More

    ನಾಳೆ ಆಕಾಶದಲ್ಲಿ ಅಪರೂಪದ ವಿದ್ಯಮಾನ: ಭೂಮಿ ಸಮೀಪ ಸ್ವಾನ್ ಧೂಮಕೇತು!

    ಬೆಂಗಳೂರು: ಬುಧವಾರ (ಮೇ 13) ಬೆಳಗ್ಗೆ ಆಕಾಶದಲ್ಲಿ ಅಪರೂಪದ ವಿದ್ಯಮಾನವೊಂದು ಘಟಿಸಲಿದೆ. ಭೂಮಿಗೆ ಅತಿ ಸಮೀಪದಲ್ಲಿ ಪ್ರಕಾಶಮಾನವಾದ ಧೂಮಕೇತು ಹಾದು ಹೋಗಲಿದ್ದು, ಈ ಧೂಮಕೇತುವಿಗೆ ಸ್ವಾನ್ ಎಂದು ಹೆಸರಿಡಲಾಗಿದೆ.

    ಈ ಧೂಮಕೇತು ಸೂರ್ಯನ ಸುತ್ತ ಸುತ್ತುತ್ತ ಭೂಮಿ ಸಮೀಪಕ್ಕೆ ಬರುತ್ತಿದ್ದು, ಸೂರ್ಯೋದಯದ ಮುನ್ನ ಇದನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ!
    1986ರಲ್ಲಿ ಕಂಡಿದ್ದ ಉದ್ದ ಬಾಲದ ಹ್ಯಾಲಿ ಹೆಸರಿನ ಧೂಮಕೇತು 2061ರಲ್ಲಿ ಇನ್ನೊಮ್ಮೆ ನೋಡಲು ಸಿಗುವ ಸಾಧ್ಯತೆ ಇದೆ. ಸೋಲಾರ್ ಹೆಲಿಯೊಸ್ಪಿಯರ್ ಅಬ್ಸರ್ವರ್‌ನ ಸ್ವಾನ್ ಕ್ಯಾಮರಾ ಗಮನಿಸಿದಂತೆ ಇದು ಮೇ 28 ರಂದು ಸೂರ್ಯನ ಸಮೀಪ ಬರಲಿದೆ. ಈ ವರ್ಷ ಬಿಟ್ಟರೆ ಇನ್ನು ಕಾಣಸಿಗುವುದೇ ಲಕ್ಷಾಂತರ ವರ್ಷ ಬಿಟ್ಟು ಎನ್ನುತ್ತಾರೆ ಪೂರ್ಣಪ್ರಜ್ಞ ಕಾಲೇಜು ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅತುಲ್ ಭಟ್.

    ಸೂರ್ಯನ ಸಮೀಪದಲ್ಲಿರುವ ಕಾರಣ, ಸೂರ್ಯೋದಯ ಮುಂಚೆ ಒಂದೂವರೆ ಗಂಟೆ ಕಾಣಿಸುತ್ತದೆ. ಉತ್ತರಾರ್ಧ ಗೋಳದಲ್ಲಿ, ಅಥವಾ ಉಡುಪಿ, ಮಂಗಳೂರಿನಂತಹ ಸ್ಥಳಗಳಲ್ಲಿ ಪ್ರತಿದಿನ ಮುಂಜಾನೆ 4ಕ್ಕೆ ಕಾಣಲಿದೆ. ಇದು ಮೀನ ರಾಶಿಯಲ್ಲಿದ್ದು, ಮೇ 15ರ ಹೊತ್ತಿಗೆ ತ್ರಿಕೋನ ರಾಶಿಗೆ ಹೋಗುತ್ತದೆ. ಬೆಳಗ್ಗೆ 5:30ರ ಸುಮಾರಿಗೆ ಈಶಾನ್ಯ ದಿಕ್ಕಿನಲ್ಲಿ ಕಾಣಿಸುತ್ತದೆ. ದಿನ ಕಳೆದಂತೆ ರಾಶಿಗಳು ಹಿಂದಿನ ದಿನಕ್ಕಿಂತ 4 ನಿಮಿಷ ಮುಂಚೆ ಉದಯಿಸುತ್ತದೆ. ಮೇ 18ರಂದು ಈ ಧೂಮಕೇತು ಪಾರ್ಥ ರಾಶಿಯನ್ನು ಪ್ರವೇಶಿಸುವುದನ್ನು ಕಾಣಬಹುದು. 

    ಇದನ್ನೂ ಓದಿ: ಕರೊನಾ ಹೇರ್​​ಸ್ಟೈಲ್​ಗೀಗ ಡಿಮ್ಯಾಂಡಪ್ಪೋ ಡಿಮ್ಯಾಂಡು

    20ರಂದು ದರ್ಶನ ಸೂಕ್ತ : ಈ ಧೂಮಕೇತುವನ್ನು ನೋಡಲು ಮೇ 20 ಒಳ್ಳೆಯ ದಿನ. ಆ ದಿನ ಇದು ಪಾರ್ಥ ರಾಶಿಯ ಎರಡನೇ ಅತಿ ಪ್ರಕಾಶಮಾನವಾದ ಆಲ್ಗೋಲ್ ನಕ್ಷತ್ರ ಬಳಿ ಹಾದುಹೋಗುತ್ತದೆ. ಈ ನಕ್ಷತ್ರವನ್ನು ಗುರುತಿಸಲು ಮತ್ತು ಧೂಮಕೇತು ಕಂಡುಹಿಡಿಯಲು ನಮಗೆ ಸಹಾಯ ಮಾಡಲು ಸಾಕಷ್ಟು ಸ್ಕೈ ಮ್ಯಾಪ್ ಅಪ್ಲಿಕೇಶನ್‌ಗಳು ಲಭ್ಯವಿದೆ. ಧೂಮಕೇತು ಮೇ 22ರ ತನಕ ಇದೇ ಹೊಳಪಿನಲ್ಲಿ ಉಳಿಯುವುದರಿಂದ ಹವ್ಯಾಸಿ ಖಗೋಳ ವಿಜ್ಞಾನಿಗಳು ಸುಲಭವಾಗಿ ನೋಡಬಹುದು. ಈ ಧೂಮಕೇತು ದೂರದರ್ಶಕ ಹಾಗೂ ದುರ್ಬೀನುಗಳ ಮೂಲಕ ಮಾತ್ರ ಗೋಚರಿಸುವಷ್ಟು ಪ್ರಕಾಶಮಾನವಾಗಿದೆ ಎಂದು ಅಂದಾಜಿಸಲಾಗಿದ್ದರೂ ಈಗಾಗಲೇ ದಕ್ಷಿಣ ಗೋಳಾರ್ಧದ ಜನರು ಜನರು ವೀಕ್ಷಣೆ ಮಾಹಿತಿ ನೀಡಿರುವ ಕಾರಣ ನಮಗೂ ಬರಿಗಣ್ಣಿಗೆ ಗೋಚರಿಸುವ ಸಾಧ್ಯತೆಗಳಿವೆ.

    ಮಾಹಿತಿ ಸಂಗ್ರಹ : ಸ್ವಾನ್ ಧೂಮಕೇತು ಭೂಮಿಗೆ ಹತ್ತಿರವಾಗುತ್ತಿರುವುದು ನಿಜ. ಅದರ ಗೋಚರತೆ ಕುರಿತು ಇನ್ನಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಬೆಂಗಳೂರಿನ ಜವಾಹರ ಲಾಲ್ ನೆಹರೂ ತಾರಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಮೊನ್ನೆ ಕಾಣಿಸಿಕೊಂಡವನು ನಿಜವಾದ ಕಿಮ್ ಅಲ್ವಾ? ಅವನ ಡುಪ್ಲಿಕೇಟಾ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts