More

    ಕಬ್ಬಿನ ದರ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸಿ: ಸುಭಾಷ ಗುತ್ತೇದಾರ್​

    ಆಳಂದ: ಪ್ರಸಕ್ತ ಸಾಲಿನಲ್ಲಿ ರೈತರೊಂದಿಗೆ ಸಭೆ ನಡೆಸಿ ಕಬ್ಬಿನ ದರ ನಿಗದಿ ಮಾಡಿದ ನಂತರವೇ ಕಾರ್ಖಾನೆ ಆರಂಭಿಸಬೇಕೆAದು ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ್ ಆಗ್ರಹಿಸಿದ್ದಾರೆ.

    ಗುರುವಾರ ಪಟ್ಟಣದಲ್ಲಿ ಹೇಳಿಕೆ ನೀಡಿರುವ ಅವರು, 2022-23ನೇ ಸಾಲಿನಲ್ಲಿ ಪ್ರತಿ ಟನ್‌ಗೆ ರೂ. 2450 ರೂ. ನಿಗದಿಪಡಿಸಲಾಗಿತ್ತು. ಆದರೆ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ರೈತರಿಗೆ ಕೇವಲ 2400 ರೂ. ಮಾತ್ರ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದಿಂದ ಪ್ರತಿ ಟನ್‌ಗೆ ರೂ. 50 ಸಹಾಯಧನ ಒದಗಿಸಿದ್ದಾರೆ. ಅದೇ ಮೊತ್ತವನ್ನು ಸಕ್ಕರೆ ಕಾರ್ಖಾನೆಯಿಂದ ನೀಡಲಾಗಿದೆ ಎಂದು ರೈತರಿಗೆ ಕಾರ್ಖಾನೆಯ ಉಪಾಧ್ಯಕ್ಷರು ತಿಳಿಸಿರುತ್ತಾರೆ. ಆದರೆ ಕಳೆದ ವರ್ಷದ ಬಾಕಿ ಉಳಿದ 50 ರೂ.ಯನ್ನು ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.

    ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯನ್ನು 30ವರ್ಷಕ್ಕೆ ಲೀಸ್ ಪಡೆದಿದ್ದಾರೆ. ಅದರಲ್ಲಿ 14 ವರ್ಷ ಕಳೆದಿದ್ದು, ಇನ್ನೂ 16 ವರ್ಷ ಲೀಸ್ ಬಾಕಿಯಿದೆ. ಆದರೆ ಈಗಾಗಲೇ ಕಾರ್ಖಾನೆಯವರು ಇನ್ನೂ ಮತ್ತೆ 15 ವರ್ಷ ಲೀಸ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಲೀಸ್ ಮುಗಿಯುವವರೆಗೂ ಮತ್ತೆ ಹೊಸ ಲೀಸ್ ಅಗ್ರಿಮೆಂಟ್ ಮಾಡಬಾರದು ಮತ್ತು ಲೀಸ್ ಮುಗಿದ ನಂತರ ರೈತರ ಅಭಿಪ್ರಾಯ ಪಡೆದು ಲೀಸ್ ನೀಡಲು ಸರ್ಕಾರ ಮುಂದಾಗಬೇಕೆAದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts