More

    ಮಹನೀಯರು ಒಂದು ಸಮುದಾಯಕ್ಕೆ ಸೀಮಿತರಾಗದಿರಲಿ

    ದಾವಣಗೆರೆ: ಮಹನೀಯರನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಬಾರದು. ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಬೇಕು. ಸೂರ್ಯ, ಚಂದ್ರ, ಭೂಮಿ ಇರುವವರೆಗೂ ಅಮರಶಿಲ್ಪಿ ಜಕಣಾಚಾರಿ ಅಮರರಾಗೇ ಇರುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

    ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ಅಮರಶಿಲ್ಪಿ ಜಕಣಾಚಾರಿ ಜಯಂತಿ’ ಆಚರಣೆ ವೇಳೆ ಮಾತನಾಡಿ, ಮಹಾನ್ ಚೇತನಗಳ ಸ್ಮರಣೆಗೆ ಸರ್ಕಾರದಿಂದ ಜಯಂತಿ ಆಚರಿಸಲಾಗುತ್ತಿದೆ. ಕಷ್ಟದಲ್ಲಿರುವ ಜನರ ನೆರವಿಗೆ ಉಳ್ಳವರು ಮನಸ್ಸು ಮಾಡಬೇಕು ಎಂದು ಹೇಳಿದರು.

    ಸರ್ಕಾರಿ ಅಭಿಯೋಜಕ ಎಸ್.ಪಿ.ಪಾಟೀಲ್ ಮಾತನಾಡಿ, ವಿಶ್ವಕರ್ಮ ಸಮಾಜ ದೇಶಾದ್ಯಂತ ನೆಲೆಸಿದೆ. ಜಕಣಾಚಾರಿ ನಿರ್ಮಿಸಿದ ದೇಗುಲಗಳು ಸರ್ವ ಸಮುದಾಯದವರೂ ಪೂಜಿಸಿ ಆರಾಧಿಸುವ ದೇವಾಲಯಗಳಾಗಿವೆ ಹಾಗಾಗಿ ಪ್ರತಿಯೊಬ್ಬರು ಅವರ ಜಯಂತಿ ಆಚರಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

    ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಶಿವಾನಂದ ಮಾತನಾಡಿ, ಕನ್ನಡ ನಾಡು ದೇಶದಲ್ಲಿಯೇ ಶಿಲ್ಪಕಲೆ ಶ್ರೀಮಂತಿಕೆ ಹೊಂದಿದ್ದು, ಅದನ್ನು ನೋಡಲು ವಿದೇಶಿಯರು ಬರುತ್ತಿದ್ದಾರೆ. ಇದರ ಕೀರ್ತಿ ಅಮರಶಿಲ್ಪಿ ಜಕಣಚಾರಿಯವರಿಗೆ ಸಲ್ಲುತ್ತದೆ. ಸರ್ಕಾರದಿಂದ ಅವರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಯುಡಿಸಿ ಯೋಜನಾಧಿಕಾರಿ ನಜ್ಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ವಿಶ್ವಕರ್ಮ ಸಮಾಜದ ನಾಗೇಂದ್ರಚಾರಿ, ವಿರೇಂದ್ರಚಾರಿ, ಸಾಲುಮರದ ವೀರಾಚಾರಿ, ತಹಸೀಲ್ದಾರ್ ಬಿ.ಎಸ್.ಗಿರೀಶ್, ಹರಿಹರ ತಹಸೀಲ್ದಾರ್ ರಾಮಚಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts