More

    ಧರ್ಮಯುದ್ಧವಿಲ್ಲ, ಕಾನೂನು ಕಾಪಾಡಲು ಬದ್ಧ ಮಂಗಳೂರಿನಲ್ಲಿ ಸಿಎಂ ಸ್ಪಷ್ಟನುಡಿ

    ಮಂಗಳೂರು: ರಾಜ್ಯದಲ್ಲಿ ಯಾವುದೇ ಧರ್ಮಯುದ್ಧ ನಡೆಯುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ, ಇದು ನಮ್ಮ ಸ್ಪಷ್ಟ ನೀತಿಯೂ ಹೌದು, ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಅನಿವಾರ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
    ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಹಿಂದಿನಿಂದ ಸಮುದಾಯಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ, ಈ ಬಗ್ಗೆ ಗಮನವಿರಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಡಿಜಿಪಿಯವರು ನಿನ್ನೆಯೇ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದಾರೆ, ಕಾನೂನು ಸುವ್ಯವಸ್ಥೆ ರಕ್ಷಣೆ ಬಗ್ಗೆ ಸೂಚನೆ ನೀಡಿದ್ದಾರೆ, ಈ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ ಎಂದರು.

    ಸರಣಿ ಸಭೆಯಲ್ಲಿ ಭಾಗಿ
    ಚುನಾವಣಾ ತಯಾರಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಬಿಜೆಪಿ ವಿಭಾಗೀಯ ಸರಣಿ ಸಭೆಗಳಲ್ಲಿ ಪಾಲ್ಗೊಂಡರು.
    ಚುನಾವಣಾ ತಯಾರಿ ಹಿನ್ನೆಲೆ ವಿಭಾಗ ಮಟ್ಟದ ಸಭೆಗಳನ್ನು ‌ಮಾಡ್ತಾ ಇದ್ದೇವೆ, ಏ.16 ಮತ್ತು 17ರಂದು ರಾಜ್ಯ ಕಾರ್ಯಕಾರಿಣಿ ಸಭೆ ಮಾಡಿ ಪಕ್ಷದ ವಿಚಾರಗಳನ್ನು ಚರ್ಚೆ ಮಾಡುತ್ತೇವೆ ಎಂದೂ ತಿಳಿಸಿದರು.
    ನಗರದ ಹೋಟೆಲ್‌ ಓಷನ್‌ ಪರ್ಲ್‌ನಲ್ಲಿ ಇಡೀ ದಿನ ಸಭೆಗಳು ನಡೆಯುತ್ತಿವೆ. ಮೊದಲಿಗೆ ಉಡುಪಿ ಜಿಲ್ಲಾ ಬಿಜೆಪಿ ಪ್ರಮುಖರ ಸಭೆ ಆರಂಭಗೊಂಡಿದೆ, ಸಿಎಂ ಬೊಮ್ಮಾಯಿ, ಸಂಸದ ಡಿ.ವಿ.ಸದಾನಂದ ಗೌಡ, ಸಚಿವರಾದ ಎಸ್.ಅಂಗಾರ, ಕೋಟ‌ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಲಕ್ಷ್ಮಣ ಸವದಿ ಮುಂತಾದವರು ಪಾಲ್ಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts