More

    ಕ್ಷಮೆಯಾಚಿಸಿದ ಹಾಸ್ಯ ನಟ ಚಂದ್ರಪ್ರಭ

    ಚಿಕ್ಕಮಗಳೂರು: ನಗರದಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದ್ದ ಹಾಸ್ಯ ನಟ ಚಂದ್ರಪ್ರಭ ಶುಕ್ರವಾರ ನಗರದಲ್ಲಿ ಕ್ಷಮೆಯಾಚಿಸಿದರು.

    ಸೆ.4ರಂದು ಮುಂಜಾನೆ ಬಸ್ ನಿಲ್ದಾಣದ ಸಮೀಪ ಚಂದ್ರಪ್ರಭ ಚಲಾಯಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ್ದಿತ್ತು. ಚಂದ್ರಪ್ರಭ ಪರಾರಿಯಾಗಿದ್ದರು. ಬೈಕ್ ಸವಾರ ಮಾಲ್ತೇಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಗಾಯಾಳುವಿನ ಕುಟುಂಬಸ್ಥರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಚಂದ್ರಪ್ರಭ ವಿರುದ್ಧ ದೂರು ದಾಖಲಿಸಿದ್ದರು. ವಿಚಾರಣೆಗೆ ಪೊಲೀಸರು ಚಂದ್ರಪ್ರಭ ಅವರನ್ನು ಠಾಣೆ ಕರೆಸಿದ್ದರು. ಆ ವೇಳೆ ಮಾಧ್ಯಮಗಳ ಮುಂದೆ ತಪ್ಪಾಗಿದೆ ಎಂದು ಕ್ಷಮೆಯಾಚಿಸಿದರು.
    ಕಾನೂನು ಪ್ರಕಾರ ನಡೆದುಕೊಳ್ಳುತ್ತೇನೆ. ಆಸ್ಪತ್ರೆಗೆ ಹೋಗಿ ಗಾಯಾಳುವನ್ನು, ಆತನ ಕುಟುಂಬದವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತೇನೆ. ಕುಟುಂಬದ ಜತೆಗೆ ನಾನಿರುತ್ತೇನೆ. ಇದೊಂದು ಆಕಸ್ಮಿಕ ಘಟನೆ. ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.
    ಅಪಘಾತ ನಡೆದ ಸಂದರ್ಭ ಸ್ಥಳೀಯರು ಹೇಳಿದರು ಎಂಬ ಕಾರಣಕ್ಕೆ ಬೈಕ್ ಸವಾರ ಮದ್ಯ ಸೇವನೆ ಮಾಡಿದ್ದಾನೆ ಎಂದು ನಾನೂ ಹೇಳಿದ್ದೆ. ಆದರೆ ಅವರು ಮದ್ಯ ಸೇವನೆ ಮಾಡಿರಲಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts