More

    ರಟ್ಟಿಹಳ್ಳಿಯಲ್ಲಿ ಕೋಮು ಗಲಭೆ, ಕಲ್ಲು ತೂರಾಟ; ಇಂದು ಎಡಿಜಿಪಿ ಅಲೋಕ್ ಕುಮಾರ್​ ಭೇಟಿ…

    ಹಾವೇರಿ: ನಿನ್ನೆ ರಟ್ಟಿಹಳ್ಳಿಯಲ್ಲಿ ಕೋಮು ಗಲಭೆ ಮತ್ತು ಕಲ್ಲು ತೂರಾಟ ನಡೆದಿದೆ. ಈ ಘಟನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಮಧ್ಯರಾತ್ರಿ ಮೂರು ಗಂಟೆಗೆ ರಟ್ಟಿಹಳ್ಳಿ ಪಟ್ಟಣದಲ್ಲಿ ಗಸ್ತು ಹಾಕಿದ್ದಾರೆ.

    ಕಲ್ಲು ತೂರಾಟ ಮಾಡಿದ್ದ ಪರಾರಿಯುಗಿದ್ದ ಯುವಕರ ಮನೆಗೆ ಪೊಲಿಸರು ಭೇಟಿ ನೀಡಿದ್ದು ಈ ಸಂದರ್ಭ ಮನೆಗೆ ಬಂದ ಯುವಕರನ್ನು ಬಂಧಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪರಾರಿಯಾಗಿದ್ದ ಯುವಕರಲ್ಲಿ ಯಾರೂ ನಿನ್ನೆ ರಾತ್ರಿ ಅವರ ಮನೆಗೆ ಹೋಗಿಲ್ಲ ಎನ್ನಲಾಗಿದೆ.

    ಕೋಮು ಗಲಭೆ ನಡೆದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು ಬೆಳಿಗ್ಗೆ ಅಂಗಡಿ ಮುಗ್ಗಟ್ಟು ಓಪನ್ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ. ಅಂಗಡಿಗಳನ್ನು ತೆರೆದ ವ್ಯಾಪಾರಿಗಳಿಗೆ ಮುಚ್ಚುವಂತೆ ಹೇಳಿರುವ ಪೊಲೀಸರು ಗಸ್ತು ಹೊಡೆಯುತ್ತಿದ್ದಾರೆ. ಒಟ್ಟಿನಲ್ಲಿ ರಟ್ಟಿಹಳ್ಳಿ ಪ್ರಕರಣವನ್ನು ಪೊಲಿಸರು‌ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರಕರಣ ನಡೆದ ಹಿನ್ನೆಲೆಯಲ್ಲಿ ಇಂದು ರಟ್ಟಿಹಳ್ಳಿ ಪಟ್ಟಣಕ್ಕೆ ADGP ಅಲೋಕ ಕುಮಾರ್ ಭೇಟಿ ನೀಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts