More

    ಸ್ವಾತಂತ್ರ್ಯದ ಉಳಿವಿಗಾಗಿ ಕಟಿಬದ್ಧರಾಗಲಿ

    ಕುಶಾಲನಗರ: ಸುಭದ್ರ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣದ ಧ್ಯೇಯದೊಂದಿಗೆ ಹಿರಿಯರ ತ್ಯಾಗ, ಬಲಿದಾನ ಹಾಗೂ ಸಮರ್ಪಣೆಗಳಿಂದಾಗಿ ದೊರೆತ ಸ್ವಾತಂತ್ರ್ಯದ ಉಳಿವಿಗಾಗಿ ವಿದ್ಯಾರ್ಥಿಗಳು ಕಟಿಬದ್ಧರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿ.ಪಿ.ಶಶಿಧರ್ ಹೇಳಿದರು.

    ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಸಕ್ತ ಸಾಲಿನ ಕಾಲೇಜು ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನಿಂದ ಹೊರತಂದ ‘ಸೃಜನ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ದೇಶಕ್ಕೆ ಸಚ್ಚಾರಿತ್ರ್ಯವುಳ್ಳ ಸತ್ಪಾತ್ರರ ಅಗತ್ಯವಿದೆ. ಅಂತಹ ಕೆಲಸಕ್ಕೆ ವಿದ್ಯಾರ್ಥಿಗಳು ಬೇರೆ ಬೇರೆ ಆಯಾಮಗಳ ಮೂಲಕ ತಮ್ಮನ್ನು ತಾವು ತೆರೆದುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಪದವಿಗಳನ್ನು ಗಳಿಸಿದ ಬಳಿಕ ಕೇವಲ ಸರ್ಕಾರದ ಉದ್ಯೋಗಗಳಿಗೆ ಕಾಯದೇ ಸ್ವಾವಲಂಬಿಗಳಾಗಿ ತೊಡಗಿಸಿಕೊಳ್ಳಲು ಕರೆಕೊಟ್ಟರು.

    ಕೊಡಗು ವಿವಿ ನಿರ್ದೇಶಕ ಪ್ರೊ.ಕೆ.ಕೆ.ಧರ್ಮಪ್ಪ ಮಾತನಾಡಿ, ಗುಣಮಟ್ಟದ ಶಿಕ್ಷಣ ಇಂದಿನ ವಿದ್ಯಾರ್ಥಿಗಳ ಮೊದಲ ಅಗತ್ಯವಾಗಬೇಕಿದೆ. ಪದವಿಗಳನ್ನು ಪೂರೈಸಿದ ಬಳಿಕ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುನ್ನುಗ್ಗಬೇಕು. ಹೆತ್ತವರು ಹಾಗೂ ಗುರು ಹಿರಿಯರಿಗೆ ಸದಾ ಗೌರವ ನೀಡುವ ಪರಂಪರೆಗೆ ವಿದ್ಯಾರ್ಥಿಗಳು ಮತ್ತಷ್ಟು ಇಂಬು ನೀಡಬೇಕಿದೆ. ಅಂತಹ ಸನ್ನಡತೆ, ಸಚ್ಚಾರಿತ್ರ್ಯ ಇಂದಿನ ವಿದ್ಯಾರ್ಥಿಗಳ ಆದ್ಯತೆಯಾಗಬೇಕಿದೆ. ಹಾಗೆಯೇ ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಯನ್ನು ಸಂರಕ್ಷಿಸಬೇಕು. ಭೂಮಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಸದಂತೆ ಕರೆ ಕೊಟ್ಟರು.

    ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ವಿದ್ಯಾರ್ಥಿಗಳ ಅತ್ಯುತ್ತಮವಾಗಿ ಸದ್ಭಳಕೆ ಮಾಡಿಕೊಂಡು ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಕೇವಲ ಸರ್ಕಾರಿ ಹುದ್ದೆಗೆ ಮೀಸಲಾಗದೆ ವಿವಿಧ ಕೌಶಲ್ಯಗಳು ಹಾಗೂ ಕೃಷಿಯತ್ತ ಆಸಕ್ತಿ ವಹಿಸುವಂತೆ ತಿಳಿಸಿದರು.

    ಪ್ರಾಂಶುಪಾಲ ಬಿ.ಎಂ.ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಮಿತಿ ಸಂಚಾಲಕ ಡಾ.ಬಿ.ಡಿ.ಹರ್ಷ, ಸಹಾಯಕ ಪ್ರಾದ್ಯಾಪಕಿ ಕೆ.ಪಿ.ಕುಸುಮಾ, ಕ್ರೀಡಾ ಸಮಿತಿ ಸಂಚಾಲಕಿ ಪಿ.ಪಿ.ಜಯಂತಿ, ಡಾ.ಸುನೀಲ್‌ಕುಮಾರ್, ಮಧುಶ್ರೀ, ಸಾಂಸಕ್ರತಿಕ ಸಮಿತಿಯ ಟಿ.ಎಂ.ಸುಧಾಕರ್, ವಿದ್ಯಾರ್ಥಿ ಸಮಿತಿ ಉಪಾಧ್ಯಕ್ಷ ಬಿ.ಎಸ್.ಶಿವನ್‌ಕುಮಾರ್, ಕಾರ್ಯದರ್ಶಿ ಕೆ.ಎಸ್.ಗೌತಮ್, ಮಹಿಳಾ ಕಾರ್ಯದರ್ಶಿ ಎಂ.ಎಸ್.ಸಿಂಚನಾ, ಸಾಂಸ್ಕೃತಿಕ ಕಾರ್ಯದರ್ಶಿ ಕೆ.ವಿಜಯ್, ಮಹಿಳಾ ಘಟಕದ ಕಾರ್ಯದರ್ಶಿ ಅಂಜನ್ ಪ್ರಮೋದ್, ಕ್ರೀಡಾ ಕಾರ್ಯದರ್ಶಿ ಸಿ.ಎನ್.ಆಕಾಶ್, ಕ್ರೀಡಾ ಕಾರ್ಯದರ್ಶಿ ಎ.ಸ್ಮಿತಾ, ಜಂಟಿ ಕಾರ್ಯದರ್ಶಿ ಟಿ.ಎಸ್.ಹರ್ಷಾನಂದ, ಮಹಿಳಾ ವಿಭಾಗದ ಕೆ.ಆರ್.ಮಾಳವಿಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts