More

  ವಾಣಿವಿಲಾಸ ಆಸ್ಪತ್ರೆಯಲ್ಲಿ ಜಿರಳೆ ಕಾಟಕ್ಕೆ ನಲುಗಿದ ಎರಡು ದಿನದ ಹಸುಗೂಸೂ

  ಬೆಂಗಳೂರು: ರಾಜ್ಯ ಸರ್ಕಾರದ ಪ್ರತಿಷ್ಠಿತ ವಾಣಿವಿಲಾಸ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಜಿರಳೆ ಕಾಟ ವ್ಯಾಪಕವಾಗಿದ್ದು, ಇವುಗಳ ಕಾಟದಿಂದಾಗಿ ಎರಡು ದಿನದ ಹಸುಗೂಸು ನಲುಗಿ ಹೋಗಿದೆ.

  ಆಸ್ಪತ್ರೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ದು, ಎರಡು ದಿನದ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿದೆ. ಈ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿಯಲ್ಲಿ ಹೇಳಿದಾಗ ತಮಗೆ ಸಂಬಂಧವಿಲ್ಲದಂತೆ ವರ್ತಿಸಿದರು ಎಂದು ಪೋಷಕರು ಆರೋಪಿಸಿದ್ದಾರೆ.

  ನಾಗರಬಾವಿ ನಿವಾಸಿ ಆಶಾರಾಣಿ ಅವರು ಹೆರಿಗೆ ನೋವಿನಿಂದ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಾಯಿ – ಮಗು ಇಬ್ಬರು ಆರೋಗ್ಯವಾಗಿದ್ದರಿಂದ ವಾರ್ಡ್‌ಗೆ ಶ್‌ಟಿ ಮಾಡಲಾಗಿತ್ತು. ಆದರೆ ವಾರ್ಡ್ ಪೂರ್ತಿ ಜಿರಳೆಗಳ ಹಾವಳಿಯಿಂದ ತಾಯಿ ಮತ್ತು ಮಗು ನರಳುವಂತಾಗಿದೆ. ಮಗುವಿನ ಮೈಮೇಲ್ಲೆಲ್ಲಾ ಜಿರಳೆ ಹರಿದಾಡಿ ಮಗುವಿನ ಮೈತುಂಬ ಕೆಂಪು ದದ್ದುಗಳು ಕಾಣಿಸಿಕೊಂಡಿವೆ. ಸಮಸ್ಯೆ ಬಗ್ಗೆ ಹೇಳಿದರೂ ಬಡ್ ಹಾಗೂ ವಾರ್ಡ್ ಸ್ವಚ್ಛಗೊಳಿಸದ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಹೆಚ್ಚಾಗಿ ಬಡ ಹಾಗೂ ಮಧ್ಯಮ ವರ್ಗದ ಜನರೇ ಚಿಕಿತ್ಸೆಗೆ ಬರುವ ವಾಣಿವಿಲಾಸ ಆಸ್ಪತ್ರೆ ರೋಗಿಗಳಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಆಸ್ಪತ್ರೆಯಲ್ಲಿ ಹಾಸಿಗೆ ಸಂಖ್ಯೆ ಹೆಚ್ಚಳವಾಗಿದ್ದು, ಅತ್ಯಾಧುನಿಕ ಯಂತ್ರೋಪಕರಣಗಳು ಅವಳಕೆಯಾಗಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಅಲ್ಲದೆ ಈ ಹಿಂದೆ ಸ್ವಚ್ಛ ಆಸ್ಪತ್ರೆಗೆ ನೀಡಲಾಗುವ ಕಾಯಕಲ್ಪ ಪ್ರಶಸ್ತಿ ಪಡೆದಿದ್ದ ಆಸ್ಪತ್ರೆಯಲ್ಲಿ ಈಗ ಸ್ವಚ್ಛತೆಗೇ ಬರ ಬಂದಿರುವುದು ಶೋಚನೀಯ.

  ಜಿರಳೆ ಕಚ್ಚಿಲ್ಲ ಅಲರ್ಜಿ ಆಗಿದೆ: ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ, ಮಗುವಿಗೆ ಜಿರಳೆ ಕಚ್ಚಿಲ್ಲ. ಅಲರ್ಜಿ ಕಾಣಿಸಿಕೊಂಡಿದೆ. ಇದು ಮಕ್ಕಳಲ್ಲಿ ಸ್ವಾಭಾವಿಕವಾಗಿ ಕಂಡು ಬರುತ್ತದೆ. ಮಕ್ಕಳ ಚರ್ಮ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅಲರ್ಜಿ ಸಾಮಾನ್ಯ. ಆಸ್ಪತ್ರೆಯಲ್ಲಿ ಸ್ವಚ್ಛತೆ ಆದ್ಯತೆ ನೀಡಲಾಗಿದೆ. ಅಲ್ಲದೆ ವಾರ್ಡ್‌ನಲ್ಲಿ ಜಿರಳೆ ಸಮಸ್ಯೆ ಬಗ್ಗೆ ಪೋಷಕರು ನಮ್ಮ ಗಮನಕ್ಕೆ ತಂದಿಲ್ಲ ಎಂದು ತಿಳಿಸಿದ್ದಾರೆ.

  ವಾಣಿವಿಲಾಸ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೇರಿದ್ದು, ಆಗಿರುವ ಲೋಪ ಕುರಿತು ನಾನೂ ವಿಚಾರ ಮಾಡುತ್ತೇನೆ. ಆಸ್ಪತ್ರೆ ಹಾಸಿಗೆ ಸೇರಿ ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು. ಹಾಗೇನಾದರೂ ಲೋಪವಾಗಿದ್ದರೆ ಸಚಿವ ಶರಣಪ್ರಕಾಶ ಪಾಟೀಲ್ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಂದು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts