More

    ಚುನಾವಣೆ ಬಂದ್ರೆ ಹಿಂದು-ಮುಸ್ಲಿಂ ಅಂತೀರಿ! ಬಿಜೆಪಿ ವಿರುದ್ಧ ತೆಲಂಗಾಣ ಸಿಎಂ ಆಕ್ರೋಶ

    ಹೈದರಾಬಾದ್​​: ಚುನಾವಣೆ ಸಮಯ ಬಂತೆಂದರೆ ಕೋಮು ಸಂಬಂಧಿತ ಆತಂಕ ಸೃಷ್ಟಿಸುವಲ್ಲಿ ಬಿಜೆಪಿ ತೊಡಗಿಕೊಳ್ಳುತ್ತದೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರರಾವ್​ ಹೇಳಿದ್ದಾರೆ. ಹೈದರಾಬಾದ್​​ನ ಇಂದಿರಾ ಪಾರ್ಕ್​ನಲ್ಲಿ ಇಂದು ತಮ್ಮ ಸಂಪುಟ ಸದಸ್ಯರೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.

    “ಚುನಾವಣೆಗಳಿದ್ದಾಗ, ಅವರು ಹಿಂದು-ಮುಸ್ಲಿಂ ವಿಚಾರ, ಪಾಕಿಸ್ತಾನದ ಬಗೆಗಿನ ಭಾವುಕತೆ ಎಲ್ಲಾ ತರುತ್ತಾರೆ… ಚುನಾವಣೆ ಸಮಯದಲ್ಲಿ ಗಡಿಯಲ್ಲಿನ ನಿಮ್ಮ ಡ್ರಾಮ.. ಸರ್ಜಿಕಲ್​ ಸ್ಟ್ರೈಕ್ಸ್​ ಮಾತು ಆರಂಭವಾಗುತ್ತದೆ… ಜನರು ಇದನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ” ಎಂದರು.

    ಇದನ್ನೂ ಓದಿ: ಕನ್ನಡ ಭಾಷಾ ತಂತ್ರಾಂಶ ಅಳವಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

    ಸಿಎಂ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ರಾಜ್ಯದಿಂದ ಭತ್ತ ಖರೀದಿಸುವಲ್ಲಿ ಕೇಂದ್ರ ಸರ್ಕಾರ ಅಸಡ್ಡೆ ತೋರುತ್ತಿದೆ ಎಂದು ಪ್ರತಿಭಟನೆ ನಡೆಸಿತು. “ಭತ್ತ ಬೆಳೆಯಿರಿ ಎಂದು ಬಿಜೆಪಿ ಹೇಳುತ್ತದೆ. ಆದರೆ ಕೇಂದ್ರ ಅದನ್ನು ಖರೀದಿಸುತ್ತಿಲ್ಲ. ಅವರು ರಾಜಕೀಯ ಆಟಗಳನ್ನು ಆಡುತ್ತಿದ್ದಾರೆ. ನೀವು ಖರೀದಿಸದಿದ್ದರೆ, ನಾವು ಬಂದು ಭತ್ತವನ್ನು ಬಿಜೆಪಿ ಕಚೇರಿಯಲ್ಲಿ ಸುರಿಯುತ್ತೇವೆ” ಎಂದು ಸಿಎಂ ಚಂದ್ರಶೇಖರ ರಾವ್​ ಹೇಳಿದರು. (ಏಜೆನ್ಸೀಸ್)

    VIDEO| ನಟಿ ನಯನತಾರಾ ಜನ್ಮದಿನ… ಹೀಗಿತ್ತು ಬರ್ತ್​​ಡೇ ಪಾರ್ಟಿ!

    ರೈತರ ವಿರುದ್ಧದ ಎಲ್ಲಾ ಕೇಸುಗಳು ರದ್ದು! ಚುನಾವಣೆ ಸಮಯಕ್ಕೆ ಮಹತ್ವದ ನಿರ್ಧಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts