More

    ಜೂನಿಯರ್ ಮೆಹಮೂದ್ ನಿಧನ: ನಯೀಮ್ ಸೈಯದ್‌ನನ್ನು ‘ಜೂನಿಯರ್ ಮೆಹಮೂದ್’ ಮಾಡಿದ್ದೇ ಈ ಸೂಪರ್‌ಸ್ಟಾರ್

    ಮುಂಬೈ: ನವೆಂಬರ್ 15, 1956 ರಂದು ಮುಂಬೈನಲ್ಲಿ ಜನಿಸಿದ ಜೂನಿಯರ್ ಮೆಹಮೂದ್ ಕ್ಯಾನ್ಸರ್​​​​​ನೊಂದಿಗೆ ಸುದೀರ್ಘ ಹೋರಾಟ ನಡೆಸಿದ ನಂತರ ಡಿಸೆಂಬರ್ 8 ರಂದು ಕೊನೆಯುಸಿರೆಳೆದರು. ಅವರು ಬಹಳ ದಿನಗಳಿಂದ ಹೊಟ್ಟೆಯ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.

    ಗಾಯಕ, ನಟ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದ್ದ ಜೂನಿಯರ್ ಮೆಹಮೂದ್ ಅವರ ನಿಧನವು ಹಿಂದಿ ಚಿತ್ರರಂಗಕ್ಕೆ ಭರಿಸಲಾರದ ನಷ್ಟ. ‘ಹಮ್ ಕಾಲೇ ಹೈ ತೋ ಕ್ಯಾ ಹುವಾ ದಿಲ್ ವಾಲೇ ಹೈ’  ಸೇರಿದಂತೆ ಮುಂತಾದ ಅನೇಕ ಸ್ಮರಣೀಯ ಹಾಡುಗಳನ್ನು ಮೆಹಮೂದ್ ನೀಡಿದ್ದಾರೆ. ಮುಂಬೈ ನಿವಾಸಿ ನಯೀಮ್ ಸೈಯದ್ ಹೇಗೆ ಹಿಂದಿ ಚಿತ್ರರಂಗದ ಜೂನಿಯರ್ ಮೆಹಮೂದ್ ಆದರು, ಅವರ ಪ್ರಯಾಣವೇನೆಂದು ನೋಡೋಣ ಬನ್ನಿ…

    ಜೂನಿಯರ್ ಮೆಹಮೂದ್ 1967 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತಮ್ಮ ವೃತ್ತಿಜೀವನದಲ್ಲಿ 265 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದರಲ್ಲಿ ಹಿಂದಿ ಚಿತ್ರಗಳು ಮಾತ್ರವಲ್ಲದೆ, ಏಳು ವಿವಿಧ ಭಾಷೆಗಳ ಚಲನಚಿತ್ರಗಳೂ ಸೇರಿವೆ. ಹಿಂದಿಯಲ್ಲದೆ, ಜೂನಿಯರ್ ಮಹಮೂದ್ ಮರಾಠಿ ಚಲನಚಿತ್ರಗಳಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರಾಗಿ ತಮ್ಮ ಛಾಪು ಮೂಡಿಸಿದರು.

    ಸುಮಾರು ಆರು ಮರಾಠಿ ಚಲನಚಿತ್ರಗಳನ್ನು ನಿರ್ದೇಶಿಸಿದರು ಮತ್ತು ನಿರ್ಮಿಸಿದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪ್ರೇಕ್ಷಕರನ್ನು ರಂಜಿಸುತ್ತಿರುವ ಜೂನಿಯರ್ ಮೆಹಮೂದ್ ಅವರು ಚಿತ್ರರಂಗಕ್ಕೆ ಬಂದಾಗ, ನಯೀಮ್ ಸೈಯದ್ ಎಂದು ಹೆಸರಿತ್ತು. ಅವರನ್ನು ಹಿಂದಿ ಚಿತ್ರರಂಗದ ‘ಜೂನಿಯರ್ ಮೆಹಮೂದ್’ ಮಾಡಿದವರು ಅವರ ಕಾಲದ ಪ್ರಸಿದ್ಧ ಸೂಪರ್‌ಸ್ಟಾರ್ ಮೆಹಮೂದ್ ಅಲಿ. ಈ ಹೆಸರನ್ನು ಹಿರಿಯ ನಟ ಮಹಮೂದ್ ಅಲಿ ನೀಡಿದ್ದಾರೆ.

    ಟಿವಿ ಧಾರಾವಾಹಿಗಳಲ್ಲಿಯೂ ಕೆಲಸ
    ಜೂನಿಯರ್ ಮೆಹಮೂದ್ ಚಿತ್ರರಂಗದಲ್ಲಿ ದೊಡ್ಡ ಪರದೆಯ ಮೇಲೆ ಮಾತ್ರ ಕೆಲಸ ಮಾಡಲಿಲ್ಲ. ಇದರೊಂದಿಗೆ ಅವರು ಸಣ್ಣ ಪರದೆಯ ಮೇಲೆ ತಮ್ಮ ನಟನೆಯ ಮ್ಯಾಜಿಕ್ ಅನ್ನು ತೋರಿಸಿದ್ದಾರೆ. 1967 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಜೂನಿಯರ್ ಮೆಹಮೂದ್, ಮೊಹಬ್ಬತ್ ಜಿಂದಗಿ ಹೈ, ಫರಿಷ್ತೆ, ಬ್ರಹ್ಮಚಾರಿ, ವಿಶ್ವಾಸ್, ರಾಜಾ ಸಾಬ್, ಪ್ಯಾರ್ ಹಿ ಪ್ಯಾರ್ ಮುಂತಾದ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

    ಚಲನಚಿತ್ರಗಳ ಹೊರತಾಗಿ 2012 ರಲ್ಲಿ ಅವರು ದಿಶಾ ಪರ್ಮಾರ್ ಮತ್ತು ನಕುಲ್ ಮೆಹ್ತಾ ಅಭಿನಯದ ‘ಪ್ಯಾರ್ ಕಾ ದರ್ದ್ ಹೈ ಮೀಥಾ-ಮೀಥಾ ಪ್ಯಾರಾ-ಪ್ಯಾರಾ’ ಶೋನಲ್ಲಿ ಕೆಲಸ ಮಾಡಿದರು. ಇದಲ್ಲದೆ, ಜೂನಿಯರ್ ಮಹಮೂದ್ 2019 ರಲ್ಲಿ ತೆನಾಲಿ ರಾಮನಲ್ಲಿಯೂ ಕಾಣಿಸಿಕೊಂಡರು. ಈ ಶೋನಲ್ಲಿ ಅವರು ‘ಮುಲ್ಲಾ ನಾಸಿರುದ್ದೀನ್’ ಪಾತ್ರವನ್ನು ನಿರ್ವಹಿಸಿದರು.

    ರಿವೀಲ್ ಆಯ್ತು ‘ಯಶ್​ 19’ ಚಿತ್ರದ ಅಸಲಿ ಟೈಟಲ್​!

    ಅಯೋಧ್ಯೆ ರಾಮಲಲ್ಲಾ ಮಹಾಮಸ್ತಕಾಭಿಷೇಕ: ಜೋಧ್‌ಪುರದಿಂದ ವೃಷಭ ಗಾಡಿಗಳಲ್ಲಿ ಬಂದ 600 ಕೆ.ಜಿ.ಹಸುವಿನ ತುಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts