More

    ಸದ್ಗುರು ವಿರುದ್ಧ ಅರಣ್ಯಾಧಿಕಾರಿಗೆ ದೂರು; ಹಾವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿರುವ ಆರೋಪ

    ಚಿಕ್ಕಬಳ್ಳಾಪುರ: ಇತ್ತೀಚೆಗೆ ತಾಲೂಕಿನ ಹನುಮಂತಪುರದ ಆದಿಯೋಗ ಕೇಂದ್ರದಲ್ಲಿ ಕೈಗೊಂಡಿದ್ದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಹಾವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿದ ಈಶ ಫೌಂಡೇಷನ್‌ನ ಸದ್ಗುರು ವಿರುದ್ಧ ಅರಣ್ಯಾಧಿಕಾರಿಗೆ ದೂರು ನೀಡಲಾಗಿದೆ.

    ಸದ್ಗುರು ಸಾರ್ವಜನಿಕವಾಗಿ ಜೀವಂತ ಹಾವನ್ನು ಹಿಡಿದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ್ದಾರೆ. ಇದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚಿಕ್ಕಬಳ್ಳಾಪುರದ ಉರಗರಕ್ಷಕ ಪೃಥ್ವಿರಾಜ್ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಗೆ ದೂರು ನೀಡಿದ್ದಾರೆ.

    ಸದ್ಗುರು ವಿರುದ್ಧ ಅರಣ್ಯಾಧಿಕಾರಿಗೆ ದೂರು; ಹಾವನ್ನು ಕೈಯಲ್ಲಿ ಹಿಡಿದು ಪ್ರದರ್ಶಿಸಿರುವ ಆರೋಪತಪ್ಪು ಮಾಹಿತಿಯಿಂದ ಗೊಂದಲ, ಈಶ ಪ್ರತಿಷ್ಠಾನ ಸ್ಪಷ್ಟನೆ

    ಈಶ ಕೇಂದ್ರದಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಸದ್ಗುರುಗಳು ಹಾನಿಯಾಗದಂತೆ ಕಾಡಿಗೆ ಬಿಟ್ಟಿದ್ದಾರೆ. ಆದರೆ, ತಪ್ಪು ಮಾಹಿತಿಯಿಂದ ಕೆಲವರು ದೂರು ನೀಡಿದ್ದಾರೆ ಎಂದು ಈಶ ಪ್ರತಿಷ್ಠಾನ ಸ್ಪಷ್ಟನೆ ನೀಡಿದೆ. ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಹಾವು ಕಾಣಿಸಿಕೊಂಡಿದ್ದನ್ನು ಸ್ವಯಂಸೇವಕರೊಬ್ಬರು ಸದ್ಗುರು ಗಮನಕ್ಕೆ ತಂದರು. ಇದನ್ನು ಸಮೀಪದ ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ. ಹಾವಿಗೆ ಯಾವುದೇ ಅಪಾಯವಾಗಿಲ್ಲ ಎಂಬುದಾಗಿ ತಿಳಿಸಿದೆ.

    ಹಾವುಗಳ ಕುರಿತ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಮತ್ತು ಅವುಗಳ ಸಂರಕ್ಷಣೆಗೆ ಉತ್ತೇಜಿಸುವುದರ ಬಗ್ಗೆ ಸದ್ಗುರು ಸಮಾರಂಭದಲ್ಲಿ ಪ್ರಸ್ತಾಪಿಸಿದರು. ಹಾವುಗಳನ್ನು ಅನವಶ್ಯಕವಾಗಿ ನಕಾರಾತ್ಮಕವಾಗಿ ನೋಡಲಾಗುತ್ತದೆ. ಆದರೆ, ಇತರರು ದಾಳಿ ಮಾಡದ ಹೊರತು, ಅವು ಹಾನಿ ಮಾಡುವುದಿಲ್ಲ. ಏಕೆಂದರೆ ಮನುಷ್ಯ ಅದರ ಆಹಾರವಲ್ಲ. ವಾಹನ ಅಪಘಾತ ಸೇರಿ ಇತರ ಕಾರಣಗಳಿಂದ ಸಾಯುವವರಿಗಿಂತ ಹಾವು ಕಡಿತದಿಂದ ಸಾಯುವವರ ಸಂಖ್ಯೆ ತುಂಬಾ ಕಡಿಮೆ. ಆದರೂ ಜನರಿಗೆ ಹಾವಿನ ಬಗ್ಗೆ ತುಂಬಾ ಭೀತಿ ಇದೆ ಎಂದು ಕಾರ್ಯಕ್ರಮದಲ್ಲಿ ಸದ್ಗುರು ಹೇಳಿದ್ದರು.

    ಬದುಕಿದ್ದ ವೃದ್ಧೆಯನ್ನೇ ಕಚ್ಚಿ ಕಚ್ಚಿ ತಿಂದ ಬೀದಿನಾಯಿಗಳು!; ಸಾರ್ವಜನಿಕರಿಂದ ಅಂತ್ಯಸಂಸ್ಕಾರ..

    ಕಾಂತಾರ: 2 ವಾರ ಕಳೆದರೂ ತಗ್ಗದ ಅಬ್ಬರ; ಬಾಲಿವುಡ್ ಚಿತ್ರಗಳೆರಡೂ ತತ್ತರ!

    2 ವರ್ಷಗಳಿಂದ ಬೇರೆ ಇದ್ದ ದಂಪತಿ, 2 ದಿನಗಳ ಹಿಂದೆ ಮತ್ತೆ ಬಂದ ಪತಿ: ಪತ್ನಿಗೆ ಚುಚ್ಚಿ ಚುಚ್ಚಿ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts