More

    ಪ್ರವಾಸೋದ್ಯಮ ಪೂರಕ ಯೋಜನೆ ರೂಪಿಸಲಿ

    ಗಂಗಾವತಿ: ಪ್ರವಾಸೋದ್ಯಮ ಪೂರಕ ಯೋಜನೆಗಳನ್ನು ರೂಪಿಸಬೇಕಿದ್ದು, ಕಿಷ್ಕಿಂಧಾ ಕ್ಷೇತ್ರವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಪರಿವರ್ತಿಸಬೇಕಿದೆ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಹೇಳಿದರು.

    ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣ ಜಿಲ್ಲಾ ಘಟಕದಿಂದ ರಾಜ್ಯೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಭತ್ತದ ಕಣಜವೆಂಬ ಖ್ಯಾತಿ ಪಡೆದ ಕ್ಷೇತ್ರದಲ್ಲಿ ಪರಂಪರೆಯಿಂದಲೂ ಸಾಂಸ್ಕೃತಿಕ ಕುರುಹಗಳಿವೆ. ಪರಿಸರದಲ್ಲೂ ಅನೇಕ ಸ್ಮಾರಕಗಳಿದ್ದು, ಅಪರೂಪದ ಮಾಹಿತಿಯನ್ನು ಚಾರಣ ಬಳಗ ರಚನೆ ಮೂಲಕ ಪರಿಚಯಿಸುತ್ತಿರುವುದು ಉತ್ತಮ ಬೆಳವಣಿಗೆ. ಪ್ರವಾಸೋದ್ಯಮಕ್ಕೆ ಅನುಕೂಲವಾದ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

    ಶಾಸಕ ಗಾಲಿ ಜನಾರ್ದನರೆಡ್ಡಿ ಮಾತನಾಡಿ, ಹೋರಾಟದ ಮೂಲಕ ಗಮನಸೆಳೆಯುತ್ತಿರುವ ಕರವೇ ಸಂಘಟನೆ, ನೆಲ, ಜಲ, ಭಾಷೆ ವಿಚಾರದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಸಂಘಟನೆಗಳ ಕ್ರೀಯಾಶೀಲ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡಲಾಗುವುದು ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಕರವೇ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ಮಾತನಾಡಿ, ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗಾಗಿ ಸಂಘಟನೆಯಿಂದ ಒಂದು ದಿನ ಉಪವಾಸ ಕೈಗೊಳ್ಳಲಾಗಿತ್ತು. ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 17 ಸಾಧಕರಿಗೆ ಕನ್ನಡ ಶಿಖಾಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಸ್ಯ ಭಾಷಣಕಾರರಾದ ಬಿ.ಪ್ರಾಣೇಶ, ಬಸವರಾಜ ಮಹಾಮನಿ ಮತ್ತು ನರಸಿಂಹ ಜೋಶಿಯಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಕನ್ನಡ ಶಾಲೆ ಮಕ್ಕಳು ಮತ್ತು ಕಿರುತೆರೆ ನೃತ್ಯ ತಂಡದಿಂದ ಕನ್ನಡ ಮತ್ತು ಜನಪದ ನೃತ್ಯ ಪ್ರದರ್ಶನ ನಡೆಯಿತು.

    ವೈದ್ಯ ಡಾ.ಕೆ.ಅಮರಪಾಟೀಲ್, ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಕೆಆರ್‌ಪಿಪಿ ರಾಜ್ಯ ಉಪಾಧ್ಯಕ್ಷ ಮನೋಹರಗೌಡ ಹೇರೂರು, ನಯೋಪ್ರಾ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹೊಸ್ಮಲಿ, ಗ್ರಾಪಂ ಸದಸ್ಯ ಬಳ್ಳಾರಿ ರಾಮಣ್ಣನಾಯಕ, ಮುಖಂಡರಾದ ಹನುಮೇಶ ಹಸಿಕಟಿಗಿ, ರಾಜೇಶರೆಡ್ಡಿ, ಆನಂದಗೌಡ, ವಿರೂಪಾಕ್ಷಿಗೌಡನಾಯಕ, ರಮೇಶ ಕೋಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts