More

    ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಕೋಕಾಕೋಲಾ ಬಾಟಲಿ ಬದಿಗೆ ಸರಿಸಲಿಲ್ಲವೆಂದು ಬೇಸರಿಸಿದ ಫ್ಯಾನ್ಸ್!

    ನವದೆಹಲಿ: ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ವೇಳೆ ಸುದ್ದಿಗೋಷ್ಠಿಯಲ್ಲಿ ಕೋಕಾಕೋಲಾದ ಬಾಟಲಿಗಳನ್ನು ಬದಿಗೆ ಸರಿಸಿ ಆ ಕಂಪನಿಗೆ ಷೇರುಪೇಟೆಯಲ್ಲಿ ಸುಮಾರು 30 ಸಾವಿರ ಕೋಟಿ ರೂಪಾಯಿ (4 ಶತಕೋಟಿ ಡಾಲರ್) ನಷ್ಟಕ್ಕೆ ಕಾರಣರಾಗಿದ್ದ ಪೋರ್ಚುಗಲ್ ುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ನಡೆ ಟೂರ್ನಿಯಲ್ಲಿ ಪಾಲ್ಗೊಂಡ ಇತರ ಕೆಲ ತಾರೆಯರಿಗೂ ಸ್ಫೂರ್ತಿಯಾಗಿತ್ತು. ಇದರ ಬೆನ್ನಲ್ಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಇದೇ ರೀತಿ ಮಾಡುವರೇ ಎಂಬ ಕುತೂಹಲ ಹರಡಿತ್ತು. ಆದರೆ ಗುರುವಾರ ಸುದ್ದಿಗೋಷ್ಠಿಯ ವೇಳೆ ಕೊಹ್ಲಿ ತಮ್ಮ ಟೇಬಲ್ ಮೇಲಿದ್ದ ಕೋಕಾಕೋಲಾ ಬಾಟಲಿಗಳ ಸುದ್ದಿಗೆ ಹೋಗಲಿಲ್ಲ. ಇದು ಸಾಮಾಜಿಕ ಜಾಲತಾಣದಲ್ಲಿ ಅವರ ಕೆಲ ಅಭಿಮಾನಿಗಳ ಸಿಟ್ಟು, ಆಕ್ರೋಶ, ನಿರಾಸೆಗೂ ಕಾರಣವಾಗಿದೆ.

    ನ್ಯೂಜಿಲೆಂಡ್ ವಿರುದ್ಧದ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಮುನ್ನಾದಿನ ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಟೇಬಲ್ ಮೇಲೆಯೂ ಕೋಕ್ ಬಾಟಲಿಗಳಿದ್ದವು. ಕೊಹ್ಲಿ ಅದನ್ನೂ ಪಕ್ಕಕ್ಕೆ ಸರಿಸಲಿ ಎಂದು ಕ್ರಿಕೆಟ್ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ‘ಹಟಾವೋ ಕೋಕಾಕೋಲಾ’ಎಂಬ ಹ್ಯಾಷ್‌ಟ್ಯಾಗ್ ಮೂಲಕ ಟ್ವಿಟರ್ ಟ್ರೆಂಡಿಂಗ್ ಕೂಡ ಆರಂಭಿಸಿದ್ದರು. ಆದರೆ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಹೊರನಡೆದರು. ಪ್ರಾಯೋಜಕತ್ವ ಕಂಪನಿಗಳ ಬಾಟಲಿಗಳನ್ನು ಮುಟ್ಟುವ ತಂಟೆಗೆ ಕೊಹ್ಲಿ ಹೋಗಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಬಗ್ಗೆ ಕಿಡಿಕಾರಿದ್ದು, ರೊನಾಲ್ಡೊಗೆ ಇರುವ ಕಳಕಳಿ ಕೊಹ್ಲಿಗೆ ಯಾಕಿಲ್ಲ ಎಂದೂ ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: VIDEO | 45 ಮೀಟರ್ ದೂರದಿಂದ ಗೋಲು, ಯುರೋ ಕಪ್‌ನಲ್ಲಿ ಹೊಸ ದಾಖಲೆ!

    ಇನ್ನು ಕೆಲವರು ಕ್ರಿಕೆಟ್ ತಾರೆ ಕೊಹ್ಲಿ ಕೋಕಾಕೋಲಾ ಬಾಟಲಿಯನ್ನು ಪಕ್ಕಕ್ಕೆ ಸರಿಸದಿರುವ ಕಾರಣದಿಂದಾಗಿ ಆ ಕಂಪನಿಗೆ ಈ ಬಾರಿ 60 ಸಾವಿರ ಕೋಟಿ ರೂ. ಲಾಭವಾಗಬಹುದು ಎಂದೂ ನಗೆ ಚಟಾಕಿ ಹಾರಿಸಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಮುನ್ನ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲ್ ತುಂಬಿದ ಬಾಟಲ್ ಪಕ್ಕಕ್ಕೆ ಸರಿಸಿದರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು ಎಂಬ ಜೋಕ್ಸ್‌ಗಳೂ ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

    ನೀರು ಕುಡಿದ ಆಟಗಾರ- ಕೋಕಾಕೋಲಾ ಕಂಪೆನಿಗೆ 30 ಸಾವಿರ ಕೋಟಿ ರೂ ನಷ್ಟ! ಇದೇನು ವಿಚಿತ್ರ ಅಂತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts