More

    CODE RED! ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ವರದಿ ನೀಡಿದೆ, ಮಾನವರಿಗೆ ಎಚ್ಚರಿಕೆಯ ಕರೆ!

    ನವದೆಹಲಿ : ಹವಾಮಾನ ಬದಲಾವಣೆಯ ಕುರಿತಾದ ವಿಶ್ವ ಸಂಸ್ಥೆಯ ಅಂತರರಾಷ್ಟ್ರೀಯ ಸಮಿತಿ(ಐಪಿಸಿಸಿ)ಯು ಇಂದು ಸ್ಫೋಟಕ ಮಾಹಿತಿಗಳನ್ನುಳ್ಳ ತನ್ನ ಆರನೇ ಮೌಲ್ಯಮಾಪನ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯನ್ನು ಹವಾಮಾನ ವಿಜ್ಞಾನದ ಅತ್ಯಂತ ವಿವರವಾದ ವಿಮರ್ಶೆ ಎಂದು ಕರೆದಿರುವ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರು, ಇದು “ಮಾನವ ಜನಾಂಗಕ್ಕೆ ನೀಡಲಾಗಿರುವ ಕೋಡ್ ರೆಡ್​” ಎಂದಿದ್ದಾರೆ.

    ಸಮುದ್ರ ಮಟ್ಟದಲ್ಲಿ ಏರಿಕೆಯಂತಹ ಕೆಲವು ಬದಲಾವಣೆಗಳನ್ನು ನೂರರಿಂದ ಸಾವಿರಾರು ವರ್ಷಗಳವರೆಗೆ ಸರಿಪಡಿಸಲು ಸಾಧ್ಯವೇ ಆಗುವುದಿಲ್ಲ. ಆದರೆ ಕಾರ್ಬನ್​ ಡೈಆಕ್ಸೈಡ್​ ಮತ್ತು ಇತರ ಗ್ರೀನ್​ಹೌಸ್​ ಗ್ಯಾಸ್​ಗಳ ಮಟ್ಟದಲ್ಲಿ ಪರಿಣಾಮಕಾರಿ ಕಡಿತ ಮಾಡಿದಲ್ಲಿ ತಾಪಮಾನದಲ್ಲಾಗುತ್ತಿರುವ ಏರಿಕೆಯಂತಹ ಪ್ರತಿಕೂಲ ಹವಾಮಾನ ಬದಲಾವಣೆಗಳನ್ನು ತಡೆಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಸಿಖ್ಖರು, ಹಿಂದೂಗಳನ್ನು ತೆರವುಗೊಳಿಸಿ: ಕಾಂಗ್ರೆಸ್ ನಾಯಕನ ಮನವಿ

    ಈ ಸಮಿತಿಯ 195 ಸದಸ್ಯರಲ್ಲಿ ಭಾರತವೂ ಒಂದಾಗಿದ್ದು, ವಿಜ್ಞಾನಿಗಳು ಭೂಮಿಯ ಹವಾಮಾನದಲ್ಲಿನ ಬದಲಾವಣೆಗಳನ್ನು ಪ್ರತಿ ಪ್ರದೇಶದಲ್ಲಿ ಹಾಗೂ ಒಟ್ಟಾರೆಯಾಗಿ ಅಧ್ಯಯನ ಮಾಡುತ್ತಿದ್ದಾರೆ. ಇಂಗ್ಲೆಂಡಿನ ಗ್ಲಾಸ್​​ಗೋದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಈ ಸಮಿತಿ ಹೇಳಿರುವ ಪರಿಸರಸ್ನೇಹಿ ಕ್ರಮಗಳನ್ನು ಪಾಲಿಸಲು ಎಲ್ಲಾ ದೇಶಗಳೂ ಒಪ್ಪಿಕೊಳ್ಳಬೇಕಿದೆ. ಹಾಗೆ ಒಂದು ಪಕ್ಷ ಒಪ್ಪಿದಲ್ಲಿ ಕೂಡ ಜಾಗತಿಕ ತಾಪಮಾನವನ್ನು ಇಳಿಸಲು 20 ರಿಂದ 30 ವರ್ಷಗಳೇ ಬೇಕು. ಆದರೆ ಗಾಳಿಯ ಗುಣಮಟ್ಟದಲ್ಲಿ ತಕ್ಷಣದ ಪ್ರಯೋಜನ ಪಡೆಯಬಹುದು ಎನ್ನಲಾಗಿದೆ.

    ಐಪಿಸಿಸಿ ಮೌಲ್ಯಮಾಪನ ವರದಿಯ 8 ಮುಖ್ಯಾಂಶಗಳು ಹೀಗಿವೆ:-

    1. ಜಗತ್ತು ವೇಗವಾಗಿ ಬೆಚ್ಚಗಾಗುತ್ತಿದೆ. ಜಾಗತಿಕ ತಾಪನವು 2030 ರ ಸುಮಾರಿಗೆ 1.5 ಡಿಗ್ರಿ ಸೆಲ್ಸಿಯಸ್ ತಲುಪುವ ಹಾದಿಯಲ್ಲಿದೆ. ಇದು 2018 ರಲ್ಲಿ ಅಂದಾಜಿಸಿದ್ದಕ್ಕಿಂತ ಒಂದು ದಶಕ ಮುಂಚಿತವಾಗಿದೆ.
    2. ಸಮುದ್ರದ ಮಟ್ಟವು ವೇಗವಾಗಿ ಏರುತ್ತಿದೆ. 1901-1971 ರ ನಡುವಿನ ಸರಾಸರಿ ದರ 1.3 ಮಿಮೀ/ವರ್ಷ. ಇದು 2006-2018 ರ ನಡುವೆ 3.7 ಮಿಮೀ/ವರ್ಷಕ್ಕೆ ಹೆಚ್ಚಿದೆ. ಜಾಗತಿಕ ಸರಾಸರಿ ಸಮುದ್ರ ಮಟ್ಟವು 1901 ಮತ್ತು 2018 ರ ನಡುವೆ 0.20 (0.15 ರಿಂದ 0.25) ಮೀ ಹೆಚ್ಚಾಗಿದೆ.
    3. 1950 ರ ದಶಕದಿಂದಲೂ ಹೆಚ್ಚಿನ ಭೂಪ್ರದೇಶಗಳಲ್ಲಿ ಬಿಸಿ ವಿಪರೀತಗಳು(ಶಾಖದ ಅಲೆಗಳು ಸೇರಿದಂತೆ) ಹೆಚ್ಚು ಬಾರಿ ಮತ್ತು ಹೆಚ್ಚು ತೀವ್ರವಾಗುತ್ತಿವೆ. ಅದೇ ಶೀತದ ತೀವ್ರತೆಗಳು(ಶೀತ ಅಲೆಗಳು ಸೇರಿದಂತೆ) ಕಡಿಮೆ ತೀವ್ರತೆ ಹೊಂದಿವೆ.

    ಇದನ್ನೂ ಓದಿ: ಗ್ರಾಮ ಕೊಚ್ಚಿ ಹೋಗಿ ಎರಡು ವರ್ಷವಾದ್ರೂ ಪರಿಹಾರವಿಲ್ಲ! ನಾಡಕಛೇರಿ ಮುಂದೆ ಮೌನ ಪ್ರತಿಭಟನೆ

    4. ಮಾನವ-ಪ್ರೇರಿತ ಹವಾಮಾನ ಬದಲಾವಣೆಯು ಈ ಬದಲಾವಣೆಗಳ ಮುಖ್ಯ ಚಾಲಕವಾಗಿದೆ.
    5. ನಗರಗಳು ಜಾಗತಿಕ ತಾಪಮಾನದ ಹಾಟ್‌ಸ್ಪಾಟ್‌ಗಳಾಗಿವೆ. ಏಕೆಂದರೆ ಇವುಗಳು ಶಾಖವನ್ನು ಹಿಡಿದಿಟ್ಟುಕೊಳ್ಳುತ್ತವೆ, ಹಾಗೂ ನೀರು ಮತ್ತು ಸಸ್ಯವರ್ಗದಂತಹ ತಂಪಾಗಿಸುವ ಪ್ರದೇಶಗಳ ಕೊರತೆಯಿರುತ್ತದೆ.
    6. 10 ವರ್ಷಕ್ಕೊಮ್ಮೆ ಮತ್ತು 50 ವರ್ಷಕ್ಕೊಮ್ಮೆ ಸಂಭವಿಸುತ್ತಿದ್ದ ವಿಪರೀತ ಶಾಖ, ಭಾರೀ ಮಳೆ ಮತ್ತು ಬರಗಾಲದ ಘಟನೆಗಳು ಹೆಚ್ಚು ಆಗಾಗ್ಗೆ ಮತ್ತು ತೀವ್ರತೆರನಾಗಿ ಸಂಭವಿಸುತ್ತವೆ.
    7. ವಿಪರೀತ ಹವಾಮಾನ ಘಟನೆಗಳು ಹೆಚ್ಚಿನ ಪ್ರಮಾಣ, ಹೆಚ್ಚಿದ ಆವರ್ತನ, ಹೊಸ ಸ್ಥಳಗಳು, ವಿಭಿನ್ನ ಸಮಯ, ಹೊಸ ಸಂಯೋಜನೆಗಳಲ್ಲಿ ನಡೆಯುವ ಸಂಭವವಿರುತ್ತದೆ. ಅಂದರೆ ಎರಡು ಅಥವಾ ಹೆಚ್ಚು ವಿಪರೀತ ಘಟನೆಗಳು ಒಟ್ಟಾಗಿ ಸಂಭವಿಸುತ್ತವೆ, ಉದಾಹರಣೆಗೆ ಶಾಖದ ಅಲೆ ಮತ್ತು ಬರ.
    8. ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನವನ್ನು ಸೀಮಿತಗೊಳಿಸಬಹುದು. ಆದರೆ ಇದಕ್ಕಾಗಿ ತೀವ್ರ ಮತ್ತು ತಕ್ಷಣದ ಕ್ರಮಗಳ ಅಗತ್ಯವಿದೆ. ಇಂದಿನಿಂದ ಫಾಸಿಲ್​ ಫ್ಯುಯಲ್​​ಗಳನ್ನು ಸುಡುವಲ್ಲಿ ಮತ್ತು ಗ್ರೀನ್​ಹೌಸ್​​ ಅನಿಲಗಳನ್ನು ಹೊರಸೂಸುವ ಇತರ ಚಟುವಟಿಕೆಗಳಲ್ಲಿ ಕಡಿತ ತಂದರೆ ಇದು ಸಾಧ್ಯವಾದೀತು. (ಏಜೆನ್ಸೀಸ್)

    ಚಿನ್ನದ ಹುಡುಗನ ಸಾಧನೆಗಿತ್ತು, ಕನ್ನಡಿಗ ಕೋಚ್​​ನ ಬೆಂಬಲ : ಕ್ರೀಡಾ ಸಚಿವ ನಾರಾಯಣಗೌಡ

    ಸೆರೆ ಹಿಡಿದು 3 ದಿನವಾದ್ರೂ ಈ ಮಂಗಗಳಿಗೆ ಊಟ ಕೊಟ್ಟಿರಲಿಲ್ಲ!

    ಹಾಕಿ ಆಟಗಾರ್ತಿಗೆ ಗೌರವಗಳ ಬುತ್ತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರಾಯಭಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts