More

    ಉದ್ಯಾನವನಕ್ಕಾಗಿ ದೇಶದೆಲ್ಲೆಡೆ ಪವಿತ್ರ ಮಣ್ಣು ಸಂಗ್ರಹ

    ಮೂಡಿಗೆರೆ: ದೇಶಕ್ಕಾಗಿ ಬಲಿದಾನವಾಗಿರುವ ಪವಿತ್ರ ಸ್ಥಳ ಹಾಗೂ ಎಲ್ಲ ಮಠ ಮಂದಿರದಲ್ಲಿನ ಮಣ್ಣನ್ನು ದೆಹಲಿಯ ಉದ್ಯಾನವನದಲ್ಲಿ ಹಾಕಿ ಅದರ ಮೇಲೆ ಗಿಡಗಳನ್ನು ನೆಟ್ಟು ಪವಿತ್ರ ಉದ್ಯಾನವನ ಮಾಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
    ಸೋಮವಾರ ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಪವಿತ್ರ ಮಣ್ಣು ಸಂಗ್ರಹಿಸುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
    ದೇಶದಾದ್ಯಂತ ಎಲ್ಲೆಡೆಯಿಂದ ನಮ್ಮ ಸ್ವಾತಂತ್ರ್ಯ ಸೇನಾನಿಗಳು, ದೇಶಕ್ಕಾಗಿ ಗಡಿ ಪ್ರದೇಶದಲ್ಲಿ ಬಲಿದಾನವಾಗಿರುವ ಸ್ಥಳ ಹಾಗೂ ದೇಶದ ಎಲ್ಲ ಪವಿತ್ರ ದೇವಸ್ಥಾನ, ಮಠ ಮಂದಿರಗಳ ಸ್ಥಳದ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತಿದೆ. ಅದನ್ನು ನೆಹರು ಯುವಕ ಕೇಂದ್ರದ ಮೂಲಕ ಸರ್ಕಾರಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ದೆಹಲಿಗೆ ಕಳಿಸುತ್ತಾರೆ. ಅಲ್ಲಿ ನಿರ್ಮಾಣಗೊಳ್ಳುತ್ತಿರುವ ಉದ್ಯಾನವನದಲ್ಲಿ ಮಣ್ಣು ಜೋಡಣೆ ಮಾಡಿ ಆ ಮಣ್ಣಿನಲ್ಲಿ ಗಿಡಗಳನ್ನು ನೆಡುವ ಮೂಲಕ ಮೇರಾ ಮಿಟ್ಟಿ ಮೇರಾ ದೇಶ್ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಿಂದ ದೆಹಲಿಗೆ ಬರುವ ಪ್ರವಾಸಿಗರಿಗೆ ನಮ್ಮ ದೇಶದ ಪವಿತ್ರ ಮಣ್ಣು ಪರಿಚಯಿಸಿದಂತಾಗುತ್ತದೆ ಎಂದು ಹೇಳಿದರು.
    ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಪಪಂ ಸದಸ್ಯರಾದ ಪಿ.ಜಿ.ಅನುಕುಮಾರ್, ಸುಧೀರ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಮುಖಂಡರಾದ ದೀಪಕ್ ದೊಡ್ಡಯ್ಯ, ಮನೋಜ್ ಹಳೆಕೋಟೆ, ನಯನ ತಳವಾರ, ಪಟೇಲ್ ಮಂಜು, ಪ್ರಮೋದ್ ದುಂಡುಗ, ಅರ್ಚಕ ಮಹಾಬಲ ಕಾರಂತ್, ದೇವಸ್ಥಾನ ಸಮಿತಿ ಸದಸ್ಯ ಡಾ.ಅನಂತ್ ಪದ್ಮನಾಭ್, ಕುಮಾರ್, ಉಮಾಶಂಕರ್, ಟಿ.ಹರೀಶ್, ವೆಂಕಟೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts