More

    ದೊಡ್ಡಹುಣಸೇಮರಕ್ಕೆಬಂತು ಮರು ಜೀವ

    ಸವಣೂರ: ಪಟ್ಟಣದ ದೊಡ್ಡ ಹುಣಸೇ ಕಲ್ಮಠದಲ್ಲಿ ಕಳೆದ ವಾರದ ಆಕಸ್ಮಿಕವಾಗಿ ಧರೆಗೆ ಉರುಳಿದ ದೊಡ್ಡಹುಣಸೇಮರವನ್ನು ಶಿರಸಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಲಹೆ ಮೇರೆಗೆ ಗುರುವಾರ ಜಿಲ್ಲಾಡಳಿತ, ಅರಣ್ಯ ಇಲಾಖೆ ಸಹಯೋಗದೊಂದಿಗೆ ಅದೇ ಸ್ಥಳದಲ್ಲಿ ಮರು ನೆಡಲಾಯಿತು.


    ಮರದ ಬೇರುಗಳು ಶೇ. 70ರಷ್ಟು ಕೊಳೆತು ಹೋಗಿವೆ. ಕೊಳೆತು ಹೋದ ಬೇರು ಹಾಗೂ ಮಣ್ಣನ್ನು ಬೇರೆಡೆಗೆ ಸ್ಥಳಾಂತರಿಸಿ ಅದಕ್ಕೆ ಸರಿಯಾದ ರಾಸಾಯನಿಕ ಉಪಚಾರ ಮಾಡಿ ಮರು ನಾಟಿ ಮಾಡಿದರೆ ಬದುಕುವ ಎಲ್ಲ ಸಾಧ್ಯತೆಗಳು ಇವೆ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದರು.

    ಹೀಗಾಗಿ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಮರು ನಾಟಿ ಮಾಡಲು ಸಿದ್ಧತೆ ಕೈಗೊಂಡರು.

    ನಂತರ ಕ್ರೇನ್ ಸಹಾಯದಿಂದ ಹುಣಸೇಮರವನ್ನು ಮರು ನೆಡಲಾಯಿತು. ಅರಣ್ಯ ಇಲಾಖೆ ಕಾರ್ಯಕ್ಕೆ ಶ್ರೀಮಠದ ಚನ್ನಬಸವ ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು.

    ಸಿಂಧಗಿ ಮಠದ ಶ್ರೀಗಳು, ಶಿರಹಟ್ಟಿ ಸಂಸ್ಥಾನಮಠದ ಜಗದ್ಗುರು ಫಕೀರ ದಿಂಗಾಲೇಶ್ವರ ಶ್ರೀಗಳು ಆಗಮಿಸಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts