More

    ಪ್ರತಿ ಮನೆಯಿಂದ ಕಾಣಿಕೆ ಸಂಗ್ರಹ

    ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿಮಾಣಕ್ಕೆ ನಿಧಿ ಸಮರ್ಪಣಾ ಮಹಾಅಭಿಯಾನದ ಅಂಗವಾಗಿ ನಗರದ ಗೋಕುಲ ರಸ್ತೆಯ ಕೇಶವ ಕುಂಜದಲ್ಲಿ ಮಂಗಳವಾರ ಅರ್ಚಕರ ಪೂರ್ವಭಾವಿ ಸಭೆ ಜರುಗಿತು.

    ಜ. 17ರಂದು ಹುಬ್ಬಳ್ಳಿ-ಧಾರವಾಡದ ಪ್ರತಿ ಮನೆಯಿಂದ ಹಣ ಸಂಗ್ರಹ ಕಾರ್ಯ ನಡೆಯಲಿದ್ದು, ಭಕ್ತರು ಕನಿಷ್ಠ 10 ರೂ.ಗಳಿಂದ ತಮ್ಮ ಭಕ್ತಿಗನುಸಾರ ಕಾಣಿಕೆ ನೀಡುವಂತೆ ಸಭೆಯಲ್ಲಿ ಕೋರಲಾಯಿತು.

    ದೇವಸ್ಥಾನಗಳಲ್ಲಿ ಭಕ್ತರಿಗೆ ಶ್ರೀ ರಾಮ ಮಂದಿರ ನಿರ್ವಣಕ್ಕಾಗಿ ನಡೆದ ಹೋರಾಟದ ಬಗ್ಗೆ ಮಾಹಿತಿ ನೀಡಬೇಕು. ಜ. 15ರಿಂದ ಫೆ. 5ರವರೆಗೆ ಪ್ರತಿ ಮಂದಿರದಲ್ಲಿ ಶ್ರೀ ರಾಮನ ಭಜನೆ, ಪ್ರತಿ ಮಂದಿರ, ಮಠಗಳಲ್ಲಿ ನಿತ್ಯ ಶ್ರೀ ರಾಮನ ಪೂಜೆ ಮಾಡಬೇಕು. ನಿಧಿ ಸಂಗ್ರಹಣೆಗೆ ಬರುವ ಕಾರ್ಯಕರ್ತರೊಂದಿಗೆ ಅರ್ಚಕರೂ ಭಕ್ತರ ಮನೆಗೆ ತೆರಳಬೇಕು ಎಂಬ ಸಲಹೆಗಳನ್ನು ವಿಶ್ವಹಿಂದು ಪರಿಷತ್ ಪ್ರಮುಖರು ನೀಡಿದರು.

    ವಿಎಚ್​ಪಿ ಉತ್ತರ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಮಹಾಬಲೇಶ್ವರ ಹೆಗಡೆ ಮಾತನಾಡಿ, ಶ್ರೀ ರಾಮ ಮಂದಿರ ರಾಷ್ಟ್ರದ ಮಂದಿರವಾಗಬೇಕು. ಮಂದಿರ ನಿರ್ವಣದಲ್ಲಿ ಪ್ರತಿಯೊಬ್ಬ ಹಿಂದುವಿನ ಕೊಡುಗೆ ಇರಬೇಕು ಎಂಬ ಕಾರಣದಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂದರು.

    ಹಿಂದು ಜಾಗರಣ ವೇದಿಕೆಯ ಉತ್ತರ ಕರ್ನಾಟಕ ಸಂಚಾಲಕ ಸು. ಕೃಷ್ಣಮೂರ್ತಿ ಮಾತನಾಡಿ, ದೇವರು ಇಲ್ಲವೆಂದರೆ ಧರ್ಮ ಇರುವುದಿಲ್ಲ. ಧರ್ಮ ಇರದಿದ್ದರೆ ಸಂಸ್ಕೃತಿ ಇರುವುದಿಲ್ಲ. ಸಂಸ್ಕೃತಿ ಇರದಿದ್ದರೆ ಎಲ್ಲೆಡೆ ಅರಾಜಕತೆ ತಲೆದೋರುತ್ತದೆ. ಹೀಗಾಗಿ ಸಮಾಜವನ್ನು ಜಾಗ್ರತಗೊಳಿಸಬೇಕು. ಜಾಗ್ರತ ಸಮಾಜ ಶ್ರೀ ರಾಮ ಮಂದಿರದ ಪ್ರಮುಖ ಉದ್ದೇಶಗಳಲ್ಲಿ ಒಂದು ಎಂದು ತಿಳಿಸಿದರು.

    ವಿಎಚ್​ಪಿ ಧಾರವಾಡ ವಿಭಾಗೀಯ ಕಾರ್ಯದರ್ಶಿ ವಿನಾಯಕ ತಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಚಕ ರವಿ ಆಚಾರ್ಯ ಮಾತನಾಡಿದರು. ಶ್ರೀ ರಾಮ ಮಂದಿರ ನಿರ್ವಣಕ್ಕೆ ನಡೆಯುತ್ತಿರುವ ನಿಧಿ ಸಮರ್ಪಣಾ ಮಹಾ ಅಭಿಯಾನದ ಸ್ಟಿಕರ್​ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts