More

    ಇಲ್ಲಿ ದುಡ್ಡು ಕೊಟ್ಟು ನರ್ಸ್​ ಆಗಬಹುದು! ಸಾಮೂಹಿಕ ನಕಲು ಮಾಡಿಸುವಾಗ ಸಿಕ್ಕಿ ಬಿದ್ದ ಸಿಬ್ಬಂದಿ

    ದಾವಣಗೆರೆ: ನರ್ಸ್​ ಆಗಬೇಕು ಎಂದು ಅನೇಕ ಮಕ್ಕಳು ಕಷ್ಟಪಟ್ಟು ಫೀಸ್​ ಹೊಂದಿಸಿ ಕಾಲೇಜಿಗೆ ಸೇರಿರುತ್ತಾರೆ. ಶ್ರಮ ಹಾಕಿ ಪರೀಕ್ಷೆ ಬರೆದ ನಂತರ ಪಾಸ್​ ಆಗುತ್ತೇವೋ ಇಲ್ಲವೋ ಎಂಬ ಚಿಂತೆಗೆ ಬಿದ್ದಿರುತ್ತಾರೆ. ಆದರೆ ಇನ್ನೂ ಕೆಲವರು ಕಾಲೇಜು ಸಿಬ್ಬಂದಿಗೆ ಹಣ ನೀಡಿ ಪರೀಕ್ಷೆಯಲ್ಲಿ ಪಾಸ್​ ಆಗುತ್ತಾರೆ. ಈ ಸುದ್ದಿ ಸಾಧಾರಣ ವಿದ್ಯಾರ್ಥಿಗೆ ತಿಳಿದಾಗ ಎಷ್ಟು ದುಃಖ ಆಗಬಹುದು? ಇಂತಹದೇ ಘಟನೆ ದಾವಣಗೆರೆಯ ನರ್ಸಿಂಗ್​ ಕಾಲೇಜು ಒಂದರಲ್ಲಿ ನಡೆದಿದೆ.

    ನರ್ಸಿಂಗ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು ಮಾಡುತ್ತಿದ್ದು ಇದಕ್ಕೆ ಕಾಲೇಜು ಸಿಬ್ಬಂದಿಗಳೇ ಸಾಥ್​ ನೀಡಿದ ಘಟನೆ ದಾವಣಗೆರೆ ಆಂಜನೇಯ ಬಡಾವಣೆಯಲ್ಲಿರುವ ಸಂಜೀವಿನಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ.

    ಸಂಜೀವಿನಿ ನರ್ಸಿಂಗ್ ಕಾಲೇಜಿನ ಮೊದಲ ‘ಅನಾಟಮಿ’ ವಿಷಯದ ಪರೀಕ್ಷೆಯನ್ನು ಬರೆಯುವ ವೇಳೆ ವಿದ್ಯಾರ್ಥಿಗಳು ನಕಲು ಮಾಡುವುದು ತಿಳಿದು ಬಂದಿದೆ. ಆಶ್ಚರ್ಯವೆಂದ್ರೆ ಸ್ವತಃ ಕಾಲೇಜು ಸಿಬ್ಬಂದಿಗಳೇ ಮೊಬೈಲ್ ಹಿಡಿದು ವಿದ್ಯಾರ್ಥಿಗಳಿಗೆ ಉತ್ತರ ಹೇಳಿ ಕೊಡ್ತಿದ್ರು.

    ಪ್ರತಿಯೊಬ್ಬ ವಿದ್ಯಾರ್ಥಿಯಿಂದ 10, ಸಾವಿರ ಹಣ ಪಡೆದಿದ್ದಾರೆ. ನಂತರ ಹಣ ನೀಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದು, ದುಡ್ಡು ನೀಡಿದವರಿಗೆ ಸಿಬ್ಬಂದಿಗಳು ಉತ್ತರ ಹೇಳಿ ಕೊಡುತ್ತಿದ್ದರು ಎನ್ನಲಾಗಿದೆ. ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳಿಗೆ ಹೀಗೆ ನಕಲು ಮಾಡಲು ಅವಕಾಶ ನೀಡಿದ್ರೆ ಸಾಮಾನ್ಯ ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳ ಗತಿ ಏನು?

    ಇಲ್ಲಿ ದುಡ್ಡು ಕೊಟ್ಟು ನರ್ಸ್​ ಆಗಬಹುದು! ಸಾಮೂಹಿಕ ನಕಲು ಮಾಡಿಸುವಾಗ ಸಿಕ್ಕಿ ಬಿದ್ದ ಸಿಬ್ಬಂದಿ

    ಇಲ್ಲಿ ದುಡ್ಡು ಕೊಟ್ಟು ನರ್ಸ್​ ಆಗಬಹುದು! ಸಾಮೂಹಿಕ ನಕಲು ಮಾಡಿಸುವಾಗ ಸಿಕ್ಕಿ ಬಿದ್ದ ಸಿಬ್ಬಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts