More

    ಅಡಕೆ ಬೆಳೆಗೆ ಮಿಡತೆ ಕಾಟ

    ಶೃಂಗೇರಿ: ಅಡಕೆ ಹಳದಿ ಎಲೆ ರೋಗ, ಕಾಫಿ, ಕಾಳುಮೆಣಸಿಗೆ ಸೊರಗು ರೋಗ, ಹವಾಮಾನ ವೈಪರಿತ್ಯದಿಂದ ಬೆಳೆ ನಾಶ, ಬೆಳೆಗೆ ಸರಿಯಾಗಿ ಬೆಲೆ ಸಿಗದಿರುವುದು ಮುಂತಾದ ಸಮಸ್ಯೆಗಳಿಂದ ಹೈರಾಣಾಗಿರುವ ತಾಲೂಕಿನ ಬೆಳೆಗಾರರಿಗೆ ಮಿಡತೆ ಹಾವಳಿ ಹೊಸ ಸಂಕಷ್ಟ ತಂದಿದೆ.

    ತೆಕ್ಕೂರು ಗ್ರಾಪಂ ವ್ಯಾಪ್ತಿಯ ಕೊಚ್ಚವಳ್ಳಿ ಕೃಷಿಕ ಅಶೋಕ್ ಅವರ ತೋಟದಲ್ಲಿ ಭಾನುವಾರ ಕಾಣಿಸಿಕೊಂಡಿರುವ ಮಿಡತೆಗಳು ಮೂರು ದಿನಗಳಲ್ಲಿ ಸುಮಾರು ಹತ್ತು ಮರಗಳ ಎಲೆಗಳನ್ನು ಸಂಪೂರ್ಣ ತಿಂದುಹಾಕಿವೆ. ಮಂಗಳವಾರ ರಾತ್ರಿ ಟಾರ್ಚ್ ಬೆಳಕಿನಲ್ಲಿ ನೋಡಿದಾಗ ಒಂದೇ ಮರದಲ್ಲಿ ಸುಮಾರು 100ರಿಂದ 150 ಮಿಡತೆಗಳು ಕಂಡಿವೆ. ಇದರಿಂದ 25ರಿಂದ 30 ಅಡಕೆ ಮರಗಳು ಹಾನಿಗೀಡಾಗಿವೆ. ಒಂದು ಎಕರೆ 10 ಗುಂಟೆ ಜಾಗದಲ್ಲಿ ಅಡಕೆ ಬೆಳೆದಿರುವ ರೈತ ಅಶೋಕ್​ಗೆ ಮಿಡತೆ ಹಾವಳಿಯಿಂದ ತೋಟ ಸಂಪೂರ್ಣ ಹಾನಿಯಾಗುವ ಆತಂಕ ಎದುರಾಗಿದೆ.

    ಇತ್ತೀಚೆಗೆ ಎನ್.ಆರ್.ಪುರದ ಸೀತೂರು ಗ್ರಾಮದ ಹಲವು ಭಾಗಗಳಲ್ಲಿ ಮಿಡತೆಗಳು ಕಂಡುಬಂದಿದ್ದವು. ಈ ಮಿಡತೆಗಳು ಉತ್ತರ ಭಾರತದಲ್ಲಿ ಕಂಡುಬಂದಿರುವ ಮರುಭೂಮಿ ಮಿಡತೆಗಳಲ್ಲ. ಮಲೆನಾಡಿನ ಕಾಫಿ ತೋಟಗಳನ್ನು ಕಾಡುವ ಸಾಧಾರಣ ಗುಂಪಿಗೆ ಸೇರಿದ ಮಿಡತೆಗಳು. ಇವು ಸುಮಾರು 80 ಜಾತಿಯ ಬೆಳೆಗಳನ್ನು ತಿನ್ನುತ್ತವೆ. ಕಾಡಿನ ಪಕ್ಕದ ತೋಟಗಳಲ್ಲಿ ಅಥವಾ ಹೊಸದಾಗಿ ಮಾಡುವ ಕೃಷಿ ತೋಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts