More

    ಸ್ಪರ್ಧಾತ್ಮಕ ಯುಗದಲ್ಲಿ ಇ-ಕಾನ್ಫರೆನ್ಸ ಅಗತ್ಯ

    ಬೆಳಗಾವಿ: ನಗರದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದಿಂದ ಈಚೆಗೆ ಇ-ಸಮ್ಮೇಳನ ಜರುಗಿತು. ಸಸಿಗೆ ನೀರು ಹಾಕುವ ಮೂಲಕ ತೋಂಟದ ಡಾ. ಸಿದ್ಧರಾಮ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇ-ಕಾನ್ಫರೆನ್ಸ್‌ಗಳು ಅವಶ್ಯಕ ಎಂದರು.

    ಅತಿಥಿಯಾಗಿ ಆಗಮಿಸಿದ್ದ ಐಐಟಿ ಭುವನೇಶ್ವರ ನಿರ್ದೇಶಕ ಡಾ. ರಾಜಕುಮಾರ ಅವರು ಕೃಷಿ ಆರೋಗ್ಯ, ರೊಬೊಟಿಕ್ಸ್ ಮತ್ತು ಸಂಹಹನ, ಅಪ್ಲಿಕೇಷನ್ಸ್ ಆಫ್ ಇಂಟಲಿಜೆಂಟ್ ಕಂಪ್ಯೂಟಿಂಗ್ ಮಹತ್ವವನ್ನು ವಿವರಿಸಿದರು. ಇ-ಸಮ್ಮೇಳನದ ಆಯೋಜಕಿ ಡಾ. ಜಯಶ್ರೀ ರೂಢಗಿ ಇ-ಸಮ್ಮೇಳನದ ಬಗ್ಗೆ ವಿವರಿಸಿದರು.

    ಪ್ರಾಚಾರ್ಯ ಡಾ. ಸಿದ್ದರಾಮಪ್ಪ ಇಟ್ಟಿ ಮಾತನಾಡಿ, ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರಥಮ ಇ-ಸಮ್ಮೇಳನದ ಮಹತ್ವ ವಿವರಿಸಿದರು. ಪ್ರೊ. ಶಿಲ್ಪಾ ಬಿ., ಪ್ರೊ. ವೀಣಾ ಪಿ., ಪ್ರೊ. ಅನಿತಾ ಸ್ವಾಗತ ಗೀತೆ ಹಾಡಿದರು. ಅಕಾಡೆಮಿಕ್ ಡೀನ್ ಡಾ. ಶ್ರೀಧರ ಅಯ್ಯರ್ ಪರಿಚಯಿಸಿದರು. ಮಹಾವಿದ್ಯಾಲಯದ ಗವರ್ನಿಂಗ್ ಚೇರ್ಮನ್ ಡಾ.ಎಫ್.ವಿ. ಮಾನ್ವಿ, ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ಹೊಸ ವಿಷಯಗಳನ್ನು ಹೊರತರುವಲ್ಲಿ ಇ-ಸಮ್ಮೇಳನಗಳು ಉಪಯುಕ್ತ ಎಂದರು.

    ಡಾ.ಸುನೀಲ ಹರಕಣ್ಣವರ, ಡಾ.ಶಿಲ್ಪಾ ಮಾಯಣ್ಣವರ ಇ-ಸಮ್ಮೇಳನದ ಸಂಯೋಜಿಸಿದ್ದಾರೆ. ಡಾ.ಅಲ್ಲಮಪ್ರಭು ಸ್ವಾಮೀಜಿ, ಡಾ. ಉದಯ ವಾಲಿ ಉಪಸ್ಥಿತರಿದ್ದರು. ಪ್ರೊ. ಶಂಕರಗೌಡ ಪಾಟೀಲ, ಪ್ರೊ. ಸೌಮ್ಯ ಹಲಗತ್ತಿ ನಿರೂಪಿಸಿದರು. ಡಾ. ಶಿಲ್ಪಾ ಮಾಯಣ್ಣವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts