More

    ಕಮಿಷನರೆಟ್‌ನಿಂದ ಸಮನ್ವಯ ಹೆಲ್ಪ್‌ಲೈನ್

    ಮಂಗಳೂರು: ಉದ್ಯೋಗ ಕಾರಣದಿಂದ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಕುಟುಂಬಗಳ ತುರ್ತು ಸಂಕಷ್ಟಗಳಿಗೆ ಸ್ಪಂದಿಸುವ ಹಾಗೂ ನೆರವು ನೀಡುವ ಸಲುವಾಗಿ ಪೊಲೀಸ್ ಕಮಿಷನರೆಟ್ ವತಿಯಿಂದ ಕೋವಿಡ್ ‘ಸಮನ್ವಯ’ ಹೆಲ್ಪ್‌ಲೈನ್‌ಗೆ ಶುಕ್ರವಾರ ಚಾಲನೆ ನೀಡಲಾಯಿತು.

    ವಿದೇಶದಲ್ಲಿರುವ ಎನ್‌ಆರ್‌ಐಗಳ ಜತೆ ಅವರ ಸಮಸ್ಯೆಗಳ ಕುರಿತಂತೆ ವೆಬಿನಾರ್ ನಡೆಸಿದ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಸಲಹೆ ಸೂಚನೆಗಳನ್ನು ಪಡೆದರು. ಕುವೈಟ್, ಕೆನಡಾ, ಯುಎಸ್‌ಎ, ಯುಎಇ, ಕತಾರ್, ಒಮಾನ್, ಸೌದಿ ಅರೇಬಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಲಂಡನ್, ಇಸ್ರೇಲ್, ಬಹ್ರೇನ್, ಹಾಂಕಾಂಗ್, ಜರ್ಮನಿ ಮೊದಲಾದ 20 ರಾಷ್ಟ್ರಗಳಿಂದ 100ಕ್ಕೂ ಅಧಿಕ ಮಂದಿ ವೆಬಿನಾರ್‌ನಲ್ಲಿ ಪಾಲ್ಗೊಂಡರು.

    ಮಂಗಳೂರು ಮತ್ತು ಸುತ್ತಮುತ್ತಲಿನ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಸೇವೆ, ನೆರವು ನೀಡುವ ಕಾರ್ಯ ಮಾಡುತ್ತಿದ್ದಾರೆ. ಆಹಾರ ವಿತರಣೆ, ಆಶ್ರಯತಾಣಗಳಿಗೆ ಆಹಾರ, ರಕ್ತ ಮತ್ತು ಪ್ಲಾಸ್ಮಾ ಸಂಬಂಧಿಸಿದ ವ್ಯವಸ್ಥೆ, ಉಚಿತ ಆಂಬುಲೆನ್ಸ್, ಆಸ್ಪತ್ರೆಗಳಲ್ಲಿ ಟೆಲಿ ಮೆಡಿಸಿನ್, ತುರ್ತು ಸಂದರ್ಭ ಖಾಸಗಿ ವಾಹನಗಳನ್ನು ಒದಗಿಸುವುದು, ಕೋವಿಡ್ ಸೇರಿಂತೆ ಇತರ ಸಾಮಾನ್ಯ ಸಂದರ್ಭಗಳಲ್ಲಿ ಮೃತರಾದವರ ಅಂತ್ಯಸಂಸ್ಕಾರ ಹಲವು ಸಂಘ ಸಂಸ್ಥೆಗಳ ಮೂಲಕ ನಡೆಯುತ್ತಿದ್ದು, ಅವರನ್ನು ಒಂದೇ ವೇದಿಕೆಗೆ ತರುವುದು. ವಿದೇಶಗಳಲ್ಲಿರುವ ನಗರ ಮೂಲದವರಿಗೆ ನೆರವಿನ ಅಗತ್ಯ ಕುರಿತಂತೆ ಈ ವೆಬಿನಾರ್ ನಡೆಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.

    ಹರಿದು ಬಂದ ಸಲಹೆಗಳು: ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿ ಸಮುದಾಯದ ಕಷ್ಟಗಳಿಗೆ ಸ್ಪಂದಿಸುವುದು, ಕೆಲಸ ನಿಮಿತ್ತ ವಾಪಸ್ ಹೋಗುವವರಿಗೆ ಆದ್ಯತೆ ನೆಲೆಯಲ್ಲಿ ಲಸಿಕೆ ನೀಡುವ ಕುರಿತಂತೆ ಹಲವಾರು ಸಲಹೆಗಳು ವೆಬಿನಾರ್‌ನಲ್ಲಿ ವ್ಯಕ್ತವಾಗಿವೆ ಎಂದು ಶಶಿಕುಮಾರ್ ಹೇಳಿದರು.

    ಕೋವಿಡ್ ಸಮನ್ವಯ ಹೆಲ್ಪ್‌ಲೈನ್ ನಂ-9480802300

    ವಿದೇಶದಲ್ಲಿರುವ ಮಂಗಳೂರು ಮೂಲದವರು, ಅವರ ಸಂಪರ್ಕ, ನೆರವಿಗಾಗಿ ಈ ಸಮನ್ವಯ ವೇದಿಕೆ ಆರಂಭಿಸಲಾಗಿದೆ. ಅನಿವಾಸಿ ಭಾರತೀಯರು ಸಹಾಯ, ನೆರವಿನ ನಿರೀಕ್ಷೆಗಾಗಿ, ಸಂದೇಶ, ಅಥವಾ ವಾಯ್ಸ ರೆಕಾರ್ಡ್, ವಿಡಿಯೋ ಸಂದೇಶ ಕಳುಹಿಸಿದಾಗ, ಸಂಬಂಧಪಟ್ಟವರಿಂದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು. ಈ ಹೆಲ್ಪ್‌ಲೈನ್ 24/7 ಕಾರ್ಯ ನಿರ್ವಹಿಸಲಿದೆ. ಜನಸ್ನೇಹಿ ನಡೆಯ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ

    ಎನ್.ಶಶಿಕುಮಾರ್
    ಪೊಲೀಸ್ ಆಯುಕ್ತ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts