More

    ‘ಶವಸಂಸ್ಕಾರ’ದಲ್ಲಿ ಪಾಲ್ಗೊಂಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ- ದಿವ್ಯಶ್ರೀ

    ಬೆಂಗಳೂರು: ಮರಣ ಹೊಂದಿದ ವ್ಯಕ್ತಿಗಳನ್ನು ಸುಡುವ, ಹೂಳುವ ವ್ಯವಸ್ಥೆಗೆ ಪಟ್ಟಣ, ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರವು ಸ್ಥಳ ಕಲ್ಪಿಸಿದೆ. ಆದರೆ ಮೂಲಭೂತ ಸೌಕರ್ಯ ಇಲ್ಲದ ಹಳ್ಳಿಗಳಲ್ಲಿ ಜನರು ಸ್ಮಶಾನಕ್ಕೆ ಹೋಗುವುದಿಲ್ಲ. ಬದಲಾಗಿ ಅದೇ ಕಾಯಕದಲ್ಲಿ ಇರುವ ವ್ಯಕ್ತಿಯಿಂದ ಒಂದು ಜಾಗದಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ. ಈ ರೀತಿಯ ಕಥೆ ಮಂಡ್ಯ ಜಿಲ್ಲೆಯ ಹಳ್ಳಿಯಲ್ಲಿ ನಡೆದಿತ್ತು. ಇದೀಗ ಅದೇ ಕತೆಯನ್ನು ’ಶವಸಂಸ್ಕಾರ’ ಚಿತ್ರದಲ್ಲಿ ತೋರಿಸಲಾಗಿದೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತ ನೆರೆವೇರಿದ್ದು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಮತ್ತು ದಿವ್ಯಶ್ರೀ ಒಟ್ಟಿಗೆ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ಇದನ್ನೂ ಓದಿ: ಕನ್ನಡದ ನಿರ್ಮಾಪಕರು ಮೀಟಿಂಗ್​ ಮಾಡಿದ್ದು ಯಾಕೆ?

    ಎಸ್‌ಕೆಎಂ ಮೂವೀಸ್ ಬ್ಯಾನರ್​ನಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರಕ್ಕೆ ವಕೀಲ ಎಸ್.ಕೆ. ಮೋಹನ್‌ಕುಮಾರ್ ಕತೆ, ಚಿತ್ರಕತೆ, ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಅಷ್ಟೇ ಅಲ್ಲ ಹಾಡುಗಳಿಗೆ ಸಾಹಿತ್ಯವನ್ನೂ ಒದಗಿಸಿದ್ದಾರೆ. ಚಿಕ್ಕವನನಿದ್ದಾಗ ಅಮ್ಮನು ಹೇಳುತ್ತಿದ್ದ ಕತೆಯಲ್ಲಿ ಶವಸಂಸ್ಕಾರ ನಡೆಸುವವನಿಗೂ ಬದುಕು ಎನ್ನುವುದು ಇರುತ್ತದೆ. ಆತನ ಜೀವನದಲ್ಲಿ ಅನುಭವಿಸಿದ ಒಂದಷ್ಟು ಘಟನೆಗಳನ್ನು ಬಳಸಿಕೊಂಡು, ಉಳಿದುದನ್ನು ಕಮರ್ಷಿಯಲ್ ಆಗಿ ತೋರಿಸುವ ಪ್ರಯತ್ನ ಈ ಸಿನಿಮಾದಲ್ಲಾಗಲಿದೆಯಂತೆ. ಚನ್ನರಾಯಪಟ್ಟಣ, ಮಂಡ್ಯ, ಚನ್ನಪಟ್ಟಣ, ಮದ್ದೂರು, ರಾಮನಗರ ಕಡೆಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

    ಅಂತಿಮ ಸಂಸ್ಕಾರ ನಡೆಸುವ ಪಾತ್ರದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ, ವಿಧವೆ ಪಾತ್ರದಲ್ಲಿ ಅನ್ವಿತಾ ಶೆಟ್ಟಿ, ಮಾತು ಬಾರದ ಮೂಗಿಯಾಗಿ ದಿವ್ಯಶ್ರೀ. ನಾಟಿ ವೈದ್ಯರಾಗಿ ಯತಿರಾಜ್ ನಟಿಸುತ್ತಿದ್ದಾರೆ. ಇವರೊಂದಿಗೆ ರಂಗಭೂಮಿ ಪ್ರತಿಭೆಗಳಾದ ಪ್ರಜ್ವಲ್, ಅಕ್ಷಯ್, ದರ್ಶನ್, ಕಿರಣ್, ಗೌತಮ್, ಮೌಲ, ಆನಂದ್, ಅಮಿತ್, ಸುದೀಪ್, ನಾಗರತ್ನ ಮುಂತಾದವರಿಗೆ ಅವಕಾಶ ನೀಡಲಾಗಿದೆ.

    ಇದನ್ನೂ ಓದಿ: ಶೇ. 100ರಷ್ಟು ಹಾಜರಾತಿ ರದ್ದು … ‘ಮಾಸ್ಟರ್​’ ಬಿಡುಗಡೆಗೆ ಹಿನ್ನೆಡೆ

    ಒಂದು ಹಾಡು ಬರೆದು ನಿರ್ದೇಶನ ಮಾಡುತ್ತಿರುವುದು ಕಾಂತರಾಜುಗೌಡ. ಬಾಕಿ ಗೀತೆಗೆ ಶಿವರಾಜ್‌ ಗುಬ್ಬಿ ಸಾಹಿತ್ಯವಿದೆ. ಮೂರು ಹಾಡುಗಳಿಗೆ ಸುಪ್ರಿತ್‌ ಗಾಂಧರ ಸಂಗೀತ, ರವಿ ಛಾಯಾಗ್ರಹಣ ಮಾಡುತ್ತಿದ್ದಾರೆ.

    ರಶ್ಮಿಕಾ ಮಂದಣ್ಣ ಹೈದರಾಬಾದ್ ಮನೆಗೆ ಹೊಸ ಅತಿಥಿ: ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts