More

    ಮೈದುಂಬಿದ ಐತಿಹಾಸಿಕ ದೊಡ್ಡಕೆರೆ

    ಸಿ.ಎಂ.ನಾಡಿಗೇರ್ ಭರಮಸಾಗರ
    ಇಲ್ಲಿನ ಐತಿಹಾಸಿಕ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆಗೆ ಕಳೆದೆರಡು ದಿನದಿಂದ ಏತನೀರಾವರಿ ಮೂಲಕ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಖಾಲಿಯಾಗಿದ್ದ ಕೆರೆ ಪುನಃ ಚೈತನ್ಯ ಪಡೆದುಕೊಂಡು ಕಂಗೊಳಿಸುವಂತಾಗಿದೆ.

    ಕಳೆದ ವರ್ಷ ದೊಡ್ಡಕೆರೆ ಏರಿಯಲ್ಲಿ ಬಿರುಕು ದುರಸ್ತಿ ಕಾರ್ಯ ಕೈಗೊಂಡ ಕಾರಣ ಮೈದುಂಬಿ ಸಮುದ್ರದಂತೆ ಕಾಣುತ್ತಿದ್ದ ನೀರನ್ನು 41 ಕೆರೆಗಳಿಗೆ ಹರಿಸಿ ಖಾಲಿ ಮಾಡಿ ಏರಿ ದುರಸ್ತಿ ಕೈಗೊಳ್ಳಲಾಗಿದೆ.

    ಮಳೆಗಾಲ ತೀವ್ರವಾಗುವ ಮೊದಲು ಕೆರೆ ಏರಿ ದುರಸ್ತಿ ಕಾರ್ಯ ಮುಗಿಸಬೇಕೆಂದು ನೀರಾವರಿ ನಿಗಮದ ಅಧಿಕಾರಿಗಳು ಶ್ರಮಿಸುತ್ತಿದ್ದರೂ ಅಗತ್ಯವಾಗಿ ಬೇಕಾದ ಗುಣಮಟ್ಟದ ಮಣ್ಣಿನ ಕೊರತೆಯಿಂದ ಕಾಮಗಾರಿ ಆಮೆವೇಗದಲ್ಲಿ ಸಾಗಿದೆ.

    ಆದರೂ ಹಳೇ ಏರಿ ಭದ್ರಪಡಿಸಿ ಜೊತೆಗೆ ಸೋರಿಕೆ ಕಂಡ ಜಾಗದಲ್ಲಿ ದುರಸ್ತಿ ಆಗಿರುವುದರಿಂದ ಕೆರೆಗೆ ಏರಿ ಮಟ್ಟಕ್ಕಿಂತ ಕೆಳಗೆ ಭೂಮಿ ಮಟ್ಟದಲ್ಲಿ ನೀರು

    ಶೇಖರಿಸಿ ರೈತರ ಜಮೀನುಗಳಲ್ಲಿ ಕೊಳವೆಬಾವಿಗಳಿಗೆ ಭರ್ತಿಯಾಗಲು ಅನುಕೂಲ ಮಾಡಲಾಗುವುದು, ಮತ್ತು 41 ಕೆರೆಗಳಿಗೆ ನೀರು ಹರಿಸಿ

    ಜಲಪಾತ್ರೆಗಳಲ್ಲಿ ಸಂಗ್ರಹಿಸಿ ಭೂಮಿಯ ತೇವಾಂಶವನ್ನು ಕಾಪಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ನೀರು ಸಂಪೂರ್ಣ ಬತ್ತಿದ ನಂತರ ರೈತರು ಸ್ವತಃ ಕೆರೆಯ ಫಲವಾತ್ತಾದ ಮಣ್ಣನ್ನು ತಮ್ಮ ಜಮೀನುಗಳಿಗೆ ಸಾಗಿಸಿದ್ದರು.

    ಇದರಿಂದ ಸ್ವಲ್ಪಮಟಿನ ಹೂಳು ತೆಗೆದಂತಾಗಿತ್ತು. ಈಗ ಬರುತ್ತಿರುವ ನೀರಿನಿಂದ ಗುಂಡಿಗಳು ತುಂಬಿ ಮತ್ತೆ ಜೀವಕಳೆ ಬಂದಿದೆ.

    ದುರಸ್ತಿ ನಡೆದಿದೆ: ಕೆರೆಗೆ ನೀರು ಬರುವುದರಿಂದ ಏರಿಗೆ ಮತ್ತೆ ಹಾನಿಯಾಗುವುದಿಲ್ಲ. ಸೀಪೇಜ್ ನೀರು ಹರಿಯಲು ವ್ಯವಸ್ಥೆ ಮಾಡಿದ್ದೇವೆ, ಆದರೂ ಏರಿ ಕೆಲಸ ಪೂರ್ಣಗೊಂಡ ನಂತರ ಕೆರೆ ಪೂರ್ಣ ತಂಬಿಸಲಾಗುವುದು.

    ಅಲ್ಲಿಯವರೆಗೆ ಇತರ ಕೆರೆಗಳಿಗೆ ನೀರು ಹರಿಸಲಾಗುವುದು ಈಗ ಜಾಕ್‌ವೆಲ್‌ನಲ್ಲಿ ಎರಡು ಮೋಟಾರ್ ನಿಂದ ನೀರು ಎತ್ತಿ ಕಾತ್ರಾಳು, ಸಿರಿಗೆರೆ ಬುಕ್ಕರಾಯನಕೆರೆ ಸೇರಿದಂತೆ ಇತರ ಕೆರೆಗಳಿಗೆ ಹರಿಸಲಾಗುತ್ತಿದೆ.

    ಕೆಲ ದಿನಗಳು ನೀರು ಸ್ಥಗಿತಗೊಂಡಿದ್ದರಿಂದ ಅಲ್ಲಲ್ಲಿ ಪೈಪ್‌ಲೈನ್‌ನಲ್ಲಿ ದುರಸ್ತಿ ನಡೆದಿದೆ ಎಂದು ಎಂಜಿನಿಯರ್ ಮನೋಜ್ ಕುಮಾರ್ ತಿಳಿಸಿದ್ದಾರೆ.

    ಕಲರ್ ವಿದ್ಯುತ್ ದೀಪದ ಬೆಳಕು: ಈ ಬಾರಿ ದೊಡ್ಡಕೆರೆಯ ನೀರು ಧುಮ್ಮಿಕ್ಕುವ ಕಾರಂಜಿಯ ಮೇಲ್ಭಾಗದಲ್ಲಿ ಸುತ್ತಲೂ ಪ್ರಕಾಶಮಾನವಾದ ಕಲರ್ ವಿದ್ಯುತ್ ದೀಪ ಅಳವಡಿಸಲಾಗಿದ್ದು, ಬೆಳಕಿನಲ್ಲಿ ಕಾಮನ ಬಿಲ್ಲಿನ ಬಣ್ಣದಂತೆ ನೀರು ಬೀಳುತ್ತಿರುವ ದೃಶ್ಯ ಮನಮೋಹಕವಾಗಿದೆ.

    ಅತೀ ದೂರದಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ ಈ ಯೋಜನೆ ವಿಶ್ವದಲ್ಲಿಯೇ ಐತಿಹಾಸಿಕವಾಗಿದೆ.

    ಇದನ್ನು ಅಧಿಕೃತವಾಗಿ ಉದ್ಘಾಟಿಸಲು ಈಗಾಗಲೇ ಪ್ರಧಾನಿ ಮೋದಿಯವರನ್ನು ಆಹ್ವಾನಿಸಲು ಪ್ರಯತ್ನ ನಡೆದಿವೆ.

    ಮುಂಚೂಣಿಯಾಗಿ ಕೆರೆ ಸುತ್ತಲೂ ಸ್ವಚ್ಛತೆ, ವಿದ್ಯುತ್ ದೀಪ ಅಳವಡಿಕೆ, ಕೋಡಿ ದುರಸ್ತಿ, ಕೋಡಿಯಬಳಿ ಉದ್ಯಾನವನ, ಪ್ರಯಾಣಿಕರಿಗೆ ಎಚ್ಚರಿಕೆ ಕಾರ್ಯ,

    ವಾಯುವಿಹಾರಿಗಳಿಗೆ ಪ್ರತ್ಯೇಕ ರಸ್ತೆ ಕಾರ್ಯಗಳು ಆಗಬೇಕು, ಕೆರೆ ನೀರು ಬಂದಿರುವುದರಿಂದ ರೈತರು ಸಂತಸಗೊಂಡು ತಮ್ಮ ಬರದ ಬವಣೆಯಿಂದ ಹೊರಬಂದಿದಾರೆ ಎಂದು ಮುಖಂಡ ಶಾಂತವೀರಪ್ಪ ಅನಿಸಿಕೆ ಹಂಚಿಕೊಂಡಿದ್ದಾರೆ.

    ವಾಹನ ಸವಾರರು ಕನಿಷ್ಟ ಏರಿ ಕಾಮಗಾರಿ ಮುಗಿಯುವವರೆಗೂ ಏರಿ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸಿ ಅನಾಹುತ ತಪ್ಪಿಸಬೇಕು.
    ಎಂದು ನೀರಾವರಿ ನಿಗಮದ ಇಂಜಿನಿಯರ್ ಮಂಜುನಾಥ್ ಮನವಿ ಮಾಡಿದ್ದಾರೆ.

    ದುರಸ್ತಿ ನಡೆಯುತ್ತಿರುವ ಏರಿಯ ಮೇಲೆ ವಾಹನ ಸಂಚಾರ ನಿಂತಿಲ್ಲ. ಕಳೆದ ವರ್ಷ ನಡೆದ ದುರಂತಗಳಿಂದ ಕೆರೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಕಾರಣ ತಾತ್ಕಾಲಿಕವಾಗಿ ಏರಿಯ ಮೇಲೆ ತಡೆಗೋಡೆ ನಿರ್ಮಿಸಬೇಕು ಏರಿ ದುಸ್ತಿಯನ್ನು ವೇಗಗೊಳಿಸಬೇಕು.
    ಪ್ರದೀಪ್ ಯುವ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts