More

    ಹಂಗಾಮು ಕಬ್ಬಿಗೆ ಎಫ್‌ಆರ್‌ಪಿ ಪ್ರಕಟ

    ಬೆಳಗಾವಿ: ಜಿಲ್ಲೆಯಲ್ಲಿ ಬೆಳೆಯಲಾದ ಕಬ್ಬು ಇಳುವರಿ ಆಧರಿಸಿ 2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ನ್ಯಾಯ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ದರ ನಿಗದಿ ಪಡಿಸಿ ರಾಜ್ಯ ಕಬ್ಬು ಅಭಿವೃದ್ಧಿ ಆಯುಕ್ತರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

    2019-20ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ 23 ಸಕ್ಕರೆ ಕಾರ್ಖಾನೆಗಳು ನುರಿಸಿದ ಕಬ್ಬು ಇಳುವರಿ ಆಧಾರದ ಪ್ರಸಕ್ತ ಸಾಲಿನ ಎಫ್‌ಆರ್‌ಪಿ ಘೋಷಣೆ ಮಾಡಲಾಗಿದೆ. ಅಲ್ಲದೆ, ಎಫ್‌ಆರ್‌ಪಿ ದರ ಮೇಲ್ಪಟ್ಟ ದರವನ್ನು ಕಾರ್ಖಾನೆಗಳು ಘೋಷಿಸಿರುವ ಹೆಚ್ಚುವರಿ ಮೊತ್ತದ ಮಾಹಿತಿ ಸಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ.

    ಹಂಗಾಮು ಕಬ್ಬಿಗೆ ಎಫ್‌ಆರ್‌ಪಿ ಪ್ರಕಟ

    ಜಿಲ್ಲಾಧಿಕಾರಿ ಎಚ್ಚರಿಕೆ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಇಳುವರಿ ಆಧರಿಸಿ ಜಿಲ್ಲಾಧಿಕಾರಿಗಳು ಎಫ್‌ಆರ್‌ಪಿ ಘೋಷಣೆ ಮಾಡಿದ್ದಾರೆ. ಇಳುವರಿ ಮತ್ತು ಎಫ್‌ಆರ್‌ಪಿ ದರ ಸಹಿತ ಸರ್ಕಾರ ನಿಗದಿ ಮಾಡಿರುವ ಕಟಾವು ಮತ್ತು ಸಾಗಣೆ ವೆಚ್ಚ ದರಗಳನ್ನೂ ಎಲ್ಲ ಕಾರ್ಖಾನೆಯವರು ಆವರಣದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಡಿಸಿ ಎಂ.ಜಿ.ಹಿರೇಮಠ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts