More

    ಸಮುದಾಯಕ್ಕೆ ಒಳಿತಾಗುವ ಕಾರ್ಯ ಮಾಡಿ

    ಚಿಕ್ಕೋಡಿ: ಯುವಜನರು ಯುವ ಸಂಘಟನೆಗಳನ್ನು ಸ್ಥಾಪಿಸುವ ಮೂಲಕ ಸಮುದಾಯದ ಜನರಿಗೆ ಒಳಿತಾಗುವ ರಚನಾತ್ಮಕ ಕಾರ್ಯಗಳನ್ನು ಮಾಡಿ ಕ್ರಿಯಾಶೀಲರಾಗಿ ಬೆಳೆದು ಸರ್ಕಾರಿ ಇಲಾಖೆ ಹಾಗೂ ಸಮಾಜದ ಕೊಂಡಿಯಾಗಿ ಕಾರ್ಯ ಮಾಡಬೇಕಾದ ಅವಶ್ಯಕತೆಯಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ರೋಹಿತ ಕಲರಾ ಹೇಳಿದರು.

    ಪಟ್ಟಣದ ಸಿ.ಎಲ್.ಇ ಸಂಸ್ಥೆಯ ಐ.ಟಿ.ಐ. ಕಾಲೇಜಿನ ಸಭಾಭವನದಲ್ಲಿ ಬೆಳಗಾವಿ ನೆಹರು ಯುವ ಕೇಂದ್ರ ಹಾಗೂ ಬಸವೇಶ್ವರ ನಾಟ್ಯ ಸಂಘ ಸಹಯೋಗದಲ್ಲಿ ಹಮ್ಮಿಕೊಂಡ ಚಿಕ್ಕೋಡಿ ತಾಲೂಕು ಯುವ ಮಂಡಳಗಳ ಅಭಿವೃದ್ಧಿ ಸಮಾವೇಶ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನೆಹರು ಯುವ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ತರಬೇತಿ ನೀಡಿ ಸಮಾಜಕ್ಕೆ ಬೀದಿ ನಾಟಕ ಸೇರಿ ವಿವಿಧ ಮೂಲಗಳಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಅತಿಥಿಗಳಾಗಿ ಆಗಮಿಸಿದ್ದ ಎಲ್‌ಐಸಿ ಅಭಿವೃದ್ಧಿ ಅಧಿಕಾರಿ ಆನಂದ ಆರ‌್ವಾರೆ ಮಾತನಾಡಿ, ಹಣಕಾಸಿನ ವ್ಯವಹಾರದ ಜತೆಗೆ ಇಲಾಖೆಗಳ ಕಾರ್ಯಗಳನ್ನು ಸರಳೀಕರಣ ಮಾಡಲು ತಾಂತ್ರಿಕ ಮಾಧ್ಯಮ ಬಹಳ ವೇಗವಾಗಿ ಬೆಳೆಯುತ್ತದೆ. ಇದರ ಸದ್ಬಳಕೆ ಮಾಡಿಕೊಂಡು ಯುವಕರು ತಮ್ಮ ಬದುಕಿನಲ್ಲಿ ಒಳ್ಳೆಯ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದರು. ಚಿಕ್ಕೋಡಿ ಆರೋಗ್ಯ ಶಿಕ್ಷಣಾಧಿಕಾರಿ ಬಿ.ವೈ. ನಾಯ್ಕರ್ ಅವರು ಸ್ವಚ್ಛ ಭಾರತ ಅಭಿಯಾನ, ಸಾಂಕ್ರಾಮಿಕ ರೋಗ ತಡೆ, ಭರತ ಕಲಾಚಂದ್ರ ಅವರು ಯುವ ಸಂಘಗಳ ರಚನೆ ಮತ್ತು ಸಾಮಾಜಿಕ ಕಾರ್ಯಗಳು, ವಿಮಲಾ ಚಿಣಗೆೆಕರ ಮಹಿಳಾ ಸಬಲೀಕರಣ ಹಾಗೂ ಜಲ ಶಕ್ತಿ ಕುರಿತು ಉಪನ್ಯಾಸ ನೀಡಿದರು. ಐಟಿಐ ಕಾಲೇಜ ಪ್ರಾಚಾರ್ಯ ಪ್ರಕಾಶ ಚಣ್ಣವರ ಅಧ್ಯಕ್ಷತೆ ವಹಿಸಿದ್ದರು. ಅಪ್ಪಾಸಾಹೇಬ ಪಾಟೀಲ, ಪ್ರಕಾಶ ಚಂದನವರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts