More

    ಹರ್ಲಾಪುರ ಸಹಕಾರಿ ಬ್ಯಾಂಕ್​ ಹಗರಣ! ತನಿಖೆ ನಡೆಸುವಂತೆ ಇಲಾಖೆಯಿಂದ ಆದೇಶ! 10 ವರ್ಷದ ಅವಧಿ ತನಿಖೆಗೆ ಜಿಲ್ಲಾ ನಿಬಂಧಕರ ಆದೇಶ

    ಶಿವಾನಂದ ಹಿರೇಮಠ, ಗದಗ
    ರೈತರಿಗೆ ಕೃಷಿ ಪತ್ತು ಮಂಜೂರಾತಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿ, ರೈತರಿಗೆ ಶೂನ್ಯಬಡ್ಡಿದರಲ್ಲಿ ಬೆಳೆ ಸಾಲ ಸಿಗದಂತೆ ಅಕ್ರಮ ಎಸಗಿದ್ದ ತಾಲೂಕಿನ ಹರ್ಲಾಪುರ ಗ್ರಾಮದ ಸಹಕಾರಿ ಪತ್ತಿನ ಕಳೆದ 10 ವರ್ಷದ ಲೆಕ್ಕಪತ್ರ ತನಿಖೆ ನಡೆಸಿ ತನಿಖೆ ನಡೆಸುವಂತೆ ಜಿಲ್ಲಾ ಸಹಕಾರ ಸಂಗಳ ಸಹಾಯಕ ನಿಬಂಧಕರು ಕೆಸಿಸಿ ಬ್ಯಾಂಕ್​ ಜಿಲ್ಲಾ ನಿಯಂತ್ರಕರಿಗೆ ಆದೇಶಿಸಿದೆ.
    ಹರ್ಲಾಪುರ ಸಹಕಾರಿ ಬ್ಯಾಂಕ್​ ಅವ್ಯವಹಾರ ಬಗ್ಗೆ ವಿಜಯವಾಣಿ ದಿನಪತ್ರಿಕೆ ನಿರಂತರ ಸುದ್ದಿ ಪ್ರಕಟಿಸಿತ್ತು. ಪ್ರಕರಣ ಗಂಭಿರವಾಗಿ ಪರಿಗಣಿಸಿರುವ ಹಿನ್ನೆಲೆ ಅ.17 ರಂದು ಆದೇಶ ಮಾಡಿರುವ ಸಹಾಯಕ ನಿಬಂಧಕರು ಎರಡು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡಲು ಕಟ್ಟುನಿಟ್ಟಿನ ಆದೇಶ ಮಾಡಿದೆ.

    ಆದೇಶದಲ್ಲಿ ಏನಿದೆ?
    ಸಹಕಾರ ಸಂಗಳ ನಿರೀಕ್ಷಕರು ಹರ್ಲಾಪುರ ಸಹಕಾರಿ ಪತ್ತಿನ ವಿಚಾರಣೆ ನಡೆಸಿ ಈಗಾಗಲೇ ವರದಿ ಸಲ್ಲಿಸಿರುತ್ತಾರೆ. ಸಹಕಾರಿ ಪತ್ತಿನ​ ಮುಖ್ಯ ಕಾರ್ಯನಿರ್ವಾಹಕ ಎಸ್​.ಕೆ. ದೇಸಾತಿ ಅವರು ನ.14, 2014 ರಿಂದ ಜ.6, 2015ರ ವರೆಗೆ ನಗದು ಪುಸ್ತಕದಲ್ಲಿ ಸಹಿ ಮಾಡಿದ್ದಾರೆ. 2015 ರ ನಂತರ ಕೃಷಿ ಪತ್ತು ಮಂಜೂರಾತಿ ಮಾಡಿದ ಬಗ್ಗೆ, ಬ್ಯಾಂಕ್​ ನಿರೀಕ್ಷಕರು ಪತ್ತು ಮಂಜೂರಾತಿ ಪರಿಶೀಲಿಸಿದ ಬಗ್ಗೆ ಸಹಿ ಮಾಡಿಲ್ಲ. ಈ ಹಿನ್ನೆಲೆ ನಿಯಮಾನುಸಾರ ರೈತರಿಗೆ ಸಾಲ ವಿತರಣೆಯಲ್ಲಿ ಆಗಿಲ್ಲ. ಸದಸ್ಯರ ಹೆಸರಿಗೆ ಸಾಲ ಮಂಜೂರಾತಿ ಮಾಡಿ, ಸಾಲವನ್ನು ಸದಸ್ಯರ ಖಾತೆಗೆ ಜಮೆ ಮಾಡದೆ ವೈಯಕ್ತಿಕವಾಗಿ 70.69 ಲಕ್ಷ ದುರುಪಯೋಗ ಮಾಡಿದ್ದು ಕಂಡು ಬಂದಿದೆ. ಹೀಗಾಗಿ ಅವ್ಯವಹಾರದ ಬಗ್ಗೆ ಸತ್ಯಾಸತ್ಯತೆ ತಿಳಿಯಲು, ಅವ್ಯವಹಾರ ಜರುಗಿದ್ದರೇ ಸಂಬಂಧಿಸಿದವರ ಮೇಲೆ ಸಹಕಾರ ಸಂಗಳ ಕಾಯ್ದೆ 1959 ಕಲಂ 65(1) ಅನುಸಾರ ಕ್ರಮ ಜರುಗಿಸುವುದು ಅವಶ್ಯಕವಾಗಿದ್ದು, ಎರಡು ತಿಂಗಳ ಒಳಗಾಗಿ ್ಯಾಕ್ಸ್​ ವರದಿ ಪರಿವೀಕ್ಷಣೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ನಿಯಂತ್ರಕ ಬಿ.ಎಂ. ಮುಧೋಳ ಅವರಿಗೆ ಆದೇಶ ಮಾಡಲಾಗಿದೆ.

    ಅಕ್ರಮಗಳೇನು?
    ಮೂಲಗಳ ಪ್ರಕಾರ 2018 ರಿಂದ ಇಚೇಗೆ ್ಯಾಕ್ಸ್​ ವ್ಯವಹಾರ ಕ್ರಮಬದ್ಧವಾಗಿಲ್ಲ. ರೈತರಿಗೆ ಕೃಷಿ ಪತ್ತು ಮಂಜುರಾತಿಗಾಗಿ ನಡೆದ ಸಾಮಾನ್ಯ ಸಭೆ ದಾಖಲೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಸಹಿಗಳಿಲ್ಲ. ನಗರದು ಸ್ವೀಕಾರ ಪುಸ್ತಕದಲ್ಲಿ ಕಳೆದ 8 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕರ ಸಹಿ ಇಲ್ಲ. ಬ್ಯಾಂಕಿನಿಂದ ಸಾಲ ಮಂಜೂರಾತಿ ಮಾಡಿಕೊಂಡು ವೈಯಕ್ತಿಕವಾಗಿ ಬಳಸಿಕೊಳ್ಳಲಾಗಿದೆ. ಸಹಕಾರಿ ಪತ್ತಿನ​ ವ್ಯವಹಾರ ತನಿಖೆ ನಡೆಸಿದ ಕುರಿತು ಲೆಕ್ಕಪತ್ರಗಳಲ್ಲಿ ಸಹಕಾರ ಸಂಗಳ ನಿರೀಕ್ಷಕರ ಸಹಿಯೂ ಇಲ್ಲ. ಸಾಮಾನ್ಯ ಸಭೆಗಳಲ್ಲಿ ಕೋರಂ ಇಲ್ಲದೇ ಕೇವಲ 4 ರಿಂದ 5 ಜನ ಸೇರಿ ಠರಾವುಗಳನ್ನು ಪಾಸು ಮಾಡಿಕೊಳ್ಳಲಾಗಿದೆ. ಠರಾವು ಪಾಸು ಮಾಡಿದ ದಾಖಲೆಗಳಲ್ಲಿ ಸಂಬಂಧಿಸಿದ ಆಡಳಿತ ಮಂಡಳಿ ಮತ್ತು ಸದಸ್ಯರ ಸಹಿಗಳಿಲ್ಲ. ಜತೆಗೆ ಕೃಷಿ ಪತ್ತು ಮಂಜೂರಾತಿ ಠರಾವು ಪಾಸು ಮಾಡಿದ ನಂತರ ಸದಸ್ಯ ರೈತರಿಗೆ ಈ ಬಗ್ಗೆ ಮಾಹಿತಿ ನೀಡದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಬಾಕಿ ಸಾಲ ಮರುಪಾವತಿಯಲ್ಲಿ ಬಹುದೊಡ್ಡ ಗೋಲ್​ಮಾಲ್​ ನಡೆದಿದೆ ಎನ್ನಲಾಗಿದೆ. ರೈತರಿಂದ 1 ಲಕ್ಷ ಮರು ಪಾವತಿ ಸಾಲ ಪಡೆದ ್ಯಾಕ್ಸ್​ ಅಧಿಕಾರಿಗಳು ಕೆಸಿಸಿ ಬ್ಯಾಂಕ್​ಗೆ 10 ಸಾವಿರ ಪಾವತಿ ಮಾಡಿದ್ದಾರೆ. ರೈತರಿಗೆ 1 ಲಕ್ಷ ಸಾಲ ಮರುಪಾವತಿ ಮಾಡಿದ ರಸೀದಿ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.

    ಎಲ್ಲವೂ ಗೊಂದಲ:
    ಪ್ರಕರಣ ಬೆಳಕಿಗೆ ಬಂದ ನಂತರ ಎಸ್​.ಕೆ. ದೇಸಾಯಿ 70 ಲಕ್ಷ ಮರುಪಾವತಿ ಮಾಡಿದ್ದಾರೆ. ಆದರೆ, ಮೂಲಗಳ ಪ್ರಕಾರ ದಾಖಲೆಯಲ್ಲಿ 65 ಲಕ್ಷ ಮರುಪಾವತಿ ದಾಖಲಾಗಿರುವ ಬಗ್ಗೆ ಮಾಹಿತಿ ಇದೆ. ಆದರೆ, ್ಯಾಕ್ಸ್​ ಆಡಳಿತ ಮಂಡಳಿ ಕೆಲವು ಸದಸ್ಯರ ಪ್ರಕಾರ 1 ಕೋಟಿಗೂ ಅಧಿಕ ಅವ್ಯವಹಾರ ಜರುಗಿದೆ ಎಂದು ಹೇಳಲಾಗುತ್ತಿದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

    ಮಳೆಯೂ ಇಲ್ಲ, ಬೆಳೆ ಸಾಲವೂ ಇಲ್ಲ:
    ಹರ್ಲಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ 2018ರಿಂದ ಲೆಕ್ಕಪತ್ರ ವ್ಯವಹಾರ ಸರಿ ಇಲ್ಲ. ರೈತರಿಗೆ 2.38 ಕೋಟಿಗೂ ಅಧಿಕ ಸಾಲ ನೀಡಲಾಗಿತ್ತು. ರೈತರು ಮರು ಪಾವತಿ ಮಾಡಿದ್ದು, ತಮ್ಮ ಸಾಲದ ಖಾತೆಗಳನ್ನು ನವೀಕರಣ ಮಾಡಿದ್ದಾರೆ. ಆದರೆ, ರೈತರು ಮರು ಪಾವತಿ ಮಾಡಿದ 1 ಕೋಟಿಗೂ ಅಧಿಕ ಹಣವನ್ನು ಬ್ಯಾಂಕಿನ್​ ಕಾರ್ಯದಶಿರ್ ಎಸ್​.ಕೆ. ದೇಸಾಯಿ ಎಂಬುವರು ಕೆಸಿಸಿ ಬ್ಯಾಂಕಿಗೆ ವರ್ಗಾಯಿಸಿರಲಿಲ್ಲ ಎಂಬ ಆರೋಪವಿದೆ. ಈ ನಡುವೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲಕ್ಕಾಗಿ ರೈತರು ಬ್ಯಾಂಕಿಗೆ ಅಜಿರ್ ಸಲ್ಲಿಸಿದ್ದಾರೆ. “ಈ ಹಿಂದಿನ ಸಾಲದ ಮರುಪಾವತಿ ಆಗಿಲ್ಲ. ಹೀಗಾಗಿ ಸಾಲ ಮಂಜೂರು ಸಾಧ್ಯವಿಲ್ಲ’ ಎಂದು ಕೆಸಿಸಿ ಬ್ಯಾಂಕ್​ ಅಧಿಕಾರಿಗಳು ಉತ್ತರಿಸಿದ್ದಾರೆ. ರೈತರು ಸಾಲ ಪಾವತಿಸಿ ಖಾತಾ ನವೀಕರಣ ಮಾಡಿದ್ದನ್ನು ಮನವರಿಕೆ ಮಾಡಿಕೊಟ್ಟದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಕಾರ್ಯದಶಿರ್ ಎಸ್​.ಕೆ. ದೇಸಾಯಿ ಅವರ ಅಕ್ರಮ ಬಯಲಿಗೆ ಬಂದು ಅವರನ್ನು ಅಮಾನತ್ತು ಮಾಡಲಾಗಿತ್ತು. 70 ಲಕ್ಷ ರೂ. ಗಳನ್ನು ಎಸ್​.ಕೆ. ದೇಸಾಯಿ ಕೆಸಿಸಿ ಬ್ಯಾಂಕ್​ ಗೆ ಪಾವತಿಸಿದ್ದು, ಇನ್ನೂ 30 ಲಕ್ಷಕ್ಕೂ ಅಧಿಕ ಹಣ ಕೆಸಿಸಿ ಬ್ಯಾಂಕ್​ ಗೆ ಮರು ಪಾವತಿ ಆಗಬೇಕಿದೆ. ಈ 30 ಲಕ್ಷ ಪಾವತಿ ಆದ ನಂತರ ಬೆಳೆ ಸಾಲ ಮಂಜೂರು ಮಾಡುತ್ತೇವೆ ಎಂದು ಕೆಸಿಸಿ ಬ್ಯಾಂಕ್​ ಅಧಿಕಾರಿಗಳು ರೈತರಿಗೆ ಉತ್ತರಿಸಿದ್ದಾರೆ. ಈ ಹಿನ್ನೆಲೆ ರೈತರಿಗೆ ಕಳೆದ 9 ತಿಂಗಳಿಂದ ಪ್ರಸಕ್ತ ಸಾಲಿನ ಬೆಳೆ ಸಾಲವೂ ಸಿಕ್ಕಲ್ಲ. ರೈತರ ಹಣವೂ ದುರುಪಯೋಗವಾಗಿದ್ದು ಕಂಡುಬಂದಿದೆ.

    ಕೋಟ್​:
    ಕಳೆದ ಹತ್ತು ವರ್ಷದ ಅವಧಿ ಲೆಕ್ಕಪತ್ರ ತನಿಖೆ ನಸುವಂತೆ ಸಹಾಯಕ ನಿಬಂಧಕರು ಆದೇಶ ಮಾಡಿದ್ದಾರೆ. ಸಹಕಾರಿ ಬ್ಯಾಂಕ್​ ಗೆ ಸಂಪನ್ಮೂಲ ಕ್ರೂಢಿಕರಣ ಮತ್ತು ಹಣ ಬಳಕೆ ಕುರಿತು ತನಿಖೆ ನಡೆಸಲಾಗುವುದು. ಆಡಳಿತಾತ್ಮಕ ಮತ್ತು ಕಾನೂನೂನಾತ್ಮಕ ಪ್ರಕ್ರಿಯೆ ಜರುಗಿಸಲಾಗುವುದು.
    – ಬಿ.ಎಂ. ಮುಧೋಳ, ಜಿಲ್ಲಾ ನಿಯಂತ್ರಕ, ಕೆಸಿಸಿ ಬ್ಯಾಂಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts