆಗೆ) ರಥಬೀದಿಯ ಪ್ರಮುಖ ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು 3 ತಿಂಗಳ ಹಿಂದೆ ಆರಂಭಿಸಲಾಗಿದೆ. ಆದರೆ, ನಂತರ 2 ತಿಂಗಳಿನಿಂದ ಕಾಮಗಾರಿಗ ಸ್ಥಗಿತಗೊಂಡಿದೆ. ರಸ್ತೆಯಲ್ಲಿ ಹಾಕಿರುವ ಖಡಿಯಿಂದಾಗಿ ವಾಹನ, ಜನರ ಸಂಚಾರಕ್ಕೂ ಅಡ್ಡಿಯಾಗಿದೆ. ಗಾಳಿಯಿಂದಾಗಿ ಖಡಿಯ ಧೂಳು ಅಕ್ಕಪಕ್ಕದ ಮನೆಗಳಿಗೆ ಸೇರುತ್ತಿದ್ದು, ವೃದ್ಧರು, ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ.

    ಕುಮಾರೇಶ್ವರ ಶಾಲೆ ಮತ್ತು ಕಾಲೇಜ್ ಹೋಗುವ ನೂರಾರು ಮಕ್ಕಳು ಪ್ರತಿದಿನ ಈ ರಸ್ತೆಯಲ್ಲಿ ಓಡಾಡಬೇಕಿದೆ. ರಸ್ತೆಯಲ್ಲಿ ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ರಥೋತ್ಸವವು ಏ. 1ರಂದು ಜರುಗಲಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೊಡ್ಡ ರಥೋತ್ಸವವು ಇದೇ ರಸ್ತೆಯಲ್ಲಿ ಬಂದು ಗಡಿ ತುಲುಪಿ ಪುನಃ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಗುಗ್ಗಳ ಮಹೋತ್ಸವವು ಜರುಗುವುದರಿಂದ ಬರೀ ಗಾಲಿನಲ್ಲಿ ಜನರು ರಥೋತ್ಸವದ ವೇಳೆ ಇಲ್ಲಿಗೆ ಆಗಮಿಸುತ್ತಾರೆ. ಪ್ರಸ್ತುತ ರಸ್ತೆಗೆ ಕೇವಲ ಖಡಿ ಹಾಕಿ ಬಿಟ್ಟಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ರಥೋತ್ಸವಕ್ಕೂ ಮುನ್ನವೇ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪಟ್ಟಣ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಸ್ಥಳೀಯ ನಿವಾಸಿಗಳಾದ ವಿಜಯ ಚಕ್ರಸಾಲಿ, ಗ್ರಾಪಂ ಮಾಜಿ ಸದಸ್ಯೆ ಪದ್ಮಶ್ರೀ ಭೀಮಪ್ಪನವರ, ಶೈಲಜಾ ಭೀಮಪ್ಪನವರ, ರೂಪಾ ಬೊಂಗಾಲೆ, ಕರಬಸಮ್ಮ ಗುಂಡಗಟ್ಟಿ, ವಿನೋದಾ ಬೊಂಗಾಳೆ, ರವೀಂದ್ರ ಕೋಟಿಹಾಳ, ಅಶೋಕ ದ್ಯಾವಕ್ಕಳವರ, ಗೌರಮ್ಮ ಭೀಮಪ್ಪನವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts