More

    ಸಹಕಾರಿ ರಂಗಕ್ಕೆ ಅರಿಹಂತ ಮಾದರಿ

    ಬೋರಗಾಂವ: ಮೂರು ದಶಕಗಳಿಂದ ಸಹಕಾರಿ ಹಿರಿಯ ಧುರೀಣ ರಾವಸಾಹೇಬ ಪಾಟೀಲ ನೇತೃತ್ವದಲ್ಲಿ ಅರಿಹಂತ ಸಂಸ್ಥೆಯು ವಿವಿಧ ರಂಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ಸಹಕಾರಿ ರಂಗಕ್ಕೆ ಮಾದರಿಯಾಗಿದೆ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್ ಅಮಿತ್ ಕೋರೆ ಹೇಳಿದ್ದಾರೆ.

    ಸಮೀಪದ ಅಂಕಲಿ ಗ್ರಾಮದಲ್ಲಿ ಸೋಮವಾರ ಬೋರಗಾಂವ ಅರಿಹಂತ ಸೌಹಾರ್ದ ಸಂಸ್ಥೆಯ 46ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಅಂಕಲಿ ಗ್ರಾಮದಲ್ಲಿ ಅರಿಹಂತ ಸಂಸ್ಥೆಯ ಶಾಖೆ ಸ್ಥಾಪನೆಯಿಂದ ರೈತರು, ವ್ಯಾಪಾರಸ್ಥರು ಹಾಗೂ ಸದಸ್ಯರಿಗೆ ಅನುಕೂಲವಾಗಲಿದೆ ಎಂದರು. ಮಾಜಿ ಶಾಸಕ ಕೆ.ಪಿ.ಮಗೆಣ್ಣವರ ಅವರು ಪೂಜೆ ನೆರವೇರಿಸಿ ಶಾಖೆ ಉದ್ಘಾಟಿಸಿದರು.

    ಸಂಸ್ಥೆಯ ಕಾರ್ಯಾಧ್ಯಕ್ಷ ಅಭಿನಂದನ ಪಾಟೀಲ ಮಾತನಾಡಿ, ಬೋರಗಾಂವ ಪಟ್ಟಣ ಸೇರಿ ಬೆಳಗಾವಿ ಜಿಲ್ಲೆಯಲ್ಲಿ 46 ಶಾಖೆ ಒಳಗೊಂಡ ಸಂಸ್ಥೆಯು 751 ಕೋಟಿ ರೂ.ಗಿಂತ ಹೆಚ್ಚು ಠೇವು ಸಂಗ್ರಹಿಸಿ, 552 ಕೋಟಿ ರೂ.ಗೂ ಹೆಚ್ಚು ಸಾಲ ವಿತರಿಸಿದೆ. ಎಲ್ಲರೂ ಅಂಕಲಿಯಲ್ಲಿ ಆರಂಭಿಸಲಾದ ಶಾಖೆಯ ಲಾಭ ಪಡೆಯಬೇಕು ಎಂದು ಕೋರಿದರು.

    ಮುಖಂಡ ಉತ್ತಮ ಪಾಟೀಲ, ಉದ್ಯಮಿ ಅಭಿನಂದನ ಪಾಟೀಲ, ಮಲ್ಲಿಕಾರ್ಜುನ ಕೋರೆ, ಸತೀಶ ಕೋರೆ, ಜಗದೀಶ ಕೋರೆ, ಭಾವುಸಾಹೇಬ ಪಾಟೀಲ, ಧೂಳಗೊಂಡ ಪಾಟೀಲ, ಭರತ ಬನವಣೆ, ರಣಜೀತ ಶಿರಸಾಟ, ಸಮ್ಮೇದ್ ಕಾತ್ರಾಳೆ, ಅಮರ ಯಾದವ, ರಾಕೇಶ ಚಿಂಚಣೆ, ದುರ್ಯೋಧನ ವಸವಾಡೆ, ಸನತ ಪಾಟೀಲ, ಪಾಸಗೌಡ ಪಾಟೀಲ, ಮಹಾವೀರ ಪಾಟೀಲ, ಜೋತಿರಾಂ ಯಾದವ, ಅಮೋಲ ನಾಯಿಕ್, ಸುಭಾಷ ಶೆಟ್ಟಿ, ಅಶೋಕ ಬಂಕಾಪುರೆ, ಬಾಹುಬಲಿ ಪಟ್ಟಣಕುಡೆ, ಸುನೀಲ ಕೋರೆ, ಅನಿಲ ಕಲಾಜೆ, ಅಭಯಕುಮಾರ ಮಗದುಮ್ಮ, ರಾಜು ಮಗದುಮ್ಮ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts