More

    ನೆಮ್ಮದಿ ಬದುಕಿಗೆ ಅಧ್ಯಾತ್ಮ ಅಗತ್ಯ

    ಹೂವಿನಹಡಗಲಿ: ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಅಧ್ಯಾತ್ಮದ ಮಾರ್ಗ ಹಿಡಿಯಬೇಕು ಎಂದು ಜಂಗಮ ಕ್ಷೇತ್ರ ಲಿಂಗನಾಯಕಹಳ್ಳಿಯ ಚನ್ನವೀರ ಸ್ವಾಮೀಜಿ ಹೇಳಿದರು.

    ಇದನ್ನೂ ಓದಿ: ಸಾಹಿತ್ಯದಲ್ಲಿ ಅಧ್ಯಾತ್ಮ ಬಿತ್ತಿದ ಕುವೆಂಪು

    ಪಟ್ಟಣದ ಗವಿಸಿದ್ಧೇಶ್ವರ ಶಾಖಾ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 187ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮಾನವ ನಿಧನವಾಗಿ ಬದುಕಿನ ಮೌಲ್ಯಗಳ ಕೊಂಡಿಯನ್ನು ಕಳಚಿಕೊಳ್ಳುತ್ತಿದ್ದಾನೆ. ಕೇವಲ ದ್ವೇಷದ ಸಾಧಿಸುವ ಮನುಜನಿಗೆ ಅಧ್ಯಾತ್ಮದ ದಾರಿ ತೋರಿಸಬೇಕಿದೆ. ಶರಣರು ಸಮಾಜದಲ್ಲಿನ ತಾರತಮ್ಯಗಳನ್ನು ಹೋಗಲಾಡಿಸಲು ದೊಡ್ಡ ಕ್ರಾಂತಿ ಮಾಡಿದ್ದಾರೆ. ಉತ್ತಮ ಜೀವನ ಕಂಡುಕೊಳ್ಳಲು ಅಧ್ಯಾತ್ಮ ಅವಶ್ಯ ಎಂದರು.

    ಲಿಂಗನಾಯಕಹಳ್ಳಿಯ ಚನ್ನವೀರ ಸ್ವಾಮೀಜಿ ಆಶೀರ್ವಚನ

    ಮೈನಳ್ಳಿಯ ಸಿದ್ಧೇಶ್ವರ ಸ್ವಾಮೀಜಿ, ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ, ಗದಗಿನ ಸರ್ಕಾರಿ ಆಯುರ್ವೇದ ಆಸ್ಪತ್ರೆ ಅಧಿಕಾರಿ ಸುರೇಶ ಹಿರೇಮಠ, ನಿವೃತ್ತ ಪ್ರಾಚಾರ್ಯ ಡಾ.ಕೆ.ರುದ್ರಪ್ಪ, ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಎಂ.ಉಮೇಶ್, ನಿವೃತ್ತ ಶಿಕ್ಷಕ ಶಾಂತರಾಜ ಎಂ, ಅರ್ಬನ್ ಕೋಆಪರೇಟಿವ್ ಬ್ಯಾಂಕ್ ವ್ಯವಸ್ಥಾಪ ಕರಿಯತ್ತಿನ ಸದಾನಂದಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts