More

    ಡ್ರಗ್ಸ್​ ಪೆಡ್ಲರ್ಸ್ ವಿರುದ್ಧ ಸಿಸಿಬಿ ಸಮರ, ಕೊಕೇನ್ ಮಾರುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರ ಬಂಧನ

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮಾದಕ ವಸ್ತು ಮಾರಾಟ ಜಾಲ ಸಕ್ರಿಯವಾಗಿದ್ದು, ಮತ್ತಿಬ್ಬರು ಡ್ರಗ್ಸ್ ಪೆಡ್ಲರ್​ಗಳು ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಗೆದಷ್ಟೂ ಆಳ ಎಂಬಂತಾಗಿದೆ ಸಮಾಜಘಾತುಕರ ಜಾಲ.

    ಸಂಪಿಗೆಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ಯಲಹಂಹಕ ಬಳಿಯ ಅಗ್ರಹಾರ ಲೇಔಟ್​ನಲ್ಲಿ ನೈಜೀರಿಯಾ ಪ್ರಜೆಗಳಿಬ್ಬರು ಬಾಡಿಗೆ ಮನೆಯಲ್ಲಿ ಕೊಕೇನ್ ಸಂಗ್ರಹಿಸಿಟ್ಟುಕೊಂಡು ಅಕ್ರಮವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅವರಿದ್ದ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳಾದ ಕ್ರಿಶ್ಚಿಯನ್ ಓಝೋಮೆನಾ ಚಿಮೆರಿ(20) ಮತ್ತು ಒಕೊಂಕೊ ಬೆಂಜಮಿನ್ ಚುಕ್ವುಡಿ(30) ಎಂಬ ನೈಜೀರಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ. ಅವರ ಬಳಿಯಿದ್ದ 14.5 ಗ್ರಾಂ ತೂಕದ ಕೊಕೇನ್​, 2 ದ್ವಿಚಕ್ರ ವಾಹನ, 3 ಮೊಬೈಲ್​​, ತೂಕದ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿರಿ ಲಾಕ್​ಡೌನ್​ ವೇಳೆ ಗಾಂಜಾ ಮಾರಾಟ, ಮನೆಯಲ್ಲಿರೋ ವಿದ್ಯಾರ್ಥಿಗಳೇ ಇವರ ಟಾರ್ಗೆಟ್ !

    ನೈಜೀರಿಯಾ ದೇಶದಿಂದ ಬಿಸಿನೆಸ್​ ವೀಸಾದಲ್ಲಿ ಭಾರತಕ್ಕೆ ಬಂದ ಆರೋಪಿಗಳು ಡ್ರಗ್ಸ್​ ಮಾರಾಟ ಮಾಡುತ್ತಿದ್ದಾರೆ. ನೈಜೀರಿಯಾ ಮೂಲದ ವ್ಯಕ್ತಿಯಿಂದಲೇ ಕೊಕೇನ್​ ಖರೀದಿಸಿ ಅದನ್ನು ಮನೆಯಲ್ಲೇ ಇಡ್ಟುಕೊಂಡು ತಮ್ಮದೇ ವ್ಯವಸ್ಥಿತ ರೀತಿಯಲ್ಲಿ ಡ್ರಗ್ಸ್​ ಜಾಲ ಸಂಘಟಿಸಿಕೊಂಡು ಪರಿಚಿತ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್​ ಆಯುಕ್ತ ಸಂದೀಪ್​ ಪಾಟೀಲ್​, ಉಪ ಪೊಲೀಸ್​ ಆಯುಕ್ತ ಕುಲದೀಪ್​ ಕುಮಾರ್​ ಆರ್​. ಜೈನ್​ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್​ ಆಯುಕ್ತ ಕೆ.ಸಿ.ಗೌತಮ್​ ನೇತೃತ್ವದ ತಂಡ ಡ್ರಗ್ಸ್ ಪೆಡ್ಲರ್​ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್​ ಇನ್​ಸ್ಪೆಕ್ಟರ್​ಗಳಾದ ಜಿ.ಲಕ್ಷ್ಮೀಕಾಂತಯ್ಯ, ಹಜರೇಶ್​ ಕಿಲ್ಲೇದಾರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

    ಹಸುಗೂಸನ್ನು ಬಾಳೆಎಲೆಯಲ್ಲಿ ಸುತ್ತಿ ಹೋಟೆಲ್​ನ ಕಸದ ತೊಟ್ಟಿಯಲ್ಲಿ ಎಸೆದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts