More

    ಸಮುದಾಯ ಅಭಿವೃದ್ಧಿಗೆ ಎನ್‌ಎಸ್‌ಎಸ್ ಪೂರಕ

    ಬೆಳಗಾವಿ: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಸೆಂಟರ್ (ಕಾಹೇರ್), ಎನ್‌ಎಸ್‌ಎಸ್ ಸೆಲ್ ವತಿಯಿಂದ ಗುರುವಾರ ಜೆಎನ್‌ಎಂಸಿ ಕ್ಯಾಂಪಸ್‌ನ ಎಸ್.ಜಿ. ದೇಸಾಯಿ ಡಿಜಿಟಲ್ ಲೈಬ್ರರಿಯಲ್ಲಿ ‘ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ’ ಕುರಿತು ವಿಶ್ವವಿದ್ಯಾಲಯ ಮಟ್ಟದ ತರಬೇತಿ ಕಾರ್ಯಾಗಾರ ನಡೆಯಿತು.

    ಕೇಂದ್ರ ಸರ್ಕಾರದಿಂದ ಪಡೆದ ಹಣದ ನಿರ್ವಹಣೆಗಾಗಿ ಎನ್‌ಎಸ್‌ಎಸ್ ಪ್ರೋಗ್ರಾಂ ಅಧಿಕಾರಿಗಳು ಮತ್ತು ಕಾಹೇರ್ ಘಟಕ ಕಾಲೇಜುಗಳ ಅಕೌಂಟೆಂಟ್‌ಗಳಿಗೆ
    ಪಿಎಫ್‌ಎಂಎಸ್‌ನಲ್ಲಿ ತರಬೇತಿ ನೀಡಲಾಯಿತು.

    ಕುಲಸಚಿವ ಡಾ. ವಿ.ಎ. ಕೋಠಿವಾಲೆ ಮಾತನಾಡಿ, ಎನ್‌ಎಸ್‌ಎಸ್ ಚಟುವಟಿಕೆಗಳು ಸಮುದಾಯಕ್ಕೆ ಉಪಯೋಗವಾಗುತ್ತಿವೆ. ಸರ್ಕಾರದ ಎಲ್ಲ ಯೋಜನೆ, ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

    ಸರ್ಕಾರದ ರಾಜ್ಯ ಸಂಪರ್ಕ ಅಧಿಕಾರಿ ಡಾ. ಗಣನಾಥ ಶೆಟ್ಟಿ ಯೆಕ್ಕರ್ ಮಾತನಾಡಿ, ಭವಿಷ್ಯದಲ್ಲಿ ಪಿಎಫ್‌ಎಂಎಸ್ ಮೂಲಕ ನಿಧಿ ವರ್ಗಾವಣೆ ಮತ್ತು ನಿರ್ವಹಣೆ ಹೇಗೆ ಅವಿಭಾಜ್ಯ ಅಂಗವಾಗಲಿದೆ ಎಂಬುದನ್ನು ವಿವರಿಸಿದರು.

    ಕಾಹೇರ್‌ನ ಹಣಕಾಸು ಅಧಿಕಾರಿ ಎಸ್.ಎಂ. ಜೋತವಾರ ಮಾತನಾಡಿ, ಪಿಎಫ್‌ಎಂಎಸ್ ಮತ್ತು ಅದರ ಪ್ರಯೋಜನಗಳನ್ನು ವಿವರಿಸಿದರು. ರಾಜ್ಯ ಎನ್‌ಎಸ್‌ಎಸ್ ಅನುಷ್ಠಾನ ಅಧಿಕಾರಿ ಪೂರ್ಣಿಮಾ ಜೋಗಿ ಮತ್ತು ರಾಜ್ಯ ಎನ್‌ಎಸ್‌ಎಸ್ ಸೆಲ್ ಬೆಂಗಳೂರಿನ ಅಕೌಂಟ್ಸ್ ಸೂಪರಿಂಟೆಂಡೆಂಟ್ ಮೋಹನ್ ವಿ.ಕೆ. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಭಾಗವಹಿಸಿದವರಿಗೆ ಪಿಎಫ್‌ಎಂಎಸ್ ಸಾಫ್ಟ್‌ವೇರ್ ಮೂಲಕ ಡೆಮೋ ವ್ಯವಸ್ಥೆ ಕಲ್ಪಿಸಲಾಗಿತ್ತು.

    ಕಾಹೇರ್ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕಿ ಡಾ. ಅಶ್ವಿನಿ ನರಸಣ್ಣವರ ಸ್ವಾಗತಿಸಿದರು. ಡಾ. ಸಯೀದ್ ಎಂ. ಕಿಲ್ಲೇದಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts